ರಾತ್ರೋರಾತ್ರಿ ಪವರ್ ಸ್ಟಾರ್ ಪುನೀತ್ ಮನೆ ಮುಂದೆ ಕಾಣಿಸಿಕೊಂಡ ಡಿಕೆಶಿ..!! ಕಾರಣ ಏನ್ ಗೊತ್ತಾ..?

04 Jan 2019 9:46 AM | Entertainment
657 Report

ನೆನ್ನೆ ಸ್ಯಾಂಡಲ್ ವುಡ್ ಗೆ ಬ್ಯಾಡ್ ಡೇ ಅನಿಸುತ್ತದೆ. ಯಾರು ಊಹಿಸೇ ಇರಲಿಲ್ಲ. ಈ ರೀತಿ ಆಗುತ್ತದೆ ಎಂದು .. ನೆನ್ನೆ ಬೆಳ್ಳಂಬೆಳಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ನಿವಾಸದ ಮೇಲೆ ಐಟಿ ರೈಡ್ ಮಾಡಿರೋದರಿಂದ ಸಾಕಷ್ಟು ತಲೆ ಬಿಸಿ ಮಾಡಿಕೊಂಡಿದ್ದಾರೆ.. ‘ವುಡ್'ನ ಕೆಲ ಸ್ಟಾರ್’ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದೆ.  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪುನೀತ್ ಸೇರಿದಂತೇ ರಾಕಿಂಗ್ ಸ್ಟಾರ್ ನಟ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೂ ಐಟಿ ರೈಡ್ ಆಗಿದೆ.ವಿಜಯ್ ಕಿರಂಗದೂರು, ಮನೋಹರ ಮನೆ ಮೇಲೆ ಬೆಳ್ಳಂಬೆಳ್ಳಗೆ ಐಟಿ ದಾಳಿ ನಡೆಸಿದ್ದಾರೆ. ನೆನ್ನೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ನಾಲ್ವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.  ತನಿಖೆ ನಡೆಸುತ್ತಿರುವ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.

ಇನ್ನೂ ಇದೇ ಹಿನ್ನಲೆಯಲ್ಲಿ, ನಿನ್ನೆ ರಾತ್ರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆ ಮುಂದೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತ್ಯಕ್ಷವಾಗಿದ್ದರು.ಎಸ್…  ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಪುನೀತ್ ರಾಜ್ ಕುಮಾರ್ ಮನೆ ಬಳಿಯೇ ಸಚಿವರು ಬಂದು ಅಪ್ಪು ಅಭಿಮಾನಿಗಳಲ್ಲಿ ಧೈರ್ಯ ತುಂಬಿದ ಘಟನೆ ನಡೆದಿದೆ ಎನ್ನಲಾಗುತ್ತಿದೆ.. ಪುನೀತ್ ರಾಜ್ ಕುಮಾರ್ ಮನೆ ಬಳಿಯೇ ಸಚಿವರು ತಮ್ಮ ಕಾರಿನಿಂದ ಇಳಿದು, ಏನೂ ಆಗೋದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಪ್ಪು ಅಭಿಮಾನಿಗಳಲ್ಲಿ ಧೈರ್ಯ ತುಂಬಿ ನಂತರ ನಡೆದುಕೊಂಡೇ ಮನೆಗೆ ಹೋಗಿದ್ದಾರೆ . ಈ ಹಿಂದೆ ಡಿಕೆಶಿ ಮನೆ ಮೇಲೂ ಐಟಿ ರೈಡ್ ಮಾಡಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಡಿಕೆಶಿ ಬಹಳ  ಅಚ್ಚುಕಟ್ಟಾಗಿ ಅದನ್ನ ನಿಭಾಯಿಸಿದ್ದರು.  ಡಿಕೆಶಿ ಅವರನ್ನೂ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದನ್ನ ಈ ಸಂದರ್ಭದಲ್ಲಿ ನೆನಸಿಕೊಳ್ಳಬಹುದು..

Edited By

Manjula M

Reported By

Manjula M

Comments