ನಾಳೆ ಬಂದ್ ಆದರೆ ಸಿನಿಮಾ ಶೂಟಿಂಗ್, ಚಿತ್ರ ಪ್ರದರ್ಶನ....?

07 Jan 2019 5:34 PM | Entertainment
297 Report

ನಾಳೆ ಭಾರತ್ ಬಂದ್ ಹಿನ್ನಲೆಯಲ್ಲಿ  ಬಹುತೇಕ ಕಾರ್ಯಗಳು ಸ್ತಬ್ಧಗೊಳ್ಳುವ ಸೂಚನೆ ಇದೆ. ಕಾರ್ಮಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ  ಬಂದ್ ಗೆ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳಿಗೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ನಾಳೆ ಸಾರ್ವಜನಿಕ ಕೆಲಸಗಳು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಕೇಂದ್ರದ ಕಾರ್ಮಿಕ  ನೀತಿಯನ್ನು ವಿರೋಧಿಸಿ ಅಖಿಲ ಭಾತೀಯ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಈಗಾಗಲೇ ಅನೇಕ ಸಂಘ  ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು ಬಂದ್ ಗೆ ಸಾರ್ವಜನಿಕರು.,ಸಂಘ ಸಂಸ್ಥೆಗಳು ಸಹಕರಿಸುವಂತೆ ಮನವಿ ಮಾಡಿಕೊಂಡಿವೆ. ಸ್ಯಾಂಡಲ್’ವುಡ್ ಕೂಡ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ. ಅಂದಹಾಗೇ ಸ್ಯಾಂಡಲ್ ವುಡ್ ನಲ್ಲಿ ಬೆಂಬಲ ಸೂಚಿಸಿದ್ರೂ ಅದೂ ನೈತಿಕವಾಗಿರುತ್ತದೆಯಂತೆ.

ಆದರೆ ಸಿನಿಮಾ ಶೂಟಿಂಗ್ ಆಗಲಿ, ಚಿತ್ರ ಪ್ರದರ್ಶನವಾಗಲೀ ಯಾವುದೇ ತೊಂದರೆಗಳಿಲ್ಲದೇ ನಡೆಯುತ್ತದೆ ಎಂಬುದನ್ನು ಫಿಲ್ಮ ಚೇಂಬರ್ ನ ಅಧ್ಯಕ್ಷರಾದ ಚಿನ್ನೇಗೌಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಮಗೆ ಇಲ್ಲಿಯವರೆಗೂ ಯಾರು ಬೆಂಬಲ ನೀಡಿ ಎಂದು ಮನವಿ ಮಾಡಿಲ್ಲ. ಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ನೈತಿಕ ಬೆಂಬಲ ನೀಡುವ ನಿರ್ಧಾರವನ್ನ ತೆಗೆದುಕೊಂಡಿದ್ದೇವೆ. ಕಪ್ಪು ಪಟ್ಟಿ ಹಿಡಿದುಕೊಳ್ಳುವ ಮೂಲಕ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಫಿಲ್ಮ್‌ ಛೇಂಬರ್‌ನ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅಧ್ಯಕ್ಷರಾದ ಚಿನ್ನೇಗೌಡರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Edited By

Kavya shree

Reported By

Kavya shree

Comments