'ಸೀತಾರಾಮ ಕಲ್ಯಾಣ' ಟ್ರೇಲರ್'ಗೆ ಮುಹೂರ್ತ ಫಿಕ್ಸ್...!

19 Jan 2019 10:24 AM | Entertainment
94 Report

 ಹೇಳಿ ಕೇಳಿ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನ ಸಿನಿಮಾ. ಸಿನಿಮಾ ಸೆಟ್ಟೇರಿದ್ದ ದಿನದಿಂದಲೂ ಇಲ್ಲಿವರೆಗೂ ಸದ್ದು ಮಾಡುತ್ತಲೇ ಬಂದಿದೆ. ಸಿನಿಮಾದಲ್ಲಿ ರಚಿತಾರಾಂ ನಾಯಕಿಯಾಗಿ ನಟಿಸಿದ್ದೂ, ಬಿಡುಗಡೆಯ ಹಂತ ತಲುಪಿದೆ. ನಿಖಿಲ್ ಕುಮಾರ ಸ್ವಾಮಿಗೆ ಈ ಚಿತ್ರ ಬ್ರೇಕ್ ತಂದು ಕೊಡುವ ನಿರೀಕ್ಷೆ ಇದೆ. ಒಟ್ಟಾರೆ ಸೀತಾರಾಮ ಕಲ್ಯಾಣ ಟ್ರೇಲರ್ ಗೆ ಭರ್ಜರಿ ಸೆಟ್ ನಿರ್ಮಾಣವಾಗಿದೆ. ಹಿಂದೆಯೂ  ನಿಖಿಲ್ ಅವರ ಜಾಗ್ವಾರ್ ಕ್ಕೂ ಇದೇ ರೀತಿಯಲ್ಲಿ  ಶ್ರೀಮಂತ ಸೆಟ್ ನಿರ್ಮಾಣ ಮಾಡಿ ಜನರ ನಡುವೆಯೇ ಆಡಿಯೋ ರಿಲೀಸ್ ಮಾಡಿದ್ದ ಮುಖ್ಯಮಂತ್ರಿಗಳು ಈ ಬಾರಿ ಅದಕ್ಕಿಂತಲೂ ಒಂದು ಕೈ ಮುಂದೆ ಸಾಗಿದ್ದಾರೆ.

ಟ್ರೇಲರ್ ಗೆ  ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಟ್ರೇಲರ್ ನೋಡಲು ಒಂದು ಲಕ್ಷ ಜನ ಸೇರಬಹುದೆಂಬ ನಿರೀಕ್ಷೆ ಇದೆ ಎಂದಿದ್ದಾರೆ.ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಸೀತಾರಾಮ ಕಲ್ಯಾಣ ಕೌಟುಂಬಿಕ ಚಿತ್ರವಾಗಿ ಹೊರಹೊಮ್ಮಿದೆ. ಪ್ರೇಕ್ಷಕರ ಮನ ಗೆಲ್ಲೋದ್ರಲ್ಲಿ ಅನುಮಾನವಿಲ್ಲ. ಅಂದಹಾಗೇ ಇದೊಂದು ಫ್ಯಾಮಿಲಿ ಎಂಟರ್ಟೈನ್ ಸಿನಿಮಾ. ಜನ ಖುಷಿ ಪಡೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಜನವರಿ 25 ಕ್ಕೆ ತೆರೆಗೆ ಬರುತ್ತಿದೆ. ಖಂಡಿತಾ ನಿಮಗೆ ಇಷ್ಟವಾಗುತ್ತದೆ ಎಂದರು. ಸಿನಿಮಾದಷ್ಟೇ ರಾಜಕೀಯದಲ್ಲಿಯೂ ನಾನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದೇನೆ. ಲೋಕಸಭೆ ಚುನಾವಣೆಗೆ ವರಿಷ್ಟರು ಹೇಗೆ ಹೇಳುತ್ತಾರೋ ಹಾಗೇ ನಿರ್ಧಾರ ತೆಗೆದುಕೊಳ್ತೀನಿ ಎಂದರು.

Edited By

Kavya shree

Reported By

Kavya shree

Comments