ಶಬರಿಮಲೆ ಪ್ರವೇಶಿಸಿದ ಆ ಮಹಿಳೆಯರ ಬಗ್ಗೆ ನಟಿ ಶ್ರೀರೆಡ್ಡಿ ಹೇಳಿದ್ದೇನು...?

03 Jan 2019 3:58 PM | Entertainment
293 Report

ಶಬರಿಮಲೆಗೆ ಇಬ್ಬರು ಮಹಿಳೆಯರು ಪ್ರವೇಶಿಸಿರುವ ವಿಚಾರ ಇಂದು ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ, ಘಟನೆ  ತೀವ್ರ ವಿಕೋಪಕ್ಕೆ ಹೋಗಿದ್ದು  ಕೇರಳಾದ್ಯಂತ ಬಂದ್ ಆಚರಣೆಯಾಗುತ್ತಿದೆ. ಈ ವಿಚಾರ ಭಾರೀ ಭುಗಿಲೆದ್ದಿದ್ದು ಸಿನಿಮಾ ರಂಗದಲ್ಲಿನ ಕೆಲ ನಟಿಯರು ಕೂಡ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್  ಕಾಸ್ಟಿಂಗ್ ಕೌಚ್ ನಲ್ಲಿ ಭಾರೀ ಸುದ್ದಿಯಾಗಿದ್ದ ನಟಿ ಶ್ರೀರೆಡ್ಡಿ ಸಹ ಮಾತನಾಡಿ ಶಬರಿ ಮಲೆ ಪ್ರವೇಶಿಸಿದ ಮಹಿಳೆಯರ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.ವಿವಾದದ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರೆಡ್ಡಿ  ಮಹಿಳೆಯರು ದೇವಾಲಯ ಪ್ರವೇಶಿಸುತ್ತಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಅವರು  "ನಾನು ಹೆಣ್ಣುಮಕ್ಕಳನ್ನು ಗೌರವಿಸುತ್ತೇನೆ, ಏಕೆಂದರೆ ಅವರು ಕೆಲವು ಮೌಲ್ಯಗಳನ್ನು ಹೊಂದಿರುತ್ತಾರೆ.ಆದರೆ ಸಂಪ್ರದಾಯ ವಿರೋಧಿಗಳಾಗಬೇಡಿ ಎಂದಿದ್ದಾರೆ. ದೇವಾಲಯದ ಸಂಪ್ರದಾಯಗಳಿಗೂ ಬೆಲೆ ನೀಡಿ,ಅನಾದಿ ಕಾಲದಿಂದಲೂ ಜಾರಿಯಲ್ಲಿರುವ ನಂಬಿಕೆ ಸುಡಬೇಡಿ, ಹಿಂದೂ ಧರ್ಮವನ್ನು ರಕ್ಷಿಸಿ, ಅಯ್ಯಪ್ಪ ದೇವರು, ಧಾರ್ಮಿಕ ಮೌಲ್ಯಗಳನ್ನು ಗೌರವಿಸಬೇಕೆಂಬುದು ನನ್ನ ನಂಬಿಕೆ, ದೇವರಿಗೆ ಅಪಚಾರವೆಸಗಿದರೆ ಅದು ಹೆಣ್ಣುಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ನಟಿ ಬರೆದುಕೊಂಡಿದ್ದಾರೆ. ಕಾಸ್ಟಿಂಗ್ ಕೌಚ್  ವಿಚಾರದಲ್ಲಿ  ಬಹಳವಾಗಿ ವಿರೋಧ ಕಟ್ಟಿಕೊಂಡಿದ್ದ ಶ್ರೀ ರೆಡ್ಡಿ ಸದ್ಯ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಪಡೆದ ಮಹಿಳೆಯರನ್ನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲಾ ನಟಿ ಶ್ರೀ ರೆಡ್ಡಿ ಸಿನಿಮಾ ರಂಗದಲ್ಲಿ ಆಗುತ್ತಿರುವ ಕಾಸ್ಟಿಂಗ್ ಕೌಚ್'ನ್ನು ಅರೆಬೆತ್ತಲೆಯಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿ ಇಡೀ ಟಾಲಿವುಡ್ ನ್ನೇ ಬೆಚ್ಚಿಬೀಳಿಸಿದ್ರು. ಅವರ ಪ್ರತಿಭಟನೆಗೆ ಅನೇಕ ಟಾಲಿವುಡ್ ನಟ-ನಟಿಯರು ವಿರೋಧ ವ್ಯಕ್ತಪಡಿಸಿದ್ದಾರೆ.

Edited By

Kavya shree

Reported By

Kavya shree

Comments