ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಭಿನಯ ಚಕ್ರವರ್ತಿ ಸುದೀಪ್ ಹೇಳಿದ್ದೇನು ಗೊತ್ತಾ..!?

21 Jan 2019 9:41 AM | Entertainment
3959 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ  ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು ಇದೇ ತಿಂಗಳ 25 ಕ್ಕೆ ತೆರೆ ಮೇಲೆ ಬರಲಿದೆ.,  ಹೇಳಿ ಕೇಳಿ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನ ಸಿನಿಮಾ. ಸಿನಿಮಾ ಸೆಟ್ಟೇರಿದ್ದ ದಿನದಿಂದಲೂ ಇಲ್ಲಿವರೆಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಬಂದಿದೆ. ಸಿನಿಮಾದಲ್ಲಿ ರಚಿತಾರಾಂ ನಾಯಕಿಯಾಗಿ ನಟಿಸಿದ್ದೂ, ಬಿಡುಗಡೆಯ ಹಂತ ತಲುಪಿದೆ. ನಿಖಿಲ್ ಕುಮಾರ ಸ್ವಾಮಿಗೆ ಈ ಚಿತ್ರ ಬ್ರೇಕ್ ತಂದು ಕೊಡುವ ನಿರೀಕ್ಷೆಯೂ  ಕೂಡ ಇದೆ. ಒಟ್ಟಾರೆ ಸೀತಾರಾಮ ಕಲ್ಯಾಣ ಟ್ರೇಲರ್ ಗೆ ಭರ್ಜರಿಯಾಗಿಯೇ  ಬಿಡುಗಡೆಯಾಗಿದೆ.  ಅಷ್ಟೆ ಅಲ್ಲದೆ ಸಿನಿ ರಸಿಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ..

ಸೀತಾರಾಮ ಕಲ್ಯಾಣ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿರುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ನಿಖಿಲ್ ಕುಮಾರಸ್ವಾಮಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆ ವೀವ್ಸ್ ಪಡೆದ ಟ್ರೈಲರ್ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ರೈಲರ್ ನೋಡುವಂತೆ ಅಭಿಮಾನಿಗಳಿಗೆ ಮನವಿಯನ್ನೂ ಕೂಡ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮತ್ತು ನಿರ್ದೇಶಕ ಹರ್ಷ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ನಿಮಗೆ ಎಲ್ಲಾ ರೀತಿಯಲ್ಲೂ ಯಶಸ್ಸು ಸಿಗಲಿ ಎಂದು ಸುದೀಪ್ ಹಾರೈಸಿದ್ದಾರೆ. 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜತೆಗೆ ರಚಿತಾ ರಾಂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆರೆ ಮೇಲೆ ಈ ಸಿನಿಮಾ ಯಾವ ರೀತಿ ಮೂಡಿಬರುತ್ತದೆ ಎನ್ನುವುದನ್ನ ಕಾದು ನೋಡಲೇ ಬೇಕು

Edited By

Manjula M

Reported By

Manjula M

Comments