ಕೂದಲು ಕಟ್ ಮಾಡುವ ಮುನ್ನ ಸ್ವಲ್ಪ ಯೋಚಿಸಿ : ಯಾಕಂದ್ರೆ...!!!

21 Jan 2019 5:31 PM | Entertainment
1067 Report

 ಸೌಂದರ್ಯ ಪ್ರಜ್ಞೆ ಯಾರಿಗೆ ತಾನೇ ಇಲ್ಲ ಹೇಳಿ. ಆದರೆ ಕೆಲ ಹುಡುಗಿಯರಂತೂ ತಮ್ಮ ತಲೆಕೂದಲು ಬೆಳೆಸುವಲ್ಲಿ ಬಹಳ ಜಾಗರೂಕರು. ಕೆಲವರು ಲಾಂಗ್ ಹೇರ್ ಇಷ್ಟಪಟ್ಟರೆ, ಮತ್ತೆ ಕೆಲವರು ಶಾರ್ಟ್ ಹೇರ್ ಮಾಡಿಸ್ಕೋತ್ತಾರೆ. ಆದರೆ ಮಾನವನ ತಲೆಕೂದಲಿಗೆ ಬಾರೀ ಬೇಡಿಕೆ. ಅಷ್ಟೇ ಅಲ್ಲಾ, ಭಾರೀ ಬೆಲೆ. ಅಂದಹಾಗೇ  ಕಳೆದ ವರ್ಷ ಒಂದು ಲಕ್ಷ ಕೆಜಿ ಮಾನವನ ಕೂದಲನ್ನು ಪಾಕಿಸ್ತಾನದಿಂದ ಚೀನಾಕ್ಕೆ ರಪ್ತು ಮಾಡಲಾಗಿದೆ. ಚೀನಾದಲ್ಲಿ ಸೌಂದರ್ಯ ಉದ್ಯಮದ ಬೆಳವಣಿಗೆ ಹೆಚ್ಚುತ್ತಿರುವುದು ಈ ಪರಿಯ ಡಿಮ್ಯಾಂಡ್ ಕ್ರಿಯೇಟ್  ಆಗೋಕೆ ಕಾರಣವಾಗಿದೆ.

ಅಂದಾಜು ₹94 ಲಕ್ಷ (1,32,000 ಡಾಲರ್ ) ಮೌಲ್ಯದ 1,05,461 ಕೆಜಿ ತೂಕದಷ್ಟು ಮನುಷ್ಯರ ಕೂದಲು ಚೀನಾಗೆ ರಫ್ತು ಮಾಡಿರುವುದಾಗಿ ಪಾಕಿಸ್ತಾನದ ವಾಣಿಜ್ಯ ಮತ್ತು ಜವಳಿ ಸಚಿವಾಲಯ ಸಂಸತ್ತಿಗೆ ತಿಳಿಸಿದೆ ಎಂಬುದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಅಂದಹಾಗೇ ಪ್ರತೀ ಕೆಜಿ ಕೂದಲು ಬೆಲೆ ಎಷ್ಟು ಗೊತ್ತಾ..? ಪಾಕಿಸ್ತಾನದ ಸೌಂದರ್ಯ ತಜ್ಞ ಚೌಹಾಣ್ ಹೇಳುವಂತೆ 1 ಕೆಜಿ ಕೂದಲಿಗೆ ಆರರಿಂದ ಏಳು ಸಾವಿರ ಬೆಲೆ ಬಾಳುತ್ತದೆಯಂತೆ. ಅಂದಹಾಗೇ ಚೀನಾ ದೇಶದಲ್ಲಿ ಮನುಷ್ಯರ ಕೂದಲಿನಿಂದ ತಯಾರಿಸಿದ ವಿಗ್ ಗಳನ್ನು ಧರಿಸುವುದು ಅಲ್ಲಿ ಫ್ಯಾಷನ್ ಆಗಿದ್ಯಂತೆ.ಹಾಗಾಗಿಯೇ ಪಾಕಿಸ್ತಾನದಿಂದ ಚೀನಾಕ್ಕೆ ತಲೆ ಕೂದಲು ರಪ್ತಾಗುತ್ತಿದೆ. ಇನ್ನು ಹೆಣ್ಣುಮಕ್ಕಲುಳು ಕೂದಲಿಗೆ ಕತ್ತರಿ ಹಾಕೋ ಮುಂಚೆ ಯೋಚನೆ ಮಾಡಿ. ಕೂದಲಿಗೆ ಬೆಲೆ ಇದೆ ನಿಜ. ಆದರೆ ಅದೇ ರೀತಿ ಬೆಳೆಸಲು ಶ್ರಮ ಸಾಕಷ್ಟು ಬೇಕು ಅಲ್ಲವೇ.... 

Edited By

Kavya shree

Reported By

Kavya shree

Comments