ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಅವಳ ಕಪಾಳಕ್ಕೆ ಬಾರಿಸ್ತೀನಿ : ಅಕ್ಷತಾ ಕೆಂಡಾಮಂಡಲ...!!!!

17 Jan 2019 4:14 PM | Entertainment
1813 Report

ಬಿಗ್ ಬಾಸ್ ಸೀಸನ್ 6 ಫೈನಲ್ ಹಂತ ತಲುಪಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಒಟ್ಟು ಏಳು ಮಂದಿಯಿದ್ದು ಈಗಾಗಲೇ  ಗಾಯಕ ನವೀನ್ ಸಜ್ಜು ಅವರು ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಕಳೆದ ವಾರವಷ್ಟೇ ಸ್ಟ್ರಾಂಗ್ ಕಂಟೆಸ್ಟಂಟ್ ಅಕ್ಷತಾ ಪಾಂಡವಪುರ  ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಬಿಗ್ಬಾಸ್ ಸ್ಪರ್ಧಿಯೊಬ್ಬರ ಮೇಲೆ ಭಾರೀ ಆಘಾತವಾದ ಸುದ್ದಿಯೊಂದನ್ನು ನೀಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳ ಮುಖವಾಡವನ್ನು ಬಯಲು ಮಾಡ್ತೀನಿ ಎಂದ ಅಕ್ಷತಾ ಕವಿತಾ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. 

ನಾನು –ರಾಕೇಶ್ ಒಳ್ಳೆ ಫ್ರೆಂಡ್ಸ್. ನಮ್ಮಿಬ್ಬರ ಸಂಬಂಧ ನಮಗೇನೇ ಗೊತ್ತು ವಿನಹ ಬಿಗ್ ಬಾಸ್ ಮನೆಯಲ್ಲಿರುವವರಿಗೆ ಅರ್ಥ ಆಗಲೇ ಇಲ್ಲ. ನಮಗೆ ಎಲ್ಲಿ ಗೌರವ ಇರುತ್ತದೋ, ಎಲ್ಲಿ ಪ್ರೀತಿ ಸಿಗುತ್ತೋ ಅಲ್ಲಿ ಹುಡುಕುತ್ತಾ ಸಾಗುತ್ತೇವೆ. ಸಿಕ್ಕಿದವರ ಜೊತೆ ಕಂಫರ್ಟಬಲ್ ಫೀಲ್   ಮಾಡ್ತೇವೆ. ನಾನು ಮತ್ತು ರಾಕಿ ಮಾಡಿದ್ದು ಅದನ್ನೇ. ಆದರೆ ನಮ್ಮಿಬ್ಬರ ಸಂಬಂಧವನ್ನು ಬೇಕಾದ ಹಾಗೇ  ಕಲ್ಪಿಸಿಕೊಳ್ಳುವುದು ತಪ್ಪು. ನಮ್ಮಿಬ್ಬರ ಸಮಬಂಧವನ್ನು ಹಬ್ಸಿದ್ದೇ ಆ ಕವಿತಾ, ಅವಳು ಹೊರಗೆ ಬಂದ್ರೆ ಕಪಾಳಕ್ಕೆ ಹೊಡೀಬೇಕು ಅನಿಸುತ್ತೆ ನನಗೆ ಎಂದು ಅಕ್ಷತಾ ಕವಿತಾ ಬಗೆಗಿನ ಕೋಪವನ್ನು  ಹೊರ ಹಾಕಿದ್ದಾರೆ. ಮೊದಲು ಗಾಸಿಪ್ ಮಾಡಿದ್ದೇ ಅವಳು, ಬಿಗ್ ಬಾಸ್ ಮನೆಯಲ್ಲಿ. ನಾನು ರಾಕೇಶ್ ಜೊತೆ ಮಾತನಾಡಿದ್ರೆ ತಪ್ಪು, ಹಗ್ ಮಾಡ್ಕೊಂಡ್ರೆ ತಪ್ಪು.

ಆದರೆ ಅವಳು  ಮಾಡಿದ್ದು ಇನ್ನೇನು...? ಅವಳ ಮತ್ತು ಶಶಿ ಸಂಬಂಧ ಪೂಜ್ಯ ರೀತಿಯಲ್ಲಿರುವುದಾ..? ಅವರಿಬ್ಬರ ಸಂಬಂಧವನ್ನು ಮೆಚ್ಚುವಂತದ್ದು,ಹಾಗಿದ್ರೆ ನನ್ನ-ರಾಕೇಶ್ ಸಂಬಂಧ ಕೆಟ್ಟದ್ದು ಅನ್ನೋ ರೀತಿ ಬಿಂಬಿಸಿದ್ದಾರೆ. ಅದೇ ಕವಿತಾ ಟಾಸ್ಕ್ ಮಾಡೋವಾಗ ಗಾಯಕ ನವೀನ್ ಸಜ್ಜು ಅವರನ್ನು ಅನಾವಶ್ಯಕವಾಗಿ  ಬಿಗಿದಪ್ಪಿಕೊಳ್ತಾ ಇದ್ರು. ಒಂದಲ್ಲ, ನಾಲ್ಕೈದು ಬಾರಿ ಅವನನ್ನು ಲಾಕ್ ಮಾಡ್ತಿದ್ದಳು,. ನಾನೇ ಎಸ್ಟೋ ಬಾರಿ ನೋಡಿದ್ದೀನಿ. ನಾನು ನವೀನ್ ಗೆ ಹೇಳಿದ್ದೆ  , ಬಾರೋ ಅಂತಾ, ಅದಕ್ಕೆ ಅವನು ನೋಡು., ಈ ಕವಿತಾ ಹೇಗ್ ಹಿಡ್ಕೊಂಡಿದ್ದಾಳೆ ಅಂತಾ ಹೇಳಿದ್ದ. ನವೀನ್ ಕೂಡ ಕವಿತಾಗೆ, ನೀನು ಪದೇ ಪದೇ ತಬ್ಕೋಬೇಡಮ್ಮಾ ಅಂತಾ ಹೇಳಿದ್ದ..ಅದೇ ಕೆಲಸವನ್ನು ನಾನು ಮಾಡಿದಿದ್ರೆ ಅದೂ ಬೇರೆ ರೀತಿಯಲ್ಲಿ ತಿರುಗುತ್ತಿತ್ತು.  ಸದ್ಯ ನಾನು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೇನೆ. ಸ್ವಲ್ಪ ರೆಸ್ಟ್ ಮಾಡಿ ಆ ನಂತರ ಸಿನಿಮಾ, ನಾಟಕಗಳಲ್ಲಿ ಬ್ಯುಸಿ ಆಗುತ್ತೇನೆ ಎಂದರು.

Sponsored

Edited By

Kavya shree

Reported By

Kavya shree

Comments