ಬಿಗ್'ಬಾಸ್ ಮನೆಯಲ್ಲಿ ರಾಕಿಯನ್ನು ಕಂಡು ಕೆಂಡಾಮಂಡಲರಾದ ಅಕ್ಷತಾ ಮಮ್ಮಿ...!!!

10 Jan 2019 4:33 PM | Entertainment
323 Report

ಕನ್ನಡ ಕಿರುತೆರೆಯ  ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ಪ್ರಸಾರವಾಗುತ್ತಿದೆ.. ಈಗಾಗಲೇ ಮನೆಯಲ್ಲಿದ್ದ 18 ಮಂದಿ ಪೈಕಿ ಕೇವಲ ಹತ್ತು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬಿಗ್’ಬಾಸ್ ಮೊದಲ ವಾರದಿಂದ ಬಹಳ ಮಾತಾಗಿರುವ ಜೋಡಿ ಅಂದ್ರೆ ಅಕ್ಷತಾ –ರಾಕಿ. ಎಷ್ಟರ ಮಟ್ಟಿಗೆ ಇವರಿಬ್ಬರ ಪೇರ್ ಅಂದ್ರೆ ಗಂಡ-ಹೆಂಡ್ತಿಯ ಸಂಬಂಧ ತನಕವೂ ಮಾತಿನ ಚರ್ಚೆಗಳಾಗಿವೆ.ಇವರಿಬ್ಬರ ರಿಲೇಷನ್’ಶಿಪ್ ಬಗ್ಗೆ ಹೊರಗಿನಿಂದಲೂ ಬಹಳ ವಿರೋಧ ವ್ಯಕ್ತವಾಯ್ತು. ಒಂದುಕಡೆ ಅಕ್ಷತಾ ಗೆ ಮದುವೆಯಾಗಿದ್ದು, ರಾಕಿ ಬ್ಯಾಚುಲರ್. ರಾಕಿ ತಾನೇ ಹೇಳಿಕೊಂಡಿರುವ ಹಾಗೇ ತನಗೆ ಈಗಾಗಲೇ 200 ಜನ ಗರ್ಲ್ ಫ್ರೆಂಡ್ಸ್ ಇದ್ರುಅಂತಾ. ಮನೆಯ ಮಂದಿಗೆ ರಾಕೇಶ್ ಮೇಲೆ ಅಂತಹ ಒಳ್ಳೆಯ ಅಭಿಪ್ರಾಯವಿಲ್ಲ.

 ಅಂದಹಾಗೇ ಬಿಗ್’ಬಾಸ್ ಮನೆಯೊಳಗೆ ಇವರಿಬ್ಬರ ಒಡನಾಟ ಅತಿರೇಕಕ್ಕೆ ಹೋಗಿದ್ದೂ, ಮನೆ ಮಂದಿಯೆಲ್ಲಾ ಇವರಿಬ್ಬರನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ವೀಕೆಂಡ್ ನಲ್ಲಿ ಸುದೀಪ್ ಕೂಡ ಕೆಲ ಸೂಕ್ಷ್ಮತೆಗಳನ್ನು ಅರ್ಥ ಮಾಡಿಸಿದ್ರೂ ಇವರಿಬ್ಬರು ಸರಿ ಹೋಗಲಿಲ್ಲ. ಅಷ್ಟೇ ಅಲ್ಲಾ, ಈ ವಾರದ ಫ್ಯಾಮಿಲಿ ಮೆಂಬರ್ ಎಪಿಸೋಡ್ ನಲ್ಲಿ ಅಕ್ಷತಾ ಅವರ ತಾಯಿ ಮನೆಯೊಳಗೆ ಬಂದಿದ್ದರು.ಮನೆಯಲ್ಲಿದ್ದ ಅಷ್ಟು ಮಂದಿಯನ್ನು ಮಾತನಾಡಿಸಿದ  ಅಕ್ಷತಾ ತಾಯಿ ಅದ್ಯಾಕೋ ರಾಕೇಶ್ ರತ್ತ ನೋಡಿದರೂ ನೋಡದ ಹಾಗೇ ಇದ್ರು. ಅವರ ಮನಸಲ್ಲಿ  ರಾಕೇಶ್ ಬಗ್ಗೆ ಕೋಪ ಇತ್ತು. ಅದಾಗಲೇ ,ಮನೆಯಿಂದ ಬಂದ ಸೀಕ್ರೇಟ್  ಪತ್ರದಲ್ಲಿ ರಾಕಿಯಿಂದ ದೂರವಿರುವಂತೆ ಅಕ್ಷತಾಳಿಗೆ ವಾರ್ನ್ ಮಾಡಿದ್ದರು.

ಅವರಿಬ್ಬರ ವರ್ತನೆ ನೋಡಿ ವೀಕ್ಷಕರು ಬೇಸರಿಸಿಕೊಂಡಿದ್ದು ಇದೆ. ಕಿವಿ ಮಾತು ಹೇಳಿದ ಅಮ್ಮನಿಂದ ಅಕ್ಷತಾ ಸ್ವಲ್ಪ ಗಲಿಬಿಲಿಗೊಂಡರು. ತಮ್ಮದೇ ಆದ ಸ್ಲ್ಯಾಂಗ್ ನಲ್ಲಿ ನಿಮಗೆ  ಕ್ಯಾಣ ಐತೆ ಅಲ್ವಾಅಮ್ಮ ನನ್ನ ಮೇಲೆ ಅಂತಾ ಕೇಳಿದ್ರು. ಅಕ್ಷತಾ ತನ್ನಮ್ಮನಿಗೆ ರಾಕಿಯನ್ನು  ಮಾತನಾಡಿಸಮ್ಮ, ಎಲ್ಲರನ್ನ ಮಾತನಾಡಿಸಿದ್ಯಾ ರಾಕಿನೂ ಮಾತನಾಡಿಸು ಪ್ಲೀಸ್ ಎಂದು ಎಷ್ಟು ಕನ್ವಿನ್ಸ್ ಮಾಡಿದ್ರೂ ಅಕ್ಷತಾ ಅಮ್ಮ ಪಟ್ಟು ಬಿಡಲಿಲ್ಲ. ಅವರಿಗೆ ರಾಕಿ ಬಗ್ಗೆ ಸಿಟ್ಟಿರುವುದು ನೇರವಾಗಿ ಗೊತ್ತಾಗುತ್ತಿತ್ತು. ನಾನು ಅವನನ್ನು ಮಾತನಾಡಿಸುವುದಿಲ್ಲವೆಂದು ನೇರವಾಗಿಯೇ ಹೇಳಿದ್ರು. ಕೊನೆಗೆ ರಾಕಿಯೇ ಬಂದು ಅಕ್ಷತಾ ಅಮ್ಮನನ್ನು ಆಂಟಿ, ನನ್ನ ಕಡೆಯಿಂದ ತಪ್ಪಿದ್ರೆ ಕ್ಷಮಿಸಿ ಎಂದಾಗ, ನೀನು ನನ್ನ ಮಗನಿದ್ದಾಗೆ ಬಿಡಪ್ಪಾ ಎಂದು ಮಾರ್ಮಿಕವಾಗಿ ಉತ್ತರಿಸಿ ಸುಮ್ಮನಾದ್ರು. ಮತ್ತಷ್ಟು ಮಾತನಾಡುವ ಭರದಲ್ಲಿದ್ದ ರಾಕಿಯನ್ನು ನಿಲ್ಲಿಸಿ ಅಕ್ಷತಾ ಅಮ್ಮ, ಕವಿತಾಳನ್ನು  ಕರೆದು ಮಾತನಾಡಿಸಿದ್ದಂತೂ ರಾಕಿಗೆ ಫೇಸ್ಔಟ್ ಮಾಡಿಸಿದ್ದಂತೂ ನಿಜ.ಒಟ್ಟಾರೆ ಅವಕಾಶ ಸಿಕ್ಕಿದ್ರೆ ರಾಕಿ ಕೆನ್ನೆಗೆ ಬಾರಿಸುವುದಕ್ಕೂ ಯೋಚಿಸ್ತಾ ಇರಲಿಲ್ಲ ಅಕ್ಷತಾ ಅಮ್ಮ.

Edited By

Kavya shree

Reported By

Kavya shree

Comments