ನಿಖಿಲ್ ‘ಕಲ್ಯಾಣ’ಕ್ಕೆ ಡೇಟ್ ಫಿಕ್ಸ್..!! ಯಾವಾಗ ಗೊತ್ತಾ..?

04 Jan 2019 1:45 PM | Entertainment
5552 Report

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರಗಳಲ್ಲಿ ನಿಖಿಲ್ ಕುಮಾರ್ ಸ್ಬಾಮಿ ಅಭಿನಯದ ಸೀತಾರಾಮ ಕಲ್ಯಾಣ ಕೂಡ ಒಂದು..ಜಾಗ್ವಾರ್ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡು ಕೊಂಡರು..ನಿಖಿಲ್ ಕುಮಾರಸ್ವಾಮಿ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ 'ಸೀತಾರಾಮ ಕಲ್ಯಾಣ' ಇಧೆ  ಜ. 25 ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಪೋಸ್ಟರ್ ಮತ್ತು ಟ್ರೇಲರ್’ನಿಂದಲೇ ಸಾಕಷ್ಟು ಕ್ಯೂರಾಸಿಟಿಯನ್ನು ಈ ಸಿನಿಮಾ ಕ್ರಿಯೆಟ್ ಮಾಡಿದೆ..

ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕನಾಗಿ, ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ನೂರಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚೆನ್ನಾಂಬಿಕಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅನಿತಾ ಕುಮಾರಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕಾಗಿ ನಟಿ ರಚಿತಾ ರಾಮ್ ಕೇವಲ 25 ದಿನಗಳಲ್ಲಿ 7 ಕೆಜಿ ಇಳಿಸಿಕೊಂಡಿದ್ದಾರೆ. ಚಿತ್ರ ರಿಲೀಸ್ ಗೂ ಮುನ್ನ ಸೀತಾರಾಮ ಕಲ್ಯಾಣ ಹಿಂದಿ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 5.5 ಕೋಟಿಗೆ ಮಾರಾಟವಾಗಿದೆ. ಆರ್ ಕೆ ಸ್ಟುಡಿಯೋಸ್ ಈ ಹಕ್ಕನ್ನು ಖರೀದಿ ಮಾಡಿದ್ದಾರೆ..ಸಿನಿಮಾದ ಬಗ್ಗೆ ಸಿನಿರಸಿಕರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಸಿನಿಮಾ ತೆರೆ ಕಂಡ ಮೇಲೆ ಸಿನಿರಸಿಕರು ಏನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..

Edited By

Manjula M

Reported By

Manjula M

Comments