ಅಪ್ಪನ ಮುಂದೆ ಕೂತ ನಿಖಿಲ್ ಕುಮಾರ್ ಸ್ವಾಮಿ ಹೇಳಿದ್ದೇನು ಗೊತ್ತಾ..?

14 Jan 2019 1:20 PM | Entertainment
2441 Report

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರವಾದ ನಿಖಿಲ್ ಕುಮಾರಸ್ವಾಮಿ ನಾಯಕನಾಗಿರೋ ಸೀತಾರಾಮ ಕಲ್ಯಾಣ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗೋಕೆ ಸಜ್ಜಾಗಿದೆ..  ಎ ಹರ್ಷ ವಿಭಿನ್ನವಾದ ಕಥೆಯೊಂದಿಗೆ ನಿರ್ದೇಶನ ಮಾಡಿರೋ ಈ ಚಿತ್ರ ಈಗಾಗಲೆ ಸಿನಿರಸಿಕರಲ್ಲಿ ಸಖತ್  ಕ್ರೇಜ್ ಕ್ರಿಯೆಟ್ ಮಾಡಿದೆ... ಈ ಹಿಂದೆ ಜಾಗ್ವಾರ್ ಸಿನಿಮಾದಲ್ಲಿ ಅಭಿನಯಿಸಿದ ನಿಖಿಲ್ ಸಿನಿ ರಸಿಕರನ್ನು ಸಂಪಾದಿಸಿದ್ದು ಸುಳ್ಳಲ್ಲ…. ಸೀತಾರಾಮ ಕಲ್ಯಾಣ ಸಿನಿಮಾದ ಮೂಲಕವೇ ನಿಖಿಲ್ ಕನ್ನಡದಲ್ಲಿ ಭರವಸೆಯ ನಾಯಕನಾಗಿ ನೆಲೆ ಕಂಡುಕೊಳ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ... ಅದಕ್ಕೆ ಕಾರಣ ಈ ಸಿನಿಮಾ ಈ ವರೆಗೂ ಬಿಟ್ಟುಕೊಟ್ಟಿರೋ ಕೆಲವೊಂದು ಸುಳಿವುಗಳು ಅಷ್ಟೆ...

ನಿಖಿಲ್ ತಾನು ಹೀರೋ ಆಗಿದ್ದರ ಹಿಂದಿನ ಘಟನೆಯನ್ನು ಮೆಲಕು ಹಾಕಿದ್ದಾರೆ… ನಾನು ಚಿಕ್ಕವನಾಗಿದ್ದಾಗಲೇ ನಟನಾಗಬೇಕು ಅನ್ನೋದು ನಮ್ಮ ಅಪ್ಪನ ಆಸೆಯಾಗಿತ್ತು.. ಒಂದು ದಿನ ಎದ್ದು ಅಪ್ಪನ ಬಳಿ ಹೋಗಿ ಅಪ್ಪ ನಾನು ಹೀರೋ ಆಗ್ತೀನಿ ಎಂದೆ.. ಆ ಕ್ಷಣದಲ್ಲಿ ಅಪ್ಪನ ಮುಖದಲ್ಲಿ ತುಂಬಾ ಸಂತೋಷವಿತ್ತು.. ನಾನು ಆ ವರೆಗೂ ಯಾವತ್ತೂ ಅವರ ಮುಖದಲ್ಲಿ ಅಂಥಾ ಸಂತಸವನ್ನು ನೋಡಿರಲಿಲ್ಲ... ತಕ್ಷಣ ಎಸ್ ಅಂದವರೇ ನನಗಾಗಿ ಸಿನಿಮಾ ನಿರ್ಮಿಸುವ ಕೆಲಸಕ್ಕೆ ಮುಂದಾದ್ರು. ಪ್ರತಿಯೊಂದರ ಆಯ್ಕೆಯೂ ಅಪ್ಪನದ್ದೆ ಆಗಿತ್ತು... ಪ್ರತೀ ವಿಚಾರದಲ್ಲೂ ಖುದ್ದು ಅವರೇ ನಿಂತು ಸಿನಿಮಾವನ್ನು ನಿರ್ಮಿಸಿ ಕೊಟ್ಟರು…ಇಂಥ ಅಪ್ಪನನ್ನು ಪಡೆದ ನಾನು ನಿಜಕ್ಕೂ ಅದೃಷ್ಟವಂತ ಎಂದು ನಿಖಿಲ್ ಭಾವುಕರಾದರು..

Edited By

Manjula M

Reported By

Manjula M

Comments