ಹೊಸ ಸುದ್ದಿ ನೀಡಿ ಕನ್ನಡಿಗರಿಗೆ ಶಾಕ್ ಕೊಟ್ಳು ಡಿಪ್ಪಿ...!!!

07 Jan 2019 4:06 PM | Entertainment
2602 Report

ಈ ಹಿಂದೆ ಮಾದಕವಾದ ಫೋಟೋ ಹಾಕಿ ದೀಪಿಕಾ ತಮ್ಮ ಇನ್ಸ್ ಟ್ರಾಗ್ರಾಂ ಖಾತೆಯಲ್ಲಿ ಸದ್ಯದಲ್ಲೇ ನಿಮಗೊಂದು ಹೊಸ ಸುದ್ದಿ ನೀಡುತ್ತಿದ್ದೇನೆ ಎಂದಷ್ಟೇ ಹೇಳಿ ಕುತೂಹಲ ಹೆಚ್ಚು ಮಾಡಿದ್ದರು. ಅಂದಹಾಗೇ ದೀಪಿಕಾ ಪಡುಕೋಣೆ ಇತ್ತೀಚಿಗಷ್ಟೇ ಮದುವೆಯಾಗಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಬಾನಂಗಳದಲ್ಲಿ ಬಹು ಎತ್ತರಕ್ಕೆ ಬೆಳೆದಿರುವ ನಮ್ಮ ಕನ್ನಡದ ಹುಡುಗಿ ದೀಪಿಕಾ, ತಮ್ಮ ಅಭಿಮಾನಿಗಳಿಗೆ ಒಂದು ಹೊಸ ನ್ಯೂಸ್ ಶೇರ್ ಮಾಡ್ತಿದ್ದಾರೆ. ಹೊಸ ಸುದ್ದಿ ಅಂದ್ರೆ ಥಟ್ಟನೆ ನೆನಪಾಗೋದು ಅವರಿಂದ ಗುಡ್’ನ್ಯೂಸ್ ಅಂತಾ.ನೀವ್ ತಿಳ್ಕೊಂಡಿರೋ ಥರಾ ಅಲ್ಲ... ಖಂಡಿತಾ ಅಲ್ಲ. ಅಂದಹಾಗೇ ದೀಪಿಕಾ ಪಡುಕೋಣೆ ಹೆಸರಿನಲ್ಲಿ ಒಂದು ಹೊಸ ವೆಬ್’ಸೈಟ್ ಲಾಂಚ್ ಆಗಿದೆ.

ದೀಪಿಕಾರ ಹೊಸ ವೆಬ್ ಸೈಟ್ ಲೇಔಟ್ ಹಾಗೂ ಡಿಸೈನ್ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ಲಾಗಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾಗೆ ಸೋಷಿಯಲ್ ಮೀಡಿಯಾದಲ್ಲಿ 75 ಮಿಲಿಯನ್ ಗಿಂತಲೂ ಜಾಸ್ತಿ ಅಭಿಮಾನಿಗಳಿದ್ದಾರೆ. ಟ್ವಿಟರ್ ನಲ್ಲಿ ಅತೀ ಹೆಚ್ಚು ಫಾಲೋ ಆಗುವ ಏಷಿಯನ್ ನಟಿಯೂ ಹೌದು.... ಬಾಲಿವುಡ್'ನಲ್ಲಿಯೇ ಫ್ಯಾಷನ್ ಹೀರೋಯಿನ್ ಅಂತಾ ಕರೆಸಿಕೊಳ್ಳುವ ದೀಪಿಕಾ ಪಡುಕೋಣೆ ಪ್ರತೀ ಕಾರ್ಯಕ್ರಮದಲ್ಲಿಯೂ ಫ್ಯಾಷನ್'ನಿಂದ ಸುದ್ದಿಯಾಗುತ್ತಾರೆ. ದೀಪಿಕಾ ಕೇವಲ ಫ್ಯಾಶನ್ ಗೆ ಮಾತ್ರ ಸೀಮಿತವಾಗಿಲ್ಲ. ಅವರ ಸಿನಿಮಾ, ಸಾಮಾಜಿಕ ಕಾರ್ಯಗಳು, ಪ್ರಶಸ್ತಿಗಳು, ಜೀವನ, ಕರಿಯರ್ ಹೀಗೆ ಸಮಗ್ರ ಚಿತ್ರಣ ವೆಬ್ ಸೈಟ್ ನಲ್ಲಿದೆ. ದೀಪಿಕಾ ಇದುವರೆಗೂ ಮಾಡಿರುವ ಸಿನಿಮಾಗಳು, ಪಡೆದುಕೊಂಡ ಪ್ರಶಸ್ತಿಗಳು ಇವೆಲ್ಲದರ ಸಂಪೂರ್ಣ ವಿವರ ಇಲ್ಲಿದೆ. ಆದರೆ ಕನ್ನಡ ಚಿತ್ರದ ವಿವರವನ್ನೇ ಹಾಕಿಲ್ಲ.

 

ಅಂದಹಾಗೇ ಇವರ ಈ ಹೊಸ ವೆಬ್ಸೈಟ್ ಸಿಕ್ಕಾಪಟ್ಟೆ ಸದ್ದಾಗುತ್ತಿದ್ದು, ದೀಪಿಕಾಳಿಂದ ಮತ್ತಷ್ಟು ನಿರೀಕ್ಷೆ ಮಾಡಲಾಗುತ್ತಿದೆ. ಆದರೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೇ ಆಕೆ ಕನ್ನಡ ಸಿನಿಮಾದ ಮೂಲಕ. ಅಂದಹಾಗೇ ರಿಯಲ್ ಸ್ಟಾರ್ ಉಪೇಂದ್ರ ಅವರ ಐಶ್ವರ್ಯ ಸಿನಿಮಾ ಮೂಲಕ ಸಿನಿಮಾ ಜನಗತ್ತಿಗೆ ಕಾಲಿಟ್ಟ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್’ನಲ್ಲಿ ಬಹು ಬೇಡಿಕೆ ನಟಿ. ವಿಪರ್ಯಾಸವೆಂದರೆ ಆಕೆ ವೆಬ್ ಸೈಟ್'ನಲ್ಲಿ ದೀಪಿಕಾಳ ಕನ್ನಡ ಸಿನಿಮಾ ಐಶ್ವರ್ಯ ಹೆಸರೇ ಇಲ್ಲ.

Edited By

Kavya shree

Reported By

Kavya shree

Comments