ಪ್ಯಾಂಟೇ ಧರಿಸಿಲ್ಲ ಆ ಬ್ಲಡಿ ಗರ್ಲ್ ಎಂದವನಿಗೆ ಚಳಿ-ಜ್ವರ ಹಿಡಿಸಿದ ನಟಿ...!!!

19 Jan 2019 11:36 AM | Entertainment
503 Report

ನಟಿಯರು ಸಾರ್ವಜನಿಕ ಸ್ಥಳಗಳಲ್ಲಿ ಹೋದಾಗ ಮೂದಲಿಕೆಗೆ ಒಳಗಾಗುತ್ತಾರೆ. ಇನ್ನು ಕೆಲವರು ತಮ್ಮ ಉಡುಪಿನಿಂದಾಗಿ ಮುಜುಗರಕ್ಕೆ ಒಳಗಾಗಿದ್ದುಂಟು. ಇಲ್ಲೊಬ್ಬ ನಟಿ ಕಾರಿನಿಂದ ಇಳಿಯುತ್ತಿದ್ದಂತೇ ಯಾರೋ ಅವರ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ. ಫೋಟೋಗೆ ಕೆಟ್ಟ ಕಮೆಂಟ್ ಹಾಕುವುದರ ಮೂಲಕ ಟ್ರೋಲ್ ಮಾಡಿದ್ದಾರೆ. ನಟಿ ರಕುಲ್ ಪ್ರೀತ್ ಸಿಂಗ್ ಶಾರ್ಟ್ಸ್ ಧರಿಸಿ ಕಾರಿನಿಂದ ಹೊರಗೆ ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಟ್ಟದಾಗಿ ಟ್ವೀಟ್ ಕೂಡ ಮಾಡಿದ್ದಾರೆ.

 ‘’ಕಾರಿನಲ್ಲಿಯೇ ಎಲ್ಲಾ ಮುಗಿದ ಮೇಲೆ ಆಕೆ ಪ್ಯಾಂಟ್ ಹಾಕುವುದನ್ನೇ ಮರೆತಿದ್ದಾರೆ’’ ಎಂದು ಕೆಟ್ಟದಾಗಿ ಸಂದೇಶ ಬರೆದಿದ್ದಾರೆ. ಭಗತ್ ಎಂಬಾತನ ಅಕೌಂಟ್’ನಿಂದ ಈ ಫೋಟೋ ಪೋಸ್ಟ್ ಆಗಿದ್ದೂ ಆತನಿಗೆ ಚಳಿ-ಜ್ವರ ಹಿಡಿಸಿದ್ದಾರೆ ನಟಿ ರಕುಲ್. ರೀ ಟ್ವೀಟ್ ಮಾಡುವುದರ ಮೂಲಕ  “ನಿನ್ನ ತಾಯಿ ಕೂಡ ಕಾರಿನಲ್ಲಿ ಎಲ್ಲ ಸೆಶನ್ ನಡೆಸಿದ್ದಾಳೆ ಎನಿಸುತ್ತಿದೆ. ಹಾಗಾಗಿ ನೀನು ಇಷ್ಟು ಎಕ್ಸ್ ಪರ್ಟ್ ಆಗಿದ್ದೀಯಾ. ನಿನ್ನ ತಾಯಿಗೆ ಈ ಸೆಶನ್ ಮಾಹಿತಿಗಳನ್ನು ಹೊರತುಪಡಿಸಿ ನಿನಗೆ ಸ್ವಲ್ಪ ಬುದ್ದಿ ಹೇಳಿಕೊಡು ಎಂದು ಕೇಳಿಕೊಳ್ಳುತ್ತೇನೆ. ನಿಮ್ಮಂತಹ ಜನರು ಇರುವವರೆಗೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಸಮಾನತೆ ಬಗ್ಗೆ ಚರ್ಚೆ ಮಾಡುವುದರಿಂದ ಮಹಿಳೆಯರಿಗೆ ರಕ್ಷಣೆ ಸಿಗುವುದಿಲ್ಲ” ಎಂದು ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ. ಕೆಲವರು ನಟಿ ರಕುಲ್ ಪ್ರೀತ್ ಸಿಂಗ್ ಟ್ವೀಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ಆತ ಮಾತನಾಡಿದ್ದು ತಪ್ಪು. ಆದರೆ ಆತನ ತಪ್ಪಿಗೆ ಅವನ ತಾಯಿ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು  ಟ್ವೀಟ್ ಮಾಡಿದ್ದಾರೆ.

Edited By

Kavya shree

Reported By

Kavya shree

Comments