ಬಿಗ್’ಬಾಸ್ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ: ಕವಿತಾ ಖುಷಿಯಾಗಿದ್ದೇಕೆ..!!

22 Jan 2019 1:35 PM | Entertainment
5174 Report

ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋ ಗಳಲ್ಲಿ ಒಂದಾದ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ.. 21 ಸ್ಪರ್ಧಿಗಳ ಪೈಕಿ ಇನ್ನು ಉಳಿದಿರುವುದು ಕೇವಲ 5 ಜನ ಮಾತ್ರ.. ಈ 5 ಸ್ಪರ್ಧಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಇದರ ನಡುವೆ ಕವಿತಾ ಮಾತ್ರ ಸ್ವಲ್ಪ ಹೆಚ್ಚು   ಸಂತೋಷವನ್ನೆ ಪಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಪ್ರಾರಂಭವಾಗಿದೆ.. ಹೀಗಿರುವಾಗ ಕಾರ್ಯಕ್ರಮದ ಕಡೆಯ ವಾರದಲ್ಲಿ ಕವಿತಾ ಗೌಡ ಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಸಿಕ್ಕಿದೆ. ಇದರಿಂದ ಕವಿತ ಫುಲ್ ಖುಷಿಯಲ್ಲಿದ್ದಾರೆ ಈವರೆಗೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಗೆ ನವೀನ್ ಸಜ್ಜು, ಅಕ್ಷತಾ ಪಾಂಡವಪುರ, ಜೀವಿತಾಗೆ ಸಿಕ್ಕಿತು.. ಆದರೆ. ಇದೀಗ ನಟಿ ಕವಿತಾ ಗೌಡ ಸಿಕ್ಕಿದೆ..

ಕೋಪ-ತಾಪಗಳಿಗೆ  ಈ ವಾರ ಸಮಯವೇ ಇರಲಿಲ್ಲ.. . ಇದ್ದ ಸಣ್ಣ-ಪುಟ್ಟ ಅವಕಾಶಗಳಲ್ಲಿ ಎಲ್ಲರಿಗಿಂತ ಚೆನ್ನಾಗಿ ಕವಿತಾ ಆಟ ಆಡಿದ್ದಾರೆ..  ಹೀಗಾಗಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಕವಿತಾಗೆ ಕೊಡುವೆ  ಎನ್ನುತ್ತಾ ಚಪ್ಪಾಳೆ ತಟ್ಟಿದರು ಸುದೀಪ್. ಕಿಚ್ಚ ಸುದೀಪ್ ಹೇಳಿದ್ದನ್ನು ಕೇಳಿ ಸಂತಸ ಪಟ್ಟ ಕವಿತಾ ಗೌಡ ''ಇದಕ್ಕಾಗಿ ನಾನು ಕಾಯುತ್ತಿದ್ದೆ. ಥ್ಯಾಂಕ್ಯು ಸೋ ಮಚ್'' ಎಂದು ಸಂಭ್ರಮಿಸಿದರು.. . ನಟಿ ಕವಿತಾ ಗೌಡ ಟಾಪ್ 5 ಹಂತ ತಲುಪಿದ್ದಾರೆ. ಕವಿತಾ ಜೊತೆಗೆ ನವೀನ್ ಸಜ್ಜು, ಶಶಿ ಕುಮಾರ್, ರಾಪಿಡ್ ರಶ್ಮಿ ಮತ್ತು ಆಂಡಿ ಫೈನಲ್ 5 ಸ್ಪರ್ಧಿಗಳಾಗಿದ್ದಾರೆ. ಈ ಐವರ ಪೈಕಿ ಯಾರು ವಿನ್ನರ್ ಆಗಬೇಕು ಅನ್ನೋದು ವೀಕ್ಷಕರಿಗೆ ಬಿಟ್ಟಿದ್ದು…

Edited By

Manjula M

Reported By

Manjula M

Comments