ರಾಕಿಂಗ್ ಸ್ಟಾರ್ ನ್ನು ಭೇಟಿ ಮಾಡಿ ವಿಶ್ ಮಾಡಿದ ಭಾರತೀಯ ಕ್ರಿಕೆಟಿಗ!

12 Jan 2019 4:43 PM | Entertainment
1366 Report

ಕೆಜಿಎಫ್ ಸಿನಿಮಾ ಇದೀಗ ಪಾಕ್ ಗಡಿ ದಾಟಿದೆ. ಪಾಕ್ ಚಿತ್ರ ಮಂದಿರಗಳಲ್ಲಿ ಹಿಂದಿ ಕೆಜಿಎಫ್ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಒಂದು ಕಡೆ ಸಿನಿಮಾ ಯಶಸ್ಸಿನ ಗಡಿ ದಾಟುತ್ತಿದ್ದರೇ ಇನ್ನೊಂದು ಕಡೆ ನಟ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅಂದಹಾಗೇ ಕೆಜಿಎಫ್ ಖುಷಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್​ ಅವ್ರನ್ನ ಇಂದು ಕ್ರಿಕೆಟಿಗ ಪ್ರಥ್ವಿ ಶಾ ಭೇಟಿಯಾದರು.

ಭಾರತ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿರುವ ಪ್ರಥ್ವಿ ಶಾ, ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಅವ್ರನ್ನ ಭೇಟಿಯಾಗಿ ಕೆಲ ಸಮಯ ಕಳೆದರು. ಕ್ರಿಕೆಟಿಗ ಪೃಥ್ವಿ ಅವರು ಕಳೆದ ಬಾರಿಯ ಅಂಡರ್ -19 ವಿಶ್ವಕಪ್  ಪಂದ್ಯವನ್ನಭಾರತಕ್ಕೆ ಗೆದ್ದುಕೊಟ್ಟ ಕೀರ್ತಿ ಪ್ರಥ್ವಿ ಶಾಗೆ ಸಲ್ಲುತ್ತದೆ. ಸದ್ಯ ಗಾಯದ ಸಮಸ್ಯೆಯಿಂದ ಪೃಥ್ವಿ ಶಾ ಆಸ್ಟ್ರೇಲಿಯಾ ಸರಣಿಯಿಂದ ಹೊರ ಉಳಿದಿದ್ದಾರೆ. ವಿಶ್ರಾಂತಿಯಲ್ಲಿರುವ ಶಾ, ಇಂದು ಯಶ್ ಭೇಟಿಯಾಗಿದ್ದನ್ನ, ಯಶ್​ ಫ್ಯಾನ್ಸ್​ ಕ್ಲಬ್​ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದೆ.

Edited By

Kavya shree

Reported By

Kavya shree

Comments