ಹೊರಗಿದ್ದ ಹಾಗೇ ಬಿಗ್'ಬಾಸ್ ಮನೆಯಲ್ಲಿ ನವೀನ್ ಇಲ್ಲ : ಅಸಲೀ ಸತ್ಯ ಬಿಚ್ಚಿಟ್ಟ ಅಮ್ಮ...!!!

19 Jan 2019 1:17 PM | Entertainment
760 Report

ಬಿಗ್ ಬಾಸ್ ಸ್ಪರ್ಧಿಗಳ ಫೈನಲ್ ಕಂಟೆಸ್ಟಂಟ್’ಗಳಲ್ಲಿ ಗಾಯಕ ನವೀನ್ ಸಜ್ಜು ಈಗಾಗಲೇ ಆಯ್ಕೆಯಾಗಿದ್ದಾರೆ. ಗಾಯಕ ನವೀನ್ ಸಜ್ಜು ಅವರು ಲೂಸಿಯಾ ಸಿನಿಮಾದಿಂದ ಸಂಗೀತ ಲೋಕಕ್ಕೆ ಕಾಲಿಟ್ಟು ಕರ್ನಾಟಕದಾದ್ಯಂತ  ಸೆಲೆಬ್ರಿಟಿ ಸಿಂಗರ್ ಆಗಿದ್ದಾರೆ. ಅಂದಹಾಗೇ ತಮ್ಮ ಪ್ರೀತಿಯ ಪುತ್ರ ಗಾಯಕ ನವೀನ್ ಸಜ್ಜು ಬಗ್ಗೆ ಅವರ ತಾಯಿ ಸುಮಿತ್ರಾ ಹೇಳಿದ್ದೇನು ಗೊತ್ತಾ..? ಬಿಗ್ ಬಾಸ್ ಮನೆಯ ನಿರೀಕ್ಷೆ ಇಲ್ಲದೆಯೇ ನನ್ನ ಮಗ ಸ್ವರ್ಗದ ಮನೆಯಲ್ಲಿ ಇದ್ದಾನೆ. ನನಗೆ ಖುಷಿ ಆಗುತ್ತದೆ. ಅವನು ಹತ್ತನೇ ತರಗತಿ ಕೂಡ ಪಾಸ್ ಮಾಡಿಲ್ಲ. ಒಂದಲ್ಲಾ, ಎರಡಲ್ಲಾ ಮೂರನೇ ಬಾರಿಯೂ ಫೇಲ್ ಆಗಿದ್ದ.

ನಾನು ಕಾಲಹರಣ ಮಾಡಬೇಡವೆಂದು ತುಂಬಾ ಸಲ ಹೇಳಿದ್ದೆ, ಆದರೆ ಅವನು ನಿರಂತರ ಟೀಂ ಗೆ ಸೇರಿಕೊಂಡ. ನನ್ನ ಬೆಲೆ ಗೊತ್ತಾಗುತ್ತೆ ಒಂದಲ್ಲ ಒಂದು ದಿನ ಎಂದು ಹೇಳುತ್ತಿದ್ದ, ಈಗ ಅದು ಸತ್ಯವಾಗಿದೆ. ನನ್ನ ಮಗನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ, ಆದರೆ ಗಾಯಕನಾಗಿ ಇಡೀ ಕರ್ನಾಟಕದಾದ್ಯಂತ ಚಿರಪರಿಚಿತವಾಗಿದ್ದಾನೆ. ನನ್ನ ಮಗನಿಂದ ನಾನು ಸೆಲೆಬ್ರಿಟಿಯಾಗಿದ್ದೀನಿ. ಹೊರಗೆ ನನ್ನನ್ನೂ ಕೂಡ ಗುರುತಿಸುತ್ತಾರೆ. ನನ್ನ ಮಗನಿಗೆ ಸಂಕೋಚ ಜಾಸ್ತಿ. ಯಾರಿಗೂ ನನ್ನ ಮಾತಿನಿಂದ ನೋವಾಗಬಾರದು ಅಂತಾ ಯೋಚಿಸ್ತಾ ಇರುವ ಗುಣ ನನ್ನ ಮಗನದ್ದು. ಅವನಿಗೆ ಅದು ದೊಡ್ಡ ಗುಣ ಎನ್ನುತ್ತಾರೆ ಅವರಮ್ಮ .ನವೀನ್ ಬಗ್ಗೆ ಒಂದಷ್ಟು ಗಾಸಿಪ್ ಕೂಡ ಇಲ್ಲ. ಅಂದಹಾಗೇ ನಾನು ಬಿಗ್ ಬಾಸ್ ಮನೆಗೆ ಹೋಗಿ ಬಂದೆ. ನನ್ನ ಮಗ ಓದದೇ ವೈದ್ಯರ ಹತ್ತಿರ ಡಾಕ್ಟರ್ ಕೆಲಸ ಮಾಡುತ್ತಿದ್ದ, ಒಂದಷ್ಟು ದಿನ ಡಾಕ್ಟರ್ ಕೂಡ ಆಗಿಬಿಟ್ಟಿದ್ದ ಎಂದು ನಕ್ಕರು. ಅಲ್ಲಿ ಕೆಲಸವಿಲ್ದೇ ಇದ್ದಾಗ ಪುಸ್ತಕ ಹಿಡ್ಕೋ ಅಂತಾ ಅಲ್ಲಿನವರು ಹೇಳ್ತಾ ಇದ್ರು. ನಮ್ಮಿಂದ ನನ್ನ ಮಗ ಈ ಸ್ಥಾನಕ್ಕೆ ಬಂದಿಲ್ಲ. ಬದಲು ಅವನೇ ಸ್ವ ಇಚ್ಛೆಯಿಂದ ಮೇಲೆ ಬಂದಿದ್ದಾನೆ.

 ನನ್ನ ಮಕ್ಕಳಿಗಾಗಿ ಹಳ್ಳಿಯಿಂದ ಪಟ್ಟಣಕ್ಕೆ ಬಂದೆ. ನನ್ನ ಮಗ ಓಡಾಡಿಕೊಂಡು ಇರ್ತಾ ಇದ್ದ. ಆದರೆ ಇಂದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಅವನ ತಲೆಗೆ ಓದು ಹತ್ತದೇ ಇದ್ರು ಸಂಗೀತ ದೇವತೆ ಮಾತ್ರ ಒಲಿದಿದ್ದಾಳೆ. ಅವನ ಹಾಡಿಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ.ಚಿಕ್ಕಿಂದಿನಿಂದಲೂ ಹಾಡು ಅಂದ್ರೆ ತುಂಬಾ ಇಷ್ಟ ಅವನಿಗೆ. ಆಕ್ರೆಸ್ಟ್ರಾ ನೋಡಲು ರಾತ್ರೀ  ಇಡೀ ನಿದ್ದೆಗೆಟ್ಟು ಇರ್ತಾಯಿದ್ದ. ಒಮ್ಮೆ ಆಕ್ರೆಸ್ಟ್ರಾ ದಲ್ಲಿ ನನಗೊಂದು ಚಾನ್ಸ್ ಕೊಡಿ ಎಂದು ಕೇಳಿಕೊಂಡ, ನನಗೂ ಹೇಳಿದ ಅಮ್ಮ ಚಾನ್ಸ್ ಕೇಳ್ತೀನಿ ಅಂತಾ. ಕೊನೆಗೂ ಚಾನ್ಸ್ ಕೊಟ್ರು ಹಾಡಿ ಬಂದ ಆದರೆ ಸರಿಯಾಗಿ ಹಾಡಲಿಲ್ಲವೆಂದು ನಾನು ಬೈಯ್ದೆ.  ಬಿಡಮ್ಮಾ ಹೇಗೋ ನಾನು ಸ್ಟೇಜ್ ಮೇಲೆ ಹತ್ತಿದ್ದೆ ಬಿಡು ಎಂದು ಹೇಳಿ ಖುಷಿಪಟ್ಟಿದ್ದ. ಅವನು ದೊಡ್ಡವನಾದ ಮೇಲೆ ಅವನಿಗೆ ಗೊತ್ತಿಲ್ಲದೇ  ನಾನು ಎಸ್ಟೋ ಬಾರಿ ಆರ್ಕೆಸ್ಟ್ರಾ ನೋಡಲು ಹೋಗಿದ್ದೆ. ಅವನಿಗೆ ನಾನು ಆರ್ಕೆಸ್ಟ್ರಾ ಹೋಗಲು ಇಷ್ಟ ಇರುತ್ತಿರಲಿಲ್ಲ.

ಒಟ್ಟಾರೆ ನನ್ನ ಮಗ ಸೈಲೆಂಟ್. ಹೊರಗೆ ಇದ್ದಾಗ ಬಿಗ್ ಬಾಸ್ ಮನೆಯಲ್ಲಿ ಅವನಿಲ್ಲ ಅಂತಾ ಅನಿಸಿದೆ. ಅವನಿಗೆ ಸಿಟ್ಟು-ಕೋಪ ಜಾಸ್ತಿ. ಅಲ್ಲಿ ಆತ ತನ್ನ ಕೋಪವನ್ನು ಅವಾಯ್ಡ್ ಮಾಡ್ತಾ ಇದ್ದಾನೆ. ಅವನಿಗೆ ಹಾಡು ಅಂದ್ರೆ ತುಂಬಾ ಇಷ್ಟ, ಅವನಿಗೆ  ಅವನದ್ದೇ ಕೆಲಸ ಬಿಟ್ಟು   ಬೇರೆ ಏನಿಲ್ಲ. ಹಳ್ಳಿಗೆ ಬಂದ್ರೆ ತಮ್ಮ ಸ್ನೇಹಿತರ ಜೊತೆ ಕಾಲ ಕಳೆಯುತ್ತಾನೆ. ತೋಟಕ್ಕೆ ಹೋಗ್ತಾನೆ, ಎಳನೀರು ಕುಡಿಯುತ್ತಾನೆ , ಸ್ನೇಹಿತರ ಜೊತೆ ಮಾತನಾಡ್ತಾನೆ. ಯಾವುದೇ ಸಂಗೀತ ಕೋರ್ಸ್ ಇಲ್ಲದೇ ಅವನು ಈ ಮಟ್ಟಕ್ಕೆ ಬೆಳೆದಿದ್ದಾನೆ. ಒಟ್ಟಾರೆ ಇಡೀ ಬಿಗ್ ಬಾಸ್-6 ನಲ್ಲಿ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿದ್ದು ಫೈನಲ್ ಗೆ ಇನ್ನು  ಕೇವಲ ಎರಡು ವಾರ ಅಷ್ಟೇ ಬಾಕಿ ಇರೋದು. ಈ ನಡುವೆ ನವೀನ್ ಸಜ್ಜು ತಾಯಿ, ಯಾರು ಗೆದ್ರೂ ನನಗೆ ಖುಷಿ , ಎಲ್ಲೋ ಒಂದು ಕಡೆ ಮೂಲೆಯಲ್ಲಿ ನನ್ನ ಮಗನೇ ಗೆಲ್ಲಬೇಕೆಂಬ ನಿರೀಕ್ಷೆ ಇದೆ ಎಂದು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಒಟ್ಟಾರೆ ಕಷ್ಟಪಟ್ಟು ಬೆಳೆದ ಹುಡುಗ ಬಿಗ್ಬಾಸ್ ವಿನ್ನರ್ ಆಗಲೀ ಎಂಬುದು ನಮ್ಮೆಲ್ಲರ ಆಶಯ ಕೂಡ ಹೌದು ಎಂಬುದು ಅಭಿಮಾನಿಗಳ, ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ. ನವೀನ್ ಗೆ ಈ ಮೂಲಕ ಒಳ್ಳೆಯದಾಗಲೀ  ಎಂದು ಹಾರೈಸೋಣ.

Edited By

Kavya shree

Reported By

Kavya shree

Comments