ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದು ಇವರೇ...!!!

12 Jan 2019 5:35 PM | Entertainment
615 Report

ಬಿಗ್​​ ಬಾಸ್​ ಮನೆಯಿಂದ ಈ ವಾರ ಅಕ್ಷತಾ ಪಾಂಡವಪುರ ಎಲಿಮಿನೇಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ಸ್ಪರ್ಧಿಗಳ ಪೈಕಿ ಅಕ್ಷತಾ ಪಾಂಡವಪುರ ಈ ವಾರ ಮನೆಯಿಂದ ಔಟ್ ಆಗಿದ್ದಾರೆ. ಬಿಗ್​ಬಾಸ್​ ಸೀಜನ್-6ರ ಆರನೇ ಕಂಟೆಸ್ಟೆಂಟ್​ ಆಗಿ ಅಕ್ಷತಾ ಬಿಗ್​​ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ನ ರಾಕೇಶ್​ ಜೊತೆ ಹೆಚ್ಚು ಕ್ಲೋಸ್​ ಆಗಿರೋದು ಬಿಗ್​ಬಾಸ್​ ಮನೆಯ ಒಳಗೂ ಹೊರಗೂ ಚರ್ಚೆಗೆ ಕಾರಣವಾಗಿತ್ತು.

 ಅಂದಹಾಗೇ ಅಕ್ಷತಾ ಪಾಂಡವಪುರ ಅವರು ರಾಕೇಶ್ ಜೊತೆ ಇದ್ದುದ್ದೇ ಹೆಚ್ಚು ಚರ್ಚೆಯಾಗತೊಡಗಿತು. ಇದಕ್ಕೆ ಹೊರಗಿನಿಂದಲೂ ಭಾರೀ ವಿರೋಧ ವ್ಯಕ್ತವಾಯ್ತು. ಇನ್ನು ಮನೆಯಲ್ಲಿ 7 ಮಂದಿಯಿದ್ದು. ಈ ಸೀಸನ್ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಎಂಬುದು ಭಾರೀ ಕುತೂಹಲಕಾರಿಯಾಗಿದೆ. ಅಂದಹಾಗೇ ಮಂಡ್ಯ ಜಿಲ್ಲೆಯ ಪಾಂಡವಪುರದ ಹುಡುಗಿ ಈಕೆ ಸ್ಟೇಜ್ ಆರ್ಟಿಸ್ಟ್. ರಂಗಭೂಮಿ ಕಲಾವಿದೆಯಾಗಿದ್ದ ಅಕ್ಷತಾ, ಎಂಜಿ ರೋಡ್​ ಶಾಂತಿ, ಒಬ್ಬಳು, ಆ ಒಂದು ನೋಟ ಹೀಗೆ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

Edited By

Kavya shree

Reported By

Kavya shree

Comments