ಜ್ಯೂಸ್ ಕುಡಿಸಿ ಮಹಿಳೆ ಮೇಲೆ ರೇಪ್ ಮಾಡಿದ ಉದ್ಯೋಗಿ ಅರೆಸ್ಟ್...!

10 Jan 2019 12:19 PM | Entertainment
164 Report

ಬೆಂಗಳೂರಿನಲ್ಲಿ ಟಿಕ್ಕಿಯೋರ್ವ ಮನೆಗೆ ಊಟಕ್ಕೆಂದು ಕರೆದು ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಮೇಲೆ ರೇಪ್ ಮಾಡಿದ ಆರೋಪದ ಮೇಲೆ ಸಾಫ್ಟವೇರ್ ಉದ್ಯೋಗಿಯನ್ನು ಬೆಳ್ಳಂದೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಅಂದಹಾಗೇ ಆರೋಪಿ ಮೈಕೆಲ್ ಸೊರೆಂಗ್(23) ಎಂಬಾತ ದೆಹಲಿ ಮೂಲದವನು ಎಂದು ತಿಳಿದು ಬಂದಿದೆ.ಈಗಾಗಲೇ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದು, ಈತ ರಾಂಚಿ ಮೂಲದ 32 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆಂಬ ಆರೋಪ ಇದೆ. ಆರೋಪದ ಮೇಲೆ ಮೈಕೆಲ್’ನನ್ನು ಬಂಧಿಸಲಾಗಿದೆ.

ಕಳೆದ ಸೆ.8 ರಂದು ಆ ಮಹಿಳೆಯನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದಾನೆ. ಊಟದ ನಂತರ ಜ್ಯೂಸ್ ನಲ್ಲಿ ನಿದ್ದೆ ಮಾತ್ರ ಹಾಕಿ,  ಬಳಿಕ ಅತ್ಯಾಚಾರ ನಡೆಸಿದ್ದಾನೆಂದು ತಿಳಿದು ಬಂದಿದೆ.ಇದಾದ ನಂತರ ಸಂತ್ರಸ್ತ ಮಹಿಳೆ ಇದನ್ನ ಪ್ರಶ್ನಿಸಿದ್ದಕ್ಕೆ, ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿದ್ದ. ಕೆಲವು ದಿನಗಳ ನಂತರ ಆಕೆಯೊಂದಿಗೆ ಸಂಪರ್ಕ ಕಡಿತ ಮಾಡಿಕೊಂಡಿದ್ದ ಟೆಕ್ಕಿ , ವಾಸವಿದ್ದ ಪ್ಲ್ಯಾಟ್ ಖಾಲಿಮಾಡಿದ್ದಾನೆ. ನಂಬಿಸಿ ಎಸ್ಕೇಪ್ ಆದ ವಿಷಯ ತಿಳಿದ ನೊಂದ ಮಹಿಳೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚರವೆಸಗಿದ ಆರೋಪದ ಮೇಲೆ ದೂರು ನೀಡಿದ್ದಾಳೆ. ಸದ್ಯ ಆರೋಪಿ ಪೊಲೀಸ್ ಅತಿಥಿಯಾಗಿದ್ದಾನೆ.

Edited By

Kavya shree

Reported By

Kavya shree

Comments