'ಲವ್ ಇನ್ ಮಂಡ್ಯ'ದಲ್ಲಿ ಪಾಸಾದ ನಟಿ ಸಿಂಧು ನಿಜ ಜೀವನದಲ್ಲಿ ಫೇಲಾಗಿದ್ಯಾಕೆ.....!!!

10 Jan 2019 11:37 AM | Entertainment
289 Report

ಸ್ಯಾಂಡಲ್'ವುಡ್   ನಟಿ ಸಿಂಧು ಲೋಕನಾಥ್ ಸದ್ದಿಲ್ಲದೇ ಮದುವೆಯಾಗಿದ್ದೂ ಈಗ ಹಳೆಯ ವಿಚಾರ. ಸದ್ಯ ನಟಿ ದಾಂಪತ್ಯ ಮುರಿದು ಬಿದ್ದಿದೆ. ಶ್ರೇಯಸ್ ಎಂಬಾತನೊಂದಿಗೆ ಅ.27, 2017 ರಂದು ಮದುವೆಯಾಗಿದ್ದ  ಸಿಂಧು ಲೋಕನಾಥ್, ದಿಢೀರ್ ಅಂತಾ ಡಿವೋರ್ಸ್ ಗೆ ಅಪ್ಲೈ ಮಾಡಿದ್ದಾರೆ. ನಟಿ ಸಿಂಧು ಲೋಕನಾಥ್ ಮಡಿಕೇರಿಯ ಪಾರ್ಟಿ ಹಾಲ್ ನಲ್ಲಿ ಶ್ರೇಯಸ್ ಎಂಬಾತನೊಂದಿಗೆ ಸಪ್ತಪದಿ ತಿಳಿದಿದ್ದರು. ಆದರೆ ಇವರ ವೈವಾಹಿಕ ಜೀವನ ಈಗ ಮುರಿದು ಬಿದ್ದಿದೆ. ನಾಲ್ಕು ವರ್ಷದ ಪ್ರೀತಿಗೆ ಸಿಂಧು ಲೋಕನಾಥ್ ಎಳ್ಳು- ನೀರು ಬಿಟ್ಟಿದ್ದಾರೆ. ದಾಂಪತ್ಯ ಜೀವನದಿಂದ ಸದ್ಯ ಮನೆಯಿಂದ ಹೊರ ಬಂದಿರುವ ಸಿಂಧು ಸದ್ಯ ಪಿಜಿಯಲ್ಲಿ ವಾಸವಾಗಿದ್ದಾರೆ.

ನಟಿ ಸಿಂಧು ಲೋಕನಾಥ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲವ್ ಇನ್ ಮಂಡ್ಯ, ಡ್ರಾಮಾ,ಕಾಫ್ ವಿತ್ ಮೈ ವೈಫ್, ಕೇಸ್ ನಂ18/9, ಯಾರೇ ಕೂಗಾಡಲೀ ಸೇರಿದಂತೇ ಅನೇಕ ಚಿತ್ರಗಳಲ್ಲಿ ಅಭಿನಯಿಇಸ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದರು. ಪತಿಯೊಂದಿಗೆ ತಮ್ಮ ಸಂಬಂಧ ಕಡಿದುಕೊಳ್ಳಲು ಸದ್ಯ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿಯೇ, ಕೊಡವ ಸಂಪ್ರದಾಯದಲ್ಲೇ ಶ್ರೇಯಸ್ ಎಂಬಾತನೊಂದಿಗೆ ಹೆಜ್ಜೆ ಹಾಕಿದ ಸಿಂಧು ಅವರ, ವೈವಾಹಿಕ ಜೀವನ ಅಷ್ಟಾಗಿ ಚೆನ್ನಾಗಿರಲಿಲ್ಲವೆಂಬ ಮಾಹಿತಿ ಇದೆ.

Edited By

Manjula M

Reported By

Kavya shree

Comments