ಬಿಗ್ ಬಾಸ್ ಮನೆಯಲ್ಲಿ ಉಲ್ಟಾ ಹೊಡೆದ ಸ್ಪರ್ಧಿ…!! ಮೊದಲು ಹಾಗೆ ಹೇಳಿ, ಈಗ ತೇಪೆ ಹಚ್ಚಿದ್ದು ಯಾಕೆ ಮಿಸ್ಟರ್ ……?

18 Jan 2019 9:40 AM | Entertainment
420 Report

ಕಿರುತೆರೆಯ ಬಿಗ್ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಮಾಡೋ ಕೆಲಸವನ್ನು ಬಿಟ್ಟು ಬಿಗ್ ಬಾಸ್ ಫಾಲೋ ಮಾಡೋ ಮಂದಿ ತುಂಬಾ ಜನ ಇದ್ದಾರೆ… ಬಿಗ್ ಬಾಸ್ ಮನೆಗೆ ಗುಡ್ನೆಸ್ ಅನ್ಕೊಂಡು ಹೋಗಿರೋ ರಾಕೇಶ್ಗೆ ಆತ ಹೇಳಿರುವ ಮಾತೆ ಅವನನ್ನು ಫೈನಲ್ ನಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ ಅನಿಸುತ್ತಿದೆ.. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ವಾರವೇ ''ನಾನು ಇನ್ನೂರು ಜನ ಹುಡುಗಿಯರನ್ನು ಡೇಟ್ ಮಾಡಿದ್ದೇನೆ'' ಎಂದು ಎಂ.ಜೆ.ರಾಕೇಶ್ ಹೇಳಿಕೊಂಡಿದ್ದರು.

ಅದು ಕೇವಲ ಒಂದಲ್ಲ, ಎರಡಲ್ಲ, ಅನೇಕ ಬಾರಿ ಈ ವಿಷ್ಯದ ಬಗ್ಗೆ ರಾಕೇಶ್ ಮಾತನಾಡಿಕೊಂಡಿದ್ದಾರೆ.. ''ಪದೇ ಪದೇ 200 ಡೇಟಿಂಗ್'' ಮ್ಯಾಟರ್ ಬಗ್ಗೆ ರಾಕೇಶ್ ಮಾತನಾಡುತ್ತಲೆ ಇದ್ದರು... ಈಗ ನೋಡಿದ್ರೆ, ''ನಾನು 200 ಡೇಟ್ ಮಾಡಿದ್ದೇನೆ. ಆದ್ರೆ, 200 ಹುಡುಗಿಯರನ್ನಲ್ಲ.!'' ಎಂದು ಎಂ.ಜೆ.ರಾಕೇಶ್ ಉಲ್ಟಾ ಹೊಡೆದಿದ್ದಾರೆ. ಇಷ್ಟು ದಿನ ಪ್ಲೇ ಬಾಯ್ ಕ್ಯಾರೆಕ್ಟರ್ ಹೊಂದಿದ್ದ ರಾಕೇಶ್, 'ಬಿಗ್ ಬಾಸ್' ಕೊನೆಯ ಹಂತಕ್ಕೆ ಬರುತ್ತಿರುವ ಹಾಗೆ ಗುಡ್ ಬಾಯ್ ಕ್ಯಾರೆಕ್ಟರ್ ಪಡೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರಾ ಅನಿಸುತ್ತಿದೆ.  ''ನೀವು ಇಲ್ಲಿಯವರೆಗೂ ಎಷ್ಟು ಜನರಿಗೆ ಮುತ್ತು ನೀಡಿದ್ದೀರಾ.?'' ಎಂದು ವಿಶೇಷ ಅತಿಥಿಗಳು ರಾಕೇಶ್ ನನ್ನು ಪ್ರಶ್ನೆ ಮಾಡಿದರು. ''ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ದರು. ಅವರಿಗೆ ಲೆಕ್ಕವಿಲ್ಲದಷ್ಟು ಬಾರಿ ಮುತ್ತು ಕೊಟ್ಟಿರುವೆ'' ಅಂತ ರಾಕೇಶ್ ಹೇಳಿದರು. ಅಷ್ಟಕ್ಕೆ ಸುಮ್ಮನಾಗದೆ, ''200 ಡೇಟ್ಸ್ ಇತ್ತು. 200 ಹುಡುಗಿಯರಲ್ಲಾ.!'' ಎಂದು ಹೇಳಿ ತಮ್ಮ ಹಳೆಯ ಹೇಳಿಕೆಗೆ ರಾಕೇಶ್ ಮತ್ತೆ ಪೇಚಿಗೆ ಸಿಲುಕಿ ಹಾಕಿಕೊಂಡಿದ್ದಾರೆ..

Edited By

Manjula M

Reported By

Manjula M

Comments