ಅವಕಾಶ ಇಲ್ಲದಿದ್ದಾಗ ವಿಧಿ ಇಲ್ಲದೇ ಆ ಕೆಲಸ ಮಾಡಬೇಕಾಯ್ತು : ಪವಿತ್ರಾ ಲೋಕೇಶ್...!!!

18 Jan 2019 5:46 PM | Entertainment
323 Report

ನಟಿ ಪವಿತ್ರಾ ಲೋಕೇಶ್  ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅನೇಕ ಸ್ಟಾರ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ನಟಿ ಪವಿತ್ರಾ ಲೋಕೇಶ್ ಗೆ ಎಂತಹ ಸ್ಥಿತಿ ಬಂದಿತ್ತು ಗೊತ್ತಾ…? ಕನ್ನಡದ ಪ್ರತಿಭಾನ್ವಿತ ನಟಿ ಪವಿತ್ರಾ ಲೋಕೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದವರು. ನಟ ಮೈಸೂರು ಲೋಕೇಶ್ ಅವರ ಪುತ್ರಿ. ತಂದೆಯ ಅಕಾಲಿಕ ಮರಣದಿಂದ ಶಾಕ್ ಆದ ನಟಿ ಪವಿತ್ರಾ ಮೊದಲು ಮುಖ ಮಾಡಿದ್ದು ಸಿನಿಮಾದತ್ತ.

ಮೊದ ಮೊದಲು ಅವಕಾಶಗಳು ಧಾರಳವಾಗಿ ಸಿಗುತ್ತವೆ ಎಂದುಕೊಂಡಿದ್ದ  ಪವಿತ್ರಾಗೆ ಆಗಿದ್ದೇ ಬೇರೆ. ಸಿನಿಮಾ ಅವಕಾಶಕ್ಕಾಗಿ ಅವರಿವರ ಕಾಲನ್ನು ಹಿಡಿದ ಪವಿತ್ರಾಳನ್ನು ಚಿತ್ರರಂಗ ಬೇರೆ ರೀತಿಯಲ್ಲಿಯೇ ಬಳಸಿಕೊಳ್ಳಲು ಯತ್ನಿಸಿತ್ತಂತೆ. ಅದಕ್ಕೆ ಪವಿತ್ರಾ ಮಾತ್ರ ಜಗ್ಗಲಿಲ್ಲ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಆ ನಂತರ ಕಣ್ಮರೆಯಾದರು. ರೆಬೆಲ್ ಸ್ಟಾರ್ ಅಂಬರೀಶ್ ನೆರವಿನಿಂದ ಒಂದಷ್ಟು ಸಿನಿಮಾಗಳಲ್ಲಿ ಪ್ರಧಾನವಾದ ಪಾತ್ರ ಸಿಕ್ಕರು ಆ ನಂತರ ಪವಿತ್ರಾಗೆ ಯಾರು ನೆರವು ನೀಡಲಿಲ್ಲ. ಹೆಸರು ಸಂಪಾದನೆ ಮಾಡಿಕೊಂಡ ಪವಿತ್ರಾಗೆ ಸಿನಿಮಾ ಫೀಲ್ಡ್ ನಲ್ಲಿ ಅವಕಾಶಗಳೇ ಇಲ್ಲವಂತಾದವು.

ಆದರೆ ಮನೆಯ ಪರಿಸ್ಥಿತಿ, ಜವಾಬ್ದಾರಿ ಎಲ್ಲವೂ ಪವಿತ್ರಾ ಲೋಕೇಶ್ ಮೇಲೆಯೇ ಇದ್ದುದ್ದರಿಂದ ವಿಧಿ ಇಲ್ಲದೇ ಕಲರ್ ಫುಲ್ ಲೋಕದಿಂದ ಹೊರಗೆ ಹೆಜ್ಜೆ ಇಡಬೇಕಾಯ್ತು. ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಚಿತ್ರರಂಗದಿಂದ ದೂರಾದರು,ಕಂಪೆನಿಯಲ್ಲಿ ಸಾಮನ್ಯ ನೌಕರರಂತೆ ಇರುತ್ತಾರೆ ಪವಿತ್ರಾ.  ಇದಾದ ಕೆಲವು ದಿನಗಳ ಬಳಿಕ ಅವರಿಗೆ ಫೋಷಕ ಪಾತ್ರವೊಂದು ಸ್ನೆಹಿತರ ಮೂಲಕ ದೊರೆಯುತ್ತದೆ ,ಅದಾದ ನಂತರ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಾರೆ,ಅನೇಕ ಸ್ಟಾರಗಳ ಸಿನಿಮಾದಲ್ಲಿ ನಟಿಸುತ್ತಾರೆ.ತೆಲುಗು ಚಿತ್ರರಂಗದ ಬಹುತೇಕ ಸ್ಟಾರ್ ಗಳ ಸಿನಿಮಾದಲ್ಲಿ ಖಾಯಂ ಆಗಿ ನಟಿಸಿ ಕನ್ನಡದ ಹೆಮ್ಮೆಯನ್ನ ಪಸರಿಸುತ್ತಿದ್ದಾರೆ.

Edited By

Kavya shree

Reported By

Kavya shree

Comments