ಗೆಲ್ಲಲು ಬಂದಿಲ್ಲ ಎನ್ನುವವರು ಫಿನಾಲೆಗೆ ಯಾಕ್ರೀ ಹೋಗಬೇಕು…!! ಈ ವಾರ ಬಿಗ್ ಬಾಸ್ ಮನೆಯಿಂದ ಇವರೇನಾ ಎಲಿಮಿನೇಟ್ ಆಗೋದು..?

17 Jan 2019 9:58 AM | Entertainment
2376 Report

ಕಿರುತೆರೆಯ ದೊಡ್ಡ ರಿಯಾಲಿಟಿ ಷೋ ಗಳಲ್ಲಿ ಬಿಗ್ ಬಾಸ್ ಕೂಡ ಒಂದು.. ನೋಡುಗರು ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ಮೆಚ್ಚಿಕೊಂಡಿದ್ದಾರೆ..ಮೊದ ಮೊದಲು ಕೇವಲ ಸೆಲಬ್ರೆಟಿಗಳಿಗೆ ಮಾತ್ರ ಇದ್ದ ಈ ಷೋ  ಇದೀಗ ಕಾಮನ್ ಮ್ಯಾನ್ ‘ಗಳಿಗೂ ಕೂಡ ಎಂಟ್ರಿ ಸಿಕ್ಕಿದೆ.. ಆದರೆ ಆ ಮನೆಯೊಳಗೆ ಹೋದವರೆಲ್ಲ ಹೇಳೋಧು ಒಂದೆ ಮಾತು.. ನಾನು ಗೆಲ್ಲಲ್ಲು ಬಂದಿಲ್ಲ…. ಆಟ ಆಡಲು ಬಂದಿದ್ದೇನೆ ಎಂದು.. ಹಾಗಾದ್ರೆ ಗೆಲ್ಲೋರು ಯಾರು..?  ಅದೇ ಸಾಲಿಗೆ ಸೇರೋದು ಈ ಸೀಜನ್ ನ ರಾಕೇಶ್…

''ನನಗೆ 'ಬಿಗ್ ಬಾಸ್' ಆಟ ಅಲ್ಲ. ಇದು ಜರ್ನಿ. ನಾನು ಇಲ್ಲಿ ಗೆಲ್ಲಲು ಬಂದಿಲ್ಲ'' ಅಂತ 'ಬಿಗ್ ಬಾಸ್' ಮನೆಯಲ್ಲೇ ಹಲವು ಬಾರಿ ಎಂ.ಜೆ.ರಾಕೇಶ್ ಹೇಳಿಕೊಂಡಿದ್ದಾರೆ. ಸಾಲದಕ್ಕೆ, ಅಕ್ಷತಾ ಮತ್ತು ರಾಕೇಶ್ ಟಾಪ್ 2 ಹಂತ ತಲುಪಿದರೆ, ''ಅಕ್ಷತಾಗೆ ಟ್ರೋಫಿ ಬಿಟ್ಟುಕೊಡುವೆ'' ಅಂತಲೂ ಕೂಡ  ರಾಕೇಶ್ ಹೇಳಿಕೊಂಡಿದ್ದರು. ಗೆಲ್ಲಲೇ ಬೇಕು ಅಂತ ಏನಿಲ್ಲ  ಎನ್ನುವ ರಾಕೇಶ್ ನ ಒಳಗಡೆ ಇಟ್ಟುಕೊಳ್ಳೋದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಇದೀಗ ಮುಂದೆ ಇದೆ.. ಅದನ್ನ 'ಗುಡ್ನೆಸ್' ನೆಪದಲ್ಲಿ ರಾಕೇಶ್ ತೋರಿಸಿಕೊಳ್ಳುತ್ತಿಲ್ಲ. ಇಂತ ರಾಕೇಶ್ ಫಿನಾಲೆ ವಾರಕ್ಕೆ ಯಾಕೆ ಹೋಗಬೇಕು ''ಗುಡ್ನೆಸ್', 'ಸಸ್ಯಾಹಾರ' ಮತ್ತು 'ಫಿಟ್ನೆಸ್'ನ 'ನಾನು ''ಪ್ರಮೋಟ್'' ಮಾಡುತ್ತಿರುವೆ. ಹೀಗಾಗಿ, ಫಿನಾಲೆ ವಾರಕ್ಕೆ ನಾನು ಹೋಗಬೇಕು'' ಎಂದು ರಾಕೇಶ್ ತಮ್ಮನ್ನ ತಾವು ಸಮರ್ಥಿಸಿಕೊಂಡರು. ಗೆಲ್ಲೋ ಅವಶ್ಯಕತೆ ಇಲ್ಲ ಅಂದ ಮೇಲೆ ಫಿನಾಲೆಗೆ ಯಾಕೆ ಹೋಗಬೇಕು… ಅದರ ಬದಲು ಬೇರೆಯವರಿಗೆ ಬಿಟ್ಟುಕೊಡಬಹುದಲ್ವ…!

Edited By

Manjula M

Reported By

Manjula M

Comments