ಕನ್ನಡದ ಗಾಳಿಪಟ ಹಾರಿಸಲು ಬರುತ್ತಿದ್ದಾರೆ ಚೈನಾ ನಟಿ!

21 Jan 2019 5:11 PM | Entertainment
222 Report

ಚಂದನವನದಲ್ಲಿ ಭಟ್ರು ಸಿನಿಮಾ ಸಖತ್ ಸದ್ದು ಮಾಡುತ್ತವೆ.. ಅವರ ಸಾಂಗ್ ಲಿರಿಕ್ಸ್ ಎಲ್ಲವೂ ಕೂಡ ಸಖತ್ ಆಗಿಯೇ ಇರುತ್ತವೆ… ಇದೀಗ  'ಗಾಳಿಪಟ 2' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ ನಮ್  ಭಟ್ರು.. ಶರಣ್, ಪವನ್ ಕುಮಾರ್, ರಿಷಿ ಚಿತ್ರದ ನಾಯಕರಾಗಿ ಈಗಾಗಲೇ ಆಯ್ಕೆ ಆಗಿದ್ದಾರೆ . ಅದೇ ರೀತಿ  ಈ  ಚಿತ್ರದಲ್ಲಿ ಐವರು ನಾಯಕಿಯರೂ ಕೂಡ  ಇದ್ದಾರೆ. ಈಗಾಗಲೇ ಶರ್ಮಿಳಾ ಮಾಂಡ್ರೆ, ಸೋನಾಲ್ ಮಾಂತೇರಿಯೋ ಆಯ್ಕೆಯಾಗಿದ್ದು, ಉಳಿದ ಮೂವರು ನಾಯಕಿಯರಿಗಾಗಿ  ಭಟ್ರ ಹುಡುಕಾಟ ಜೋರಾಗಿಯೇ ನಡೆಯುತ್ತಿದೆ. ಈ ಮೂವರ ಪೈಕಿ ಚೈನಾ ನಟಿಯೊಬ್ಬಳು ಕನ್ನಡದ 'ಗಾಳಿಪಟ 2' ಹಾರಿಸಲಿಕ್ಕೆ ಬರಲಿದ್ದಾರೆ ಎಂಬುದು ಸದ್ಯದ ಇಂಟರೆಸ್ಟಿಂಗ್ ವಿಷಯ..

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಜೊತೆಯಾಗಿ ಕತೆ ಮಾಡುತ್ತಿರುವಂತಹ ಚಿತ್ರವೇ ಈ ಗಾಳಿಪಟ 2..  ಬೇರೆ ಪ್ರದೇಶಗಳಿಂದ ಬಂದ ಮೂವರ ಹುಡುಗರ ಕತೆ. ಈ ಕಾರಣಕ್ಕೆ ಚಿತ್ರದಲ್ಲಿ ನಾಯಕಿಯರ ಜಾಗದಲ್ಲಿ ಒಬ್ಬರು ಅಂತಾರಾಷ್ಟ್ರೀಯ ಮಟ್ಟದ ಮಾಡೆಲ್ ಹಾಗೂ ಮತ್ತೊಬ್ಬರು ಚೈನಾ ನಟಿ ಕೂಡ ಇರಲಿದ್ದಾರೆ. ಸದ್ಯಕ್ಕೆ ಆ ನಟಿ ಯಾರು ಮತ್ತು ಯಾವ ಚಿತ್ರಗಳಲ್ಲಿ ನಟಿಸಿದ್ದಾರೆಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ನಿರ್ದೇಶಕ ಯೋಗರಾಜ್ ಭಟ್ ಅವರು ಚೈನಾ ನಟಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ..ಉಳಿದಂತೆ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್, ರಂಗಾಯಣ ರಘು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇದೆ. ಬೆಳಗಾವಿ ಮೂಲದ ಮಹೇಶ್ ದಾನಣ್ಣನವರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾವು ಗಾಳಿಪಟ ಸಿನಿಮಾದಷ್ಟೆ ಎತ್ತರಕ್ಕೆ ಏರುತ್ತದೆಯ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments