ನನ್ನ ಜೀವನದಲ್ಲಿ ಆ ವ್ಯಕ್ತಿ ಬಂದಿಲ್ಲ ಅಂದಿದ್ರೆ, ನಾನು ರಾಕಿಂಗ್ ಸ್ಟಾರ್ ಆಗ್ತಾ ಇರಲಿಲ್ಲ........

18 Jan 2019 9:40 AM | Entertainment
1901 Report

ಸ್ಯಾಂಡಲ್’ವುಡ್ ನ ರಾಕಿಂಗ್ ಸ್ಟಾರ್ ಇಂದು ಇಡೀ ರಾಷ್ಟ್ರಕ್ಕೆ ಸ್ಟಾರ್ ಆಗಿದ್ದಾರೆ. ಕನ್ನಡ ಸಿನಿಮಾವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ರಾಕಿ ಭಾಯ್ ಯಶಸ್ಸಿಗೆ  ಆ ಮಹಾನುಭಾವನೇ ಕಾರಣವಂತೆ. ಸಣ್ಣ ಪುಟ್ಟ ಪಾತ್ರಮಾಡಿಕೊಂಡು ಸೀರಿಯಲ್ ನಲ್ಲಿ ನಟಿಸುತ್ತಿದ್ದ ಯಶ್ ಗೆ ಚಿಕ್ಕಿಂದಿನಿಂದಲೂ ಬಣ್ಣದ ಗೀಳು ಅಂಟಿತ್ತು. ಆದರೆ ಯಶ್ ಗೆ  ಸಿನಿಮಾ ಫೀಲ್ಡ್ ನಲ್ಲಿ ಯಾರು ಗಾಡ್ ಫಾದರ್ ಇಲ್ಲದ ಕಾರಣ ಸಾಕಷ್ಟು ಏಳು-ಬೀಳುಗಳನ್ನು ನೋಡಬೇಕಾಯ್ತು. ಗಾಂಧಿನಗರದಲ್ಲಿ ಹಗಲು –ರಾತ್ರಿ ಎನ್ನದೇ ಅಲೆದಾಡಬೇಕಾಯ್ತು. ಇಂದು ಈ ಮಟ್ಟಿಗೆ ಬೆಳೆಯೋಕೆ ಆ ಮನುಷ್ಯ ನೇ ಕಾರಣ. ಆ ವ್ಯಕ್ತಿ ಇಲ್ಲದೇ ಹೋದರೆ ನಾನು ಈ ಸ್ಥಾನಕ್ಕೆ ಬರುತ್ತಿರಲಿಲ್ಲವೆನ್ನುತ್ತಾರೆ ಯಶ್.

ಅಂದಹಾಗೇ ತನ್ನ ಬೆನ್ನಿಗೆ ನಿಂತು, ಅವರನ್ನು ಈ ಮಟ್ಟಿಗೆ ಬೆಳೆಯೋಕೆ ಕಾರಣರಾದ ಅವರು ಯಾರು…? ಯಶ್ ಯಾಕೆ ಆ ಮನುಷ್ಯನಿಗೆ ದೇವರ ಸ್ಥಾನ ಕೊಡುತ್ತಾರೆ. ತನ್ನೆಲ್ಲಾ ಭವಿಷ್ಯಕ್ಕೆ ಬುನಾದಿ ಅವರು ಎನ್ನುತ್ತಾರೆ. ಯಶ್ ಯಾವ ನಟನೆ ಶಾಲೆಗೆ ಹೋಗಿ  ಕಲಿತವರೇ ಅಲ್ಲ. ಹಾಗ ತಾನೇ ಕಿರುತೆರೆ ಗೆ ಎಂಟ್ರಿಕೊಟ್ಟ ಯಶ್  ಆಗಿನ್ನೂ ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಿದ್ದರು. ಅವರು ಯಾವುದೇ ಸಿನಿಮಾ ಹಿನ್ನೆಲೆಯಿಂದ ಬಂದವರಲ್ಲ. ಹಾಗಾಗಿ ನಟನೆಯಲ್ಲಿ ಯಶ್ ​ಅಷ್ಟಾಗಿ ಪಳಗಿರಲಿಲ್ಲ. ಆದ್ದರಿಂದ ನಟನಾ ಶಾಲೆಗೆ ಸೇರಿಕೊಂಡರೆ ಏನಾದರೂ ಕಲಿಯಬಹುದು ಎಂದುಕೊಂಡಿದ್ದರು ಯಶ್​. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ವೇಳೆ, ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅನಂತ್​ನಾಗ್​ಗೆ ಮಗನಾಗಿ ಯಶ್​ ನಟಿಸಿದ್ದರು. ಅಂದಿನಿಂದ ಅನಂತ್​ ನಾಗ್​ ಗುರುವಾದರಂತೆ.‘ಕೆಜಿಎಫ್​’ ಚಿತ್ರದಲ್ಲಿ ಹಿರಿಯ ನಟ ಅನಂತ್​ ನಾಗ್​ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಡೀ ಚಿತ್ರದ ನಿರೂಪಕರು ಅವರೇ. ಅಚ್ಚರಿ ಎಂದರೆ, ಯಶ್​ ಜೀವನಕ್ಕೆ ತಿರುವು ನೀಡುವಲ್ಲಿ ಅನಂತ್​ನಾಗ್​ ಪಾತ್ರ ದೊಡ್ಡದಿದೆಯಂತೆ.

ಅನಂತ್​ ನಾಗ್​ ನನ್ನ ಗುರುಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಯಶ್​.​ ಅನಂತ್’ನಾಗ್ ಅಲ್ಲಿಂದ ಯಶ್ ಗೆ ಗುರುವಾದರಂತೆ. ನನ್ನ ಜೀವನದ ತಿರುವಿಗೆ ಕಾರಣಕರ್ತ ಅವರು. ಒಂದು ವೇಳೆ ನನ್ನ ಆ್ಯಕ್ಟಿಂಗ್ ನಲ್ಲಿ ಪಳಗಿದ್ದೇನೆ, ಅಷ್ಟೋ ಇಷ್ಟೋ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಅನಂತ್ ನಾಗ್ ಎಂದು ನೆನಪಿಸಿಕೊಳ್ಳುತ್ತಾರೆ ಯಶ್.ಆರಂಭದಲ್ಲಿ ಅನಂತ್ ನಾಗ್ ಯಾವ ನಟನೆಯನ್ನು  ಮಾಡುತ್ತಿರಲಿಲ್ಲವೇನೋ ಅನಿಸುತ್ತಿತ್ತು. ಆದರೆ  ಅವರ ಮಾನಿಟರ್ ನೋಡಿ ಖುಷಿಯಾಯ್ತು. ಅವರಿಂದ ಬಹಳವಾಗಿ ಕಲಿತ್ತಿದ್ದೇನೆ. ಅವರ ನಟನೆ ನೋಡಿ ಅನೇಕ ಪ್ರಶ್ನೆ ಕೇಳುತ್ತಿದ್ದೆ. ಈಗಲೂ ಅವು ನನ್ನ ಜೀವನಕ್ಕೆ ಅನ್ವಯವಾಗುತ್ತವೆ ಎಂದು ಯಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

Edited By

Kavya shree

Reported By

Kavya shree

Comments