ಹಾಟ್ ಬ್ಯೂಟಿಯ ಹೊಸ ವರಸೆ : ರಾಖಿ ಸೌಂದರ್ಯಕ್ಕೆ ಸಗಣಿಯೇ ಮದ್ದಂತೆ...!!!

19 Jan 2019 4:23 PM | Entertainment
291 Report

ಬಾಲಿವುಡ್’ನ ಹಾಟ್ ಬಾಂಬ್ ರಾಖಿ ಸಾವಂತ್ ನಿನ್ನೆಯಷ್ಟೇ ಸುದ್ದಿಯಲ್ಲಿದ್ದರು. ಅವರ ಮಾಜಿ ಬಾಯ್’ಫ್ರೆಂಡ್ ಹಲ್ಲೆಗೆ ಸಂಬಂಧಿಸಿದಂತೇ ಮಾತನಾಡಿದ ,  ವಿಡಿಯೋ ನೋಡಿ ನನಗೆ ಬೇಜಾರಾಯ್ತು. ಆತ ವಿಕೃತ ಪೋಸ್ಟ್ ಗಳನ್ನು ಹಾಕುತ್ತಿದ್ದ ,ಅದಕ್ಕಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ನನ್ನ ಪ್ರಕಾರ ಇದೆಲ್ಲಾ ಅವನ( ಮಾಜಿ ಬಾಯ್’ಫ್ರೆಂಡ್ ) ಪಬ್ಲಿಸಿಟಿ. ಅವನ-ನನ್ನ ಸಂಬಂಧ ಮುಗಿದ ಅಧ್ಯಾಯವಷ್ಟೇ ಎಂದು ಹೇಳಿಕೆ ನೀಡಿ ಸುಮ್ಮನಾಗಿದ್ದರು. ಇದೀಗ ಮತ್ತೊಮ್ಮೆ ಬಾಲಿವುಡ್ ಬಾಲ್ಕನಿಯ ಫ್ರಂಟ್ ಲೈನ್ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಬ್ಯೂಟಿ ಸೀಕ್ರೇಟ್. ಅಂದಹಾಗೇ ಏನು ಮೇಡಂ ನಿಮ್ಮ ಸೌಂದರ್ಯದ ಗುಟ್ಟು ಅಂತಾ ಕೇಳಿದ್ರೆ ಸಗಣಿ ಅಂತಾರೆ  ನಮ್ಮ ಬಾಲಿವುಡ್ ಬ್ಯೂಟಿ. ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ಇವರು ಆಗಸ್ಟ್ ನಲ್ಲಿಯೇ ಸೆಕ್ಸ್ ಗೆ ನೋ ಎಂದಿದ್ದರು.

ಅಷ್ಟೇ ಅಲ್ಲ... ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ದೀಪಕ್ ಕಲಾರ್‌ರನ್ನು ಮದುವೆಯಾಗಿವುದಾಗಿ ಘೋಷಿಸಿದ್ದು ಮಾತ್ರವಲ್ಲ, ನೇಕೆಡ್ ಆಗಿ ಅಮೆರಿಕದಲ್ಲಿ ಸಪ್ತಪದಿ ತುಳಿಯುತ್ತಿದ್ದೇನೆ ಎಂದು ಹೇಳಿ ಮತ್ತೊಮ್ಮೆ ಸದ್ದು ಮಾಡಿದ್ದರು. 'ನಾನಿನ್ನೂ ಕನ್ಯೆ..' ಎಂದು ಪ್ರೂಫ್ ಬೇರೆ ತೋರಿಸಿದರು. ಅಂದಹಾಗೇ ಈ ಬಾರಿ ಯಾವ ವಿಚಾರಕ್ಕೆ ಸಗಣಿಯನ್ನು ಮಧ್ಯೆ ತಂದಿದ್ದಾರೆ ಗೊತ್ತಾ..? ತಮ್ಮ ಇನ್ಸ್’ಟ್ರಾಗ್ರಾಂ ಪೇಜ್ ನಲ್ಲಿ  ಸಗಣಿಯಲ್ಲಿ ಫೇಸ್’ಪ್ಯಾಕ್ ಹಾಕಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಅಂದಹಾಗೇ ಅಲ್ಲಿಯೇ ಒಂದು ಕ್ಯಾಪ್ನ್ ಕೂಡ ಕೊಟ್ಟಿದ್ದಾರೆ.

'ನಿಮಗೆ ಆದಾಯ ತೆರಿಗೆ ಅಥವಾ ಬೇರೆ ಸಮಸ್ಯೆಗಳಿದ್ದರೆ ಚಿಂತೆ ಬಿಟ್ಹಾಕಿ. ಡಾ. ಉಮೇಶ್ ಎಂಬುವರ ಕ್ಲಿನಿಕ್‌ನಲ್ಲಿ ನಾನಿದ್ದೇನೆ. ನನ್ನ ಎಲ್ಲಾ ಸಮಸ್ಯೆ ನಿವಾರಿಸಲು ಗಂಟೆ ಹಿಂದೆ ಅವರು ನನ್ನ ಮುಖಕ್ಕೆ ಸಗಣಿ ಪ್ಯಾಕ್ ಹಾಕಿದ್ದಾರೆ. ಗೋವಿನ ಸೆಗಣಿ ಪ್ಯಾಕ್ ನೀವೂ ಮಾಡಿಕೊಳ್ಳಿ. ಇದರಿಂದ ನಿಮಗಿರುವ ಆದಾಯ ತೆರಿಗೆ ಸಮಸ್ಯೆ, ಮಾತ್ರವಲ್ಲದೇ ವಿಚ್ಛೇದನ ಸೇರಿ ಇನ್ನಿತರ ಸಮಸ್ಯೆಗಳೂ ದೂರವಾಗಲಿವೆ. ಸಮಯ ಹಾಳು ಮಾಡದೆ ಬೇಗ ಗೋಬರ್ ಪ್ಯಾಕ್ ಮುಖಕ್ಕೆ ಹಚ್ಚಿಕೊಳ್ಳಿ... 'ಎಂದು ಹೇಳಿದ್ದಾಳೆ. ಈ ಬಾರಿ ಸಗಣಿಯ ವಿಚಾರವೆತ್ತಿದ ರಾಖಿ ಬಗ್ಗೆ ನಗಬೇಕೋ, ಅಥವಾ ನೆಗ್ಲೇಟ್ ಮಾಡಬೇಕೋ ಗೊತ್ತಿಲ್ಲ. ಆದರೆ ಏಕಾಂತ ಕದಡುವ ಒಂದಿಲ್ಲೊಂದು ವಿಚಾರಕ್ಕೆ ಕೈ ಹಾಕಿ ತನ್ನ ಫಾಲೋಯರ್ಸ್ ನ್ನು ಹೆಚ್ಚು  ಮಾಡಿಕೊಳ್ತಿರೋದಂತೂ ಸುಳ್ಳಲ್ಲ ಬಿಡಿ.

Edited By

Kavya shree

Reported By

Kavya shree

Comments