ಪುನೀತ್ ಮನೆಯಲ್ಲಿ ಸ್ಟೇ, ಯಶ್ ಮನೆಯಲ್ಲಿ ಊಟ ಮಾಡಿದ ಐಟಿ ಅಧಿಕಾರಿಗಳು..!!!

04 Jan 2019 3:41 PM | Entertainment
356 Report

ನಿನ್ನೆ ಇಡೀ ಸ್ಯಾಂಡಲ್’ವುಡ್’ನ್ನೇ ಬೆಚ್ಚಿ ಬೀಳಿಸಿದ ಐಟಿ ಅಧಿಕಾರಿಗಳು, ಸ್ಟಾರ್’ಗಳ ಮನೆಯಲ್ಲಿ ಮಾಡಿದ್ದೇನು ಗೊತ್ತಾ…? ನಿನ್ನೆ ಕನ್ನಡದ ಸೂಪರ್ ಸ್ಟಾರ್’ಗಳು ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿದ್ದರು. ಇದ್ದಕ್ಕಿದ್ದ  ಹಾಗೇ  ಐಟಿ ಅಧಿಕಾರಿಗಳು ಸುದೀಪ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಮತ್ತು ಯಶ್ ಅವರ ಮನೆಗೆ ಏಕಕಾಲದಲ್ಲಿಯೇ ದಿಢೀರ್ ದಾಳಿ ನಡೆಸಿ ಶಾಕ್ ಕೊಟ್ಟರು. ಶೂಟಿಂಗೆಗೆಂದು ತೆರಳಿದ್ದ ಸುದೀಪ್ ಬೆಂಗಳೂರಿಗೆ ವಾಪಸ್ ಆದರು. ಮನೆ ಮೇಲೆ ರೈಡ್ ಆದಾಗ ಯಶ್ ಗೂ ಮಾಹಿತಿ ಇರಲಿಲ್ಲವಂತೆ.ಇಂದು ಕೂಡ ಐಟಿ ಅಧಿಕಾರಿಗಳ ವಿಚಾರಣೆ ಮುಂದುವರೆದಿದೆ.

 ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.  ಸುಮಾರು ಧೀರ್ಘಕಾಲ ಸ್ಟಾರ್ ನಿವಾಸಗಳಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ತಡರಾತ್ರಿ 11 ಗಂಟೆವರೆಗೂ ತಪಾಸಣೆ ನಡೆಸಿ ಹಿಂದಿರುಗಿದ್ದರು. ನಿನ್ನೆ ಪುನೀತ್ ರಾಜ್ ಕುಮಾರ್  ಅವರ ಮನೆಯ ಮೇಲೆ ರೈಡ್ ಮಾಡಿದ್ದ ಅಧಿಕಾರಿಗಳಿಗೆ ಅವರ ಮನೆಯಲ್ಲಿಯೇ ತಂಗುವ ವ್ಯವಸ್ಥೆ ಮಾಡಲಾಗಿತ್ತು.ಇಂದು ಬೆಳಗ್ಗೆ ಮತ್ತೆ ಸುದೀಪ್ ಮನೆಗೆ ತೆರಳಿದ ಅಧಿಕಾರಿಗಳು ಸುದೀಪ್ ತಾಯಿಯನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರೆನ್ನಲಾಗಿದೆ.  ಅಷ್ಟೇ ಅಲ್ಲಾ ಮದ್ಯಾಹ್ನದ ಊಟವನ್ನು ಸುದೀಪ್ ಮನೆಗೆ ತರಿಸಿಕೊಂಡಿದ್ದಾರೆ.  ಪರಿಶೀಲನ ಬಳಿಕ ಕೆಲವು ಪ್ರೊಸೀರ್ಸ್ ನಡೆಸಿ  ಅಧಿಕಾರಿಗಳು ವಾಪಸ್ ಆಗಲಿದ್ದಾರೆ.

ಇತ್ತ ಯಶ್ ಮನೆಯಲ್ಲಿ ಕೂಡ ತಪಾಸಣೆ ಕಾರ್ಯ ಜೋರಾಗಿದೆ. ಸುಮಾರು  ತಾಸು ನಿವಾಸದಲ್ಲಿದ್ದ ಕೆಲವು ದಾಖಲೆಗಳನ್ನು  ಪರಿಶೀಲಿಸಿದ ಅಧಿಕಾರಿಗಳು ಯಶ್ ಅವರಿಗೂ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ತಪಾಸಣೆ ವೇಳೆ ಮೂರು ಬ್ಯಾಗ್​​​ಗಳನ್ನು ಐಟಿ ಅಧಿಕಾರಿಗಳು ಹೊತ್ತೊಯ್ದಿದ್ದಾರೆ. ಇನ್ನು ಐಟಿ ಅಧಿಕಾರಿಗಳಿ ಯಶ್​​​ ಮನೆಯಲ್ಲೇ ಊಟದ ವ್ಯವಸ್ಥೆ ಕೂಡಾ ಮಾಡಲಾಗಿತ್ತು.ಕಿಚ್ಚನ ಮನೆಗೆ ಆಗಮಿಸಿರುವ ಹಿರಿಯ ಐಟಿ ಅಧಿಕಾರಿಗಳು ಸುದೀಪ್ ಆತ್ಮೀಯ ಸ್ನೇಹಿತರಾದ ಜಾಕ್ ಮಂಜು ಆಫೀಸ್​ನಿಂದ ಜೆರಾಕ್ಸ್​​, ಪ್ರಿಂಟಿಂಗ್ ಮಷೀನ್ ತರಿಸಿಕೊಂಡಿದ್ರು. ಸದ್ಯ ಐಟಿ ಅಧಿಕಾರಿಗಳ ತಪಾಸಣೆ ಮುಂದುವರೆದಿದೆ. ಇದೀಗ ಅಧಿಕಾರಿಗಳು ಮಧ್ಯಾಹ್ನದ ಊಟವನ್ನು ತರಿಸಿಕೊಂಡಿದ್ದಾರೆ. ಊಟದ ಬಳಿಕ ಮತ್ತೆ ದಾಖಲೆಗಳ ಪರಶೀಲನೆ ಮುಂದುವರೆಯಲಿದೆ.

Edited By

Kavya shree

Reported By

Kavya shree

Comments