ಅಪ್ಪಾಜಿ ನೆನೆದು ಎಮೋಷನಲ್ ಆಗಿ ಮಾತನಾಡಿದ್ರು ಅಪ್ಪು...?

08 Jan 2019 1:03 PM | Entertainment
692 Report

ಸ್ಯಾಂಡಲ್​ವುಡ್​ನ ಬೆರಳಣಿಕೆಯ ಟಾಪ್ ಸ್ಟಾರ್​ಗಳ ಪೈಕಿ ಪುನೀತ್ ರಾಜ್​ಕುಮಾರ್ ಕೂಡ ಒಬ್ಬರು. ಬೇರೆ ಭಾಷೆಗಳಿಗೂ ನಮ್ಮ ಕನ್ನಡಕ್ಕೂ ಒಂದು ಉತ್ತಮ ಸಂಬಂಧವಿದೆ. ಹೊರ ನಾಡಿನಿಂದ ಬಂದ ಸ್ಟಾರ್​ಗಳ ಸಿನಿಮಾ ಪ್ರಮೋಟ್​ನ್ನು ನಮ್ಮ ನಟರು ಮಾಡುತ್ತಾರೆ. ನಿನ್ನಯಷ್ಟೇ ತೆಲುಗಿನ ಎನ್​ಟಿಆರ್ ಕಥಾನಾಯಕುಡು ಚಿತ್ರದ ಪ್ರಚಾರ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೀತು. ಸಿನಿಮಾದ ಪ್ರಚಾರಕ್ಕೆ ತೆಲುಗಿನ ಸೂಪರ್​ ಸ್ಟಾರ್​ ನಂದಮೂರಿ ಬಾಲಕೃಷ್ಣ ಬೆಂಗಳೂರಿಗೆ ಬಂದಿದ್ರು.ಪ್ರಚಾರ ಕಾರ್ಯಕ್ರಮದ ವೇಳೆ ಮಾತನಾಡುತ್ತಾ ಬಾಲಕೃಷ್ಣ ಅವರು ವರನಟ ಡಾ.ರಾಜ್​ಕುಮಾರ್​ ಜೀವನಾಧಾರಿತ ಕಥೆ ನಿರ್ಮಾಣ ಮಾಡುವಂತೆ ಪುನೀತ್​ ರಾಜ್​ಮಾರ್​ಗೆ ಸಲಹೆ ನೀಡಿದ್ದಾರೆ. ಅಲ್ಲದೇ ಸಿನಿಮಾ ನಿರ್ದೇಶನವನ್ನು ನಾನೇ ಮಾಡ್ತೀನಿ ಅಂತಲೂ ಹೇಳಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರು ಅವರ ತಂದೆ ಎನ್​​​ಟಿ ರಾಮ್‌ರಾವ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ವೃತ್ತಿಬದುಕಿನಲ್ಲಿ ಅವಿಸ್ಮರಣೀಯ. ಭಾರತೀಯ ಚಿತ್ರರಂಗದಲ್ಲಿ ಮಗನೊಬ್ಬ ತನ್ನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಅಪರೂಪ.ಹಾಗೆಯೇ ನನಗೂ ಕೂಡ ನನ್ನ ತಂದೆ (ಡಾ. ರಾಜ್‌ಕುಮಾರ್) ಬಯೋಪಿಕ್‌ನಲ್ಲಿ ನಟಿಸೋ ಆಸೆಯಿದೆ.ಅಪ್ಪಾಜಿ ಸಿನಿಮಾದಲ್ಲಿ ನಟಿಸಬೇಕು. ಅವರು ಈಗ ನಮ್ಮೊಂದಿಗಿಲ್ಲ ಎಂಬ ನೋವಿಲ್ಲ. ಸದಾ ಅವರೊಂದಿಗೆ, ಅವರ ಕನಸೊಂದಿಗೆ ನಾವಿದ್ದೇವೆ. ನಾನು ಅದಾಗಲೇ ಬಾಲ್ಯದಲ್ಲಿ ಅವರ ಜೊತೆ ಸಿನಿಮಾ ಮಾಡಿದ್ದೇನೆ, ಅವರ ಪಾತ್ರದಲ್ಲಿ ನಟಿಬೇಕು ಎಂದು ಎಮೋಷನಲ್ ಆಗಿ ಮಾತನಾಡಿದ್ರು.

ಅಪ್ಪಾಜಿ ಅವರ ಜೀವನಶೈಲಿ, ಅವರ ಬದುಕಿನ ಪರಿಶ್ರಮಗಳನ್ನು ಸಿನಿಮಾ ತೆರೆ ಮೇಲೆ ತರಬೇಕು ಎಂದು ಸಿನಿಮಾ ನಿರ್ದೇಶಕರು, ನಿರ್ಮಾಪಕರು ಭಾರೀ ಶ್ರಮ ಪಡುತ್ತಿದ್ದಾರೆ. ಅದನ್ನು ದೃಶ್ಯ ರೂಪಕ್ಕೆ ತರಬೇಕು, ಅಭಿಮಾನಿಗಳಿಗಾಘಿ ಆ ಚಿತ್ರ ಬಯೋಪಿಕ್ ಆಗಿ ಬರಬೇಕು. ಆ ಸಿನಿಮಾದಲ್ಲಿ ನಾನು ಅಪ್ಪಾಜಿ ಪಾತ್ರದಲ್ಲಿ ನಟಿಸ ಬೇಕೆಂಬ ಮಹಾದಾಸೆ ಇದೆ ಎಂದರು. ಇದಕ್ಕೆ ನಂದಮೂರಿ ಬಾಲಕೃಷ್ಣ ಅವರು ಪುನೀತ್‌ ನಟಿಸಬೇಕು. ಇದನ್ನ ಅಣ್ಣಾವ್ರ ಅಭಿಮಾನಿಗಳೂ ಇಷ್ಟಪಡ್ತಾರೆ ಎಂದ್ರು. ಈ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್​, ಯಶ್, ಸೇರಿದಂತೆ ಹಲವರು ಭಾಗಿಯಾಗಿದ್ರು.

 

 

Edited By

Kavya shree

Reported By

Kavya shree

Comments