ತ್ರಿವಳಿ ಸ್ಟಾರ್​ಗಳ ಜುಗಲ್ ಬಂದಿ ಒಂದೇ ಸ್ಕ್ರೀನ್​ನಲ್ಲಿ : ಕೆಜಿಎಫ್ ನಲ್ಲಿದ್ದ ಆ ಅಯ್ಯಪ್ಪ ಯಾರು ಗೊತ್ತಾ...?

08 Jan 2019 10:47 AM | Entertainment
184 Report

ಅಂದಹಾಗೇ ಕನ್ನಡ ಚಿತ್ರವೊಂದನ್ನು ಇಡೀ ರಾಷ್ಟ್ರವೇ ತಿರುಗುವಂತೇ ಮಾಡಿದ್ದು ಸ್ಯಾಂಡಲ್​ವುಡ್​ನ ಹೈ ಬಜೆಟ್ ಚಿತ್ರ ಕೆಜಿಎಫ್. ಏಕ ಕಾಲದಲ್ಲಿ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಬೇರೆ ಭಾಷೆಗಳಿಗೆ ಸೆಡ್ಡು ಹೊಡೆದ ಸಿನಿಮಾ ಕೆಜಿಎಫ್. ಎಸ್..ಅಂದಹಾಗೇ ಸಿನಿಮಾ ಏನೋ ಸೂಪರ್ ಹಿಟ್ ಆಯ್ತು. ರಾಕಿಂಗ್ ಸ್ಟಾರ್ ಯಶ್ ಕೂಡ ನ್ಯಾಷನಲ್ ಸ್ಟಾರ್ ಆದ್ರು. ಅದರಲ್ಲಿ ಮತ್ತೊಂದು ಕ್ಯಾರೆಕ್ಟರ್ ಮೇಲೆ ನೋಡುಗರ ಕಣ್ಣು ಬೀಳದೆ ಇರಲು ಸಾಧ್ಯವಿಲ್ಲ. ಎಲ್ಲೋ ಒಂದು ಕಡೆ ಆ ಫೇಸ್​ಕಟ್ ನೋಡಿದ್ರೆ ಎಲ್ಲೋ ನೋಡಿದ ಹಾಗೇ ಅನಿಸುತ್ತೆ ಅಲ್ವಾ.. ವಿಲನ್ ಕ್ಯಾರೆಕ್ಟರ್ ನಲ್ಲಿ ಮಿಂಚಿದ ಗಡ್ಡ ವೇಷಧಾರಿ, ಗರುಡನ ಸಪೋರ್ಟ್ ಗೆ ನಿಂತಿದ್ದ ಕ್ಯಾರೆಕ್ಟರ್. ಕೆಜಿಎಫ್ನಲ್ಲಿ ಇವರ ಪಾತ್ರ ಸಣ್ಣದಾದ್ದರು ಅಭಿಮಾನಿಗಳು ಇವರನ್ನು ಗುರುತಿಸಿದ್ದು ಬೇರೆ ರೀತಿಯಲ್ಲೇ. ಅಂದಹಾಗೇ ಇವರು ಯಾರು ಗೊತ್ತಾ...

ಈಗಾಗಲೇ ಇವರ ಸಹೋದರರಿಬ್ಬರೂ ಸಿನಿಮಾದಲ್ಲಿ ಲ್ಯಾಂಡ್ ಆಗಿದ್ದಾರೆ.  ತಮ್ಮ ಕಂಚಿನಕಂಠದ ಮೂಲಕವೇ ಸ್ಯಾಂಡಲ್ ವುಡ್​ನಲ್ಲಿ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿರುವ ತ್ರಿವಳಿ ಸ್ಟಾರ್ಗಳು. ಇವರು ರಾಜ್ ಕುಮಾರ್ ಫ್ಯಾಮಿಲಿ ಥರಾನೇ ಇನ್ನೊಂದು ಫ್ಯಾಮಿಲಿಯಲ್ಲೂ ‘ತ್ರೀ’ ಬ್ರದರ್ಸ್ ಇದ್ದಾರೆ. ಅವರು ಕೂಡ ಸ್ಟಾರ್‌ಗಳೇ. ಅವರ ಅಭಿನಯಕ್ಕೆ ಕನ್ನಡ ಸಿನಿ ರಸಿಕರು ಬೋಲ್ಡ್ ಆಗಿರೋ ಉದಾಹರಣೆಗಳೇ ಹೆಚ್ಚು. ಅಂದ್ಹಾಗೇ, ಆ ತ್ರೀ ಬ್ರದರ್ಸ್ ಯಾರು ಗೊತ್ತಾ..? ಡೈಲಾಗ್‌ ಕಿಂಗ್ ಸಾಯಿ ಕುಮಾರ್‌, ಆರ್ಮುಗಂ ಖ್ಯಾತಿಯ ರವಿ ಶಂಕರ್ ಹಾಗೂ ಡೈರೆಕ್ಟರ್ ಕಮ್ ಆ್ಯಕ್ಟರ್‌ ಅಯ್ಯಪ್ಪ ಪಿ ಶರ್ಮ. ವಿಶೇಷ ಅಂದ್ರೆ, ಈ ಮೂವರು ಬ್ರದರ್ಸ್‌ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರ ಯಾವುದು ಗೊತ್ತಾ? ಭರಾಟೆ.

ಭರಾಟೆ 2019ರ ಬಹು ನಿರೀಕ್ಷಿತ ಸಿನಿಮಾ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಬಹದ್ದೂರ್‌ ಡೈರೆಕ್ಟರ್‌ ಚೇತನ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರೋ ಹೈ-ಬಜೆಟ್‌ ಚಿತ್ರವೇ ಭರಾಟೆ. ಶ್ರೀಮುರಳಿ ಲುಕ್ಸ್‌ ಹಾಗೂ ಟೀಸನ್‌ನಲ್ಲಿರೋ ಕಿಚ್ಚು ಹಚ್ಚುವ ಡೈಲಾಗ್‌ಗಳಿಂದಲೇ ಭರಾಟೆ ಚಿತ್ರ ಸಾಕಷ್ಟು ಸದ್ದು ಮಾಡಿದೆ. ಈಗ ‘ತ್ರಿ’ ಬ್ರದರ್ಸ್‌ ಒಂದೇ ಚಿತ್ರದಲ್ಲಿ ಪ್ರಥಮ ಬಾರಿಗೆ ಸಂಗಮವಾಗಿರೋದು ವಿಶೇಷ. ಭರಾಟೆ ಸಿನಿಮಾ ಈಗಾಗಲೇ ಭರ್ಜರಿ ಪ್ರಮೋಷನ್ ಮಾಡುತ್ತಿದೆ. ಮೂರು ಸಹೋದರರಿಗೂ ಒಳ್ಳೆಯ ಕ್ಯಾರೆಕ್ಟರ್ ಕೊಟ್ಟಿದ್ದೂ ಸಿನಿಮಾ ಶೂಟಿಂಗ್ ಮುಕ್ತಾಯ ಹಂತದಲ್ಲಿದೆ.

Edited By

Kavya shree

Reported By

Kavya shree

Comments