ಸಿನಿಮಾ ಲೋಕದಿಂದಲೇ ದೂರವಾದ್ರಂತೆ ಬಾಹುಬಲಿಯ ಈ ಸ್ಟಾರ್ ನಟಿ...!!!

14 Jan 2019 11:03 AM | Entertainment
222 Report

ಬಾಹುಬಲಿ ಖ್ಯಾತಿಯ ಸ್ಟಾರ್ ನಟಿ ತಮ್ಮ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.  ಟಾಲಿವುಡ್ ನಲ್ಲಿ ನಂ.1 ಸ್ಥಾನದಲ್ಲಿರುವ ಈ ನಟಿಗೆ ಕೆಲವೊಂದಿಷ್ಟು ಚಿತ್ರಗಳು ಭರ್ಜರಿ ಟ್ರೆಂಡ್ ಕ್ರಿಯೇಟ್ ಮಾಡಿಸಿದವು. ಆ ಪಾತ್ರಕ್ಕೆ ಅಥವಾ ಚಿತ್ರಕ್ಕೆ ಇವರೇ ಸೂಟ್ ಎನ್ನುವಷ್ಟರ ಮಟ್ಟಿಗೆ ಈ ನಟಿಗೆ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಬಾಹುಬಲಿಯಲ್ಲಿ ಅಮೋಘ್ನ ಅಭಿನಯ ನೀಡಿ ಎಲ್ಲರ ಮನಗೆದ್ದಿದ್ದ ಈ ಸುಂದರಿ ಸದ್ಯ ಸಿನಿಮಾ ಲೋಕದಿಂದ ದೂರವಾಗ್ತರಂತೆ. ಅಂದ ಹಾಗೇ ಅವರು, ಕನ್ನಡದ ಹುಡುಗಿ ಟಾಲಿವುಡ್'ನ ಮೋಸ್ಟ್ ಬ್ಯೂಟಿಫುಲ್ ನಟಿ ಅನುಷ್ಕಾ ಶೆಟ್ಟಿ. ಇತ್ತೀಚಿಗೆ ರಿಲೀಸ್ ಆದ ಇನ್ನೊಂದಿಷ್ಟು ಸಿನಿಮಾಗಳು ಅನುಷ್ಕಾಳ ಕೀರ್ತಿಯನ್ನು ಮತ್ತಷ್ಟು ಹೆಚ್ಚು ಮಾಡಿಸಿದವು. ಅಷ್ಟೇ ಅಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ಪ್ರಭಾಸ್ ಜೊತೆ ಅನುಷ್ಕಾ ಹೆಸರು ಸೇರಿಸಿ ಒಂದಷ್ಟು ಗಾಸಿಪ್ ಗಳು ಕೂಡ ಹರಿದಾಡಿದವು.

ಮದುವೆಯಾಗಲಿದ್ದಾರೆ ಈ ಪ್ರೇಮ ಹಕ್ಕಿಗಳು, ಹಸೆಮಣೆ ಏರಿಯೇ ಬಿಟ್ಟರಂತೆ ಈ ಸ್ಟಾರ್ ಜೋಡಿಗಳು ಎಂಬ ಗಾಸಿಪ್ ದೊಡ್ಡ ಮಟ್ಟಸುದ್ದಿಯಾಗುತ್ತಲೇ ಇವರಿಬ್ಬರು ಮೌನ ಮುರಿದು ಕ್ಲಿಯರ್ ಕಟ್ ಆಗಿ ನಾವು ಜಸ್ಟ್ ಫ್ರೆಂಡ್ಸ್ ಅಂತಾ ಮಾತ್ರ ಹೇಳಿ ಸುಮ್ಮನಾದರು. ಆದರೆ ಇದೀಗ ಅನುಷ್ಕಾ  ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಇನ್ನು ವಿವಾಹವಾಗದ ಅನುಷ್ಕಾ ಸಿನಿಮಾ ಲೋಕಕ್ಕೆ ಗುಡ್ ಬೈ ಹೇಳಲಿದ್ದಾರೆಯೇ? ಹೀಗೊಂದು ರೂಮರ್ ಹರಿದಾಡುತ್ತಿದೆ.ಕಳೆದ ವರ್ಷ ಭಾಗಮತಿ ಚಿತ್ರ ಬಿಡುಗಡೆಯಾದ ಬಳಿಕ ಅನುಷ್ಕಾ ಒಪ್ಪಿಕೊಂಡಿರುವ ಏಕೈಕ ಸಿನಿಮಾ ಸೈಲೆನ್ಸ್. ಇದು ಇನ್ನೂ ಸೆಟ್ಟೇರಬೇಕಿದೆಯಷ್ಟೇ. ಅದರ ಹೊರತಾಗಿ ಅನುಷ್ಕಾ ಯಾವುದೇ ಸಿನಿಮಾಗಳಿಗೆ ಕಮಿಟ್ ಆಗಿಲ್ಲ.

ಈ ಸಿನಿಮಾವಷ್ಟೇ ಕೈಯಲ್ಲಿರುವುದರಿಂದ ಯಾವ ಸಿನಿಮಾಗಳು ಇಲ್ಲದ ಕಾರಣ, ಸದ್ಯ ಸೈಲೆನ್ಸ್ ನಂತರ ಸೈಲೆಂಟ್ ಆಗಿಯೇ ಸಿನಿಮಾ ಬಿಡ್ತಾರೆ ಈ ಸ್ಟಾರ್ ನಟಿ ಅಂತೆಲ್ಲಾ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ ಇದನ್ನೆಲ್ಲಾ ಅಲ್ಲೆಗೆಳೆದಿರುವ ಅನುಷ್ಕಾ ಆಪ್ತರು, ಇದೆಲ್ಲಾ ರೂಮರ್ಸ್ ಅಷ್ಟೆ ಎಂದಿದ್ದಾರೆ.

Edited By

Kavya shree

Reported By

Kavya shree

Comments