5 ಮಿಲಿಯನ್ ಗಡಿ ದಾಟಿದ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೇಲರ್..!!

22 Jan 2019 6:01 PM | Entertainment
195 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ  ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು ಇದೇ ತಿಂಗಳ 25 ಕ್ಕೆ ತೆರೆ ಮೇಲೆ ಬರಲಿದೆ.,   ಸಿನಿಮಾ ಸೆಟ್ಟೇರಿದ್ದ ದಿನದಿಂದಲೂ ಇಲ್ಲಿವರೆಗೂ ಸದ್ದು ಮಾಡುತ್ತಲೇ ಬಂದಿದೆ. ಸಿನಿಮಾದಲ್ಲಿ ರಚಿತಾರಾಂ ನಾಯಕಿಯಾಗಿ ನಟಿಸಿದ್ದೂ, ಬಿಡುಗಡೆಯ ಹಂತ ತಲುಪಿದೆ. ನಿಖಿಲ್ ಕುಮಾರ ಸ್ವಾಮಿಗೆ ಈ ಚಿತ್ರ ಬ್ರೇಕ್ ತಂದು ಕೊಡುವ ನಿರೀಕ್ಷೆಯೂ  ಕೂಡ ಇದೆ. ಒಟ್ಟಾರೆ ಸೀತಾರಾಮ ಕಲ್ಯಾಣ ಟ್ರೇಲರ್ ಗೆ ಭರ್ಜರಿಯಾಗಿಯೇ  ಬಿಡುಗಡೆಯಾಗಿದೆ.  ಅಷ್ಟೆ ಅಲ್ಲದೆ ಸಿನಿ ರಸಿಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ..

ಇದೀಗ ಸೀತಾರಾಮ ಕಲ್ಯಾಣ' ಸಿನಿಮಾದ ಟ್ರೇಲರ್ ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ಹಿಟ್ ಕಂಡಿದೆ... ಇದೀಗ ಈ ಚಿತ್ರದ ಟ್ರೇಲರ್ ಬರೋಬ್ಬರಿ 5 ಮಿಲಿಯನ್’ಗಿಂತ ಹೆಚ್ಚು ವೀವ್ಸ್ ಆಗಿದೆ. ಕಳೆದ ಶನಿವಾರ ಸಂಜೆಯಷ್ಟೆ ಬಿಡುಗಡೆಯಾಗಿರುವ ಟ್ರೇಲರ್ ಯೂಟ್ಯೂಬ್ ನಲ್ಲಿ ಸಖತ್ ಟ್ರೆಂಡ್ ಆಗಿ ಬಿಟ್ಟಿದೆ. ಸದ್ಯ, ಈ ಟ್ರೇಲರ್ ಯೂಟ್ಯೂಬ್ ನಲ್ಲಿ 2ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಮೂರೇ ದಿನಗಳಲ್ಲಿ 5 ಮಿಲಿಯನ್ ಹಿಟ್ಸ್ ಪಡೆದು ತನ್ನ ಆರ್ಭಟವನ್ನು ಈ ಚಿತ್ರ ಮುಂದುವರೆಸಿದೆ. 'ಸೀತಾರಾಮ ಕಲ್ಯಾಣ' ಸಿನಿಮಾ ಇದೇ ತಿಂಗಳ 25ಕ್ಕೆ ಬಿಡುಗಡೆಯಾಗಲಿದೆ. ಎ ಹರ್ಷ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅನಿತಾ ಕುಮಾರಸ್ವಾಮಿ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಿಖಿಲ್ ಕುಮಾರ್, ರಚಿತಾ ರಾಮ್, ರವಿಶಂಕರ್, ಚಿಕ್ಕಣ್ಣ, ಕಾಮಿಡಿ ಕಿಲಾಡಿ ಲೋಕಿ, ಶರತ್ ಕುಮಾರ್, ಆದಿತ್ಯ ಮೆನನ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಒಟ್ಟಾರೆ ಸಿನಿಮಾ ತೆರೆ ಕಂಡ ಮೇಲೆ ಸಿನಿ ರಸಿಕರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments