ಶೃತಿ ಹರಿಹರನ್-ಸರ್ಜಾ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ..!?

18 Jan 2019 3:53 PM | Entertainment
1278 Report

ಸ್ಯಾಂಡಲ್ ವುಡ್’ನಲ್ಲಿ ಮೀಟೂ ಅಭಿಯಾನ ಸಾಕಷ್ಟು ಸದ್ದು ಮಾಡಿತ್ತು… ಅದರಲ್ಲಿ ಹೆಚ್ಚು ಸದ್ದು ಮಾಡಿದ್ದೆಂದರೆ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ ಆರೋಪ.. ಇದೀಗ ಅವರಿಬ್ಬರು ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ… ತಮಿಳಿನ ಕ್ಷಣಂ ಚಿತ್ರ ಕನ್ನಡಕ್ಕೆ ರಿಮೇಕಾಗುತ್ತಿದೆ. ನಿರ್ದೇಶಕ ಕೆ ಎಂ ಚೈತನ್ಯ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ… ಕಳೆದ ವರ್ಷ ಹೆಚ್ಚು ಸದ್ದು ಮಾಡಿದ್ದ ಈ ಚಿತ್ರ ಕಾರಣಾಂತರದಿಂದ ನಿಂತು ಹೋಗಿತ್ತು.

ಈಗ ಮತ್ತೆ ಚಿತ್ರತಂಡ ವಾಪಸ್ಸಾಗಿದ್ದು ಚಿತ್ರದ ಶೂಟಿಂಗ್ ಮುಂದುವರೆಯಲಿದೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಉಂಟು ಮಾಡುವಂತೆ ಮಾಡಿದ್ದ ಮೀಟೂ ಆರೋಪ ಶೃತಿ ಹರಿಹರನ್ ಕೆಲ ದಿನಗಳಿಂದ ಸಿನಿಮಾ ಶೂಟಿಂಗ್ ನಿಂದ ದೂರ ಉಳಿದಿದ್ದರು. ಈಗ ವಾಪಸ್ಸಾಗಿದ್ದಾರೆ. ಈ ಚಿತ್ರದಲ್ಲಿ ಶೃತಿ ಹರಿಹರನ್ ಮತ್ತು ಚಿರಂಜೀವಿ ಸರ್ಜಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿಗೆ ಕಾಣಿಸಿಕೊಳ್ಳಲು ಇಬ್ಬರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಶೃತಿ ಹರಿಹರನ್ ಈಗಾಗಲೇ ಅವರ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಡಬ್ಬಿಂಗ್ ಮಾತ್ರ ಬಾಕಿ ಉಳಿದಿದೆ. ಈ ವಾರ ಅದನ್ನು ಮುಗಿಸಲಿದ್ದಾರೆ. ಉಳಿದ ಚಿತ್ರೀಕರಣವನ್ನು ಶೀಘ್ರದಲ್ಲೇ ಮುಗಿಸಲಿದ್ದೇವೆ ಎಂದು ನಿರ್ದೇಶಕ ಚೈತನ್ಯ ತಿಳಿಸಿದ್ದಾರೆ.. ಒಟ್ಟಾರೆಯಾಗಿ ಶೃತಿ ಹರಿಹರನ್ ಅವರ ಮತ್ತೊಂದು ಸಿನಿಮಾ ತೆರೆ ಕಾಣಲು ಸಿದ್ದವಾಗಿದೆ ಎನ್ನಬಹುದು..

Edited By

Manjula M

Reported By

Manjula M

Comments