ಆ್ಯಂಕರ್ ಅನುಶ್ರೀ ರಿಯಾಲಿಟಿ ಶೋನಲ್ಲಿ sorry ಕೇಳಿದ್ಯಾರಿಗೆ...?

07 Jan 2019 9:50 AM | Entertainment
272 Report

ಕನ್ನಡದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಥಟ್ಟನೆ ನೆನಪಾಗೋದು ಅನುಶ್ರೀ ಹೋಸ್ಟ್ ಮಾಡುವ ಜೀ  ವಾಹಿನಿಯ ರಿಯಾಲಿಟಿ ಶೋ ಸರಿಗಮಪ.  ಶೋ ನಲ್ಲಿ ತನ್ನ ಹಾಡಿನ ಮೂಲಕ ಎಲ್ಲರನ್ನು ಸೆಳೆದ ಮುಗ್ಧ ಯುವಕ ಹನುಮಂತ ಇಂದು ರಿಯಾಲಿಟಿ ಶೋ ಸಿಂಗಿಂಗ್ ಸ್ಟಾರ್. ಎಲ್ಲೋ ಹಳ್ಳಿಗಾಡಿನ ಗುಡ್ಡದಲ್ಲಿ ತನ್ನ ಪಾಡಿಗೆ ಹಾಡು ಹೇಳ್ಕೊಂಡು ಕುರಿಮೇಯಿಸ್ತಿದ್ದ ಯುವಕನಿಗೆ ಇಡೀ ಕರ್ನಾಟಕವೇ ಫಿದಾ ಆಗಿದೆ. ಅವನ ಧ್ವನಿಗೆ, ಕೋಟ್ಯಾಂತರ ಕನ್ನಡಿಗರು ಮನ ಸೋತಿದ್ದಾರೆ. ಇತ್ತೀಚಿಗಷ್ಟೇ ನಿರ್ದೇಶಕ ಯೋಗರಾಜ್ ಭಟ್ ಕೂಡ ಹನುಮಂತಪ್ಪನಿಗೆ ಸಿನಿಮಾದಲ್ಲಿ  ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಆದರೆ ಶೋ ಹೋಸ್ಟ್ ಮಾಡುತ್ತಿದ್ದ ಅನುಶ್ರೀ ಸ್ಪರ್ಧಿಗಳ ಕಾಲೆಳೆದು  ನಗಿಸುತ್ತಿದ್ದವರು ದಿಢೀರ್ ಅಂತಾ ಕ್ಷಮೆ ಕೇಳಿದ್ದಾರೆ. ಅದು ಹನುಮಂತಪ್ಪ ಅವರ ವಿಚಾರವಾಗಿ.

ಅಂದಹಾಗೇ ಹನುಮಂತಪ್ಪ ಲಂಬಾಣಿ ಜನಾಂಗದ ಯುವಕ. ತಾಯಿಯನ್ನು ಅಪಾರವಾಗಿ ಪ್ರೀತಿಸುವ ಹನುಮಂತಪ್ಪ ತಾಯಿಯನ್ನು ಶೋಗೆ ಕರೆಸಲಾಗಿತ್ತು. ಲಂಬಾಣಿ ಉಡುಗೆ ತೊಟ್ಟ ಆ ತಾಯಿಯನ್ನು ನೋಡಿ, ನಿರೂಪಕಿ ಅನುಶ್ರೀ , ತಾನು ಹಾಗೇ ಲಂಬಾಣೀ ಡ್ರೆಸ್ ಹಾಕ್ಕೋಬೇಕು. ನೀವೆ ತಂದುಕೊಡಿ ಎಂದು ಈ ಹಿಂದೆ ಕೇಳಿ ಕೊಂಡಿದ್ದರು.ಅದರಂತೇ ಈ  ಎಪಿಸೋಡ್ ನಲ್ಲಿ ಹನುಮಂತಪ್ಪ ತಾಯಿ ತಂದುಕೊಟ್ಟಿದ್ದ ಧಿರಿಸನ್ನು ಧರಿಸಿ ಸಂತಸ ಹಂಚಿಕೊಂಡ ಅನುಶ್ರೀ ಕ್ಷಮೆ ಕೂಡ ಕೇಳಿದ್ದಾರೆ.'ತಮ್ಮ ಹನುಮಂತ  ಅವರ ತಾಯಿಯ ಉಡುಗೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಅನುಶ್ರೀ ಅವರು, ಕಾರ್ಯಕ್ರಮದ ನಿರೂಪಣೆ ಸಂದರ್ಭದಲ್ಲಿ ಈ ಉಡುಗೆ ತೊಟ್ಟಿದ್ದರಿಂದ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.

'ನಾನು ಈ ಬಟ್ಟೆಯನ್ನು ಧರಿಸಿರುವುದಕ್ಕೆ ಸಂತೋಷವಾಗುತ್ತಿದೆ. ಅವರು ನನಗೆ ಕೊಟ್ಟ ಗೌರವ ಇದು ಎಂದು ಭಾವಿಸುತ್ತೇನೆ. ಯಾರ ಭಾವನೆಗೂ ಧಕ್ಕೆ ತರುವ, ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಅನುಶ್ರೀ ವೇದಿಕೆಯಲ್ಲಿ ಹೇಳಿದ್ದಾರೆ. ಉಡುಗೆ ತೊಟ್ಟು ನನಗೆ ಮನಸ್ಸಿನ ಸಂತೋಷ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಅದರ ಹೊರತಾಗಿ ಯಾರ ಧರ್ಮಕ್ಕೂ, ಜನಾಂಗಕ್ಕೂ ನೋವು ತರುವ ಉದ್ದೇಶ ನನಗಿಲ್ಲ ಎಂದು ಸ್ಸಾರಿ ಕೇಳಿದ್ದಾರೆ.

Edited By

Kavya shree

Reported By

Kavya shree

Comments