‘ಗೂಗ್ಲಿ’ಯ ಡಾಕ್ಟ್ರಮ್ಮನ ಹಾಟ್ ಪೋಟೋ ಶೂಟ್…!! ಪೋಟೋ ಗ್ಯಾಲರಿ

04 Jan 2019 10:35 AM | Entertainment
1001 Report

 ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕಿಯರಲ್ಲಿ ಗೂಗ್ಲಿ ಖ್ಯಾತಿಯ ಕೃತಿ ಕರಬಂಧ ಕೂಡ ಒಬ್ಬರು.. ಮಾಡಿದ್ದು ಬೆರಳೆಣಿಯಷ್ಟೆ ಸಿನಿಮಾವಾದರೂ ಕೂಡ ತನ್ನದೆ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಕೃತಿಯ ಅಂದ ಚಂದ ಅವಳ ನಗು ಎಲ್ಲವೂ ಕೂಡ ಪಡ್ಡೆ ಹೈಕಳ ನಿದ್ದೆ ಕೆಡಿಸಿದಂತೂ ಸುಳ್ಳಲ್ಲ..ಇಲ್ಲೆ ಎಲ್ಲೋ ನನ್ನ ಮನಸು ಮಾಯಾವಾಗಿದೆ ಎನ್ನುತ್ತಿದ ಕೃತಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ… 'ಗೂಗ್ಲಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡಿದ ಚೆಲುವೆ ನಟಿ ಕೃತಿ ಕರಬಂಧ ತಮ್ಮ ಹಾಟ್ ಫೋಟೋಶೂಟ್ ಮೂಲಕ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಕೆಡಿಸಲು ರೆಡಿಯಾಗಿದ್ದಾರೆ..

ಕನ್ನಡ, ತೆಲುಗು ಸೇರಿದಂತೆ ಬಾಲಿವುಡ್​ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್​ನಲ್ಲಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಕೃತಿ ಕರಬಂಧ ತಮ್ಮ ಹಾಟ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. ನೋಡಿದವರೆಲ್ಲಾ ಬಾಯಿ ಮೇಲೆ ಬೆರಳು ಇಟ್ಟು ಕೊಳ್ಳುವ ರೀತಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನೋಡಿದವರು ಇವಳೇನಾ ನಮ್ಮ ಕೃತಿ ಕರಬಂಧ ಎನ್ನುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಿರುವ ಈಕೆ ಬಿಡುವು ಮಾಡಿಕೊಂಡು ಪೋಟೋ ಶೂಟ್ ಮಾಡಿಸಿದ್ದಾರೆ.

Edited By

Manjula M

Reported By

Manjula M

Comments