ಐಟಿ ದಾಳಿ ಬಗ್ಗೆ ಸುದೀಪ್ ಮೊದಲ ಬಾರಿಗೆ ಹೇಳಿದ್ದೇನು ಗೊತ್ತಾ..? ವಿಡಿಯೋ ನೋಡಿ

03 Jan 2019 3:11 PM | Entertainment
251 Report

ಸ್ಯಾಂಡಲ್ ವುಡ್’ಗೆ ಬೆಳ್ಳಂ ಬೆಳ್ಳಗೆ ಶಾಕ್ ಕಾದಿತ್ತು.. ಇಷ್ಟು ದಿನ ರಾಜಕೀಯದಲ್ಲಿ ಐಟಿ ದಾಳಿ ಮಾಡುತ್ತಿದ್ದರು ಇದೀಗ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪುನೀತ್  ರಾಜ್ ಕುಮಾರ್ ಸೇರಿದಂತೇ ರಾಕಿಂಗ್ ಸ್ಟಾರ್ ನಟ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೂ ಐಟಿ ರೈಡ್ ಆಗಿದೆ.ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಯಶ್, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಂಗದೂರು, ಮನೋಹರರ್ ಮನೆ ಮೇಲೆ ಬೆಳ್ಳಂಬೆಳ್ಳಗೆ ಐಟಿ ದಾಳಿ ನಡೆಸಿದ್ದಾರೆ. ಇದೀಗ ಐಟಿ ದಾಳಿ ಬಗ್ಗೆ ಸುದೀಪ್ ಮೊದಲ ಬಾರಿಗೆ ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತಮ್ಮ ನಿವಾಸದ ಮೇಲೆ ಐಟಿ ದಾಳಿ ನಡೆದ ಬಗ್ಗೆ ಮಾಹಿತಿ ಪಡೆದುಕೊಂಡ ಬಗ್ಗೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ನಡೆಯುತ್ತಿದ್ದನು ಕ್ಯಾನ್ಸಲ್ ಮಾಡಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದರು.ಇದೇ ವೇಳೆ ಅವರು ಮಾತನಾಡಿ, ನಾನೇನು ತಪ್ಪು ಮಾಡಿಲ್ಲ. ನಮ್ಮ ವೈಯುಕ್ತಿಕ ಕಾರಣಗಳಿಂದಾಗಿ ನನ್ನ ಮೇಲೆ ಐಟಿ ದಾಳಿಯಾಗಿಲ್ಲ, ಮೂರು ಸಿನಿಮಾಕ್ಕೆ ಸಂಬಂಧಪಟ್ಟಂತೆ ಐಟಿ ದಾಳಿಯಾಗಿರಬಹುದು ಅಂತ ತಿಳಿಸಿದರು. ಇದೇ ಸಮಯದಲ್ಲಿ ಕಾನೂನುನಿಗೆ ನಾವು ಬೆಲೆ ಕೊಡಬೇಕು, ಹೀಗಾಗಿ ನಾವು ಎಲ್ಲ ರೀತಿಯ ಸಹಕಾರ ನೀಡುವೆವು, ಇದಲ್ಲದೇ ಮನೆಯಲ್ಲಿ ನನ್ನ ತಾಯಿ ಮಾತ್ರ ಇದ್ದು ಈ ಸಲುವಾಗಿ ನಾನು ಬಂದೇ, ನಾನೇನು ತಪ್ಪು ಮಾಡಿಲ್ಲ, ನನ್ನ ಮನೆಗೆ ಬರುವ ವೇಳೆಯಲ್ಲಿ ಐಟಿ ಅಧಿಕಾರಿಗಳು ನನ್ನ ಮನೆ ಗೇಟ್ ಹಾರಿ ಬಂದಿಲ್ಲ. ಗೇಟ್ ಒಪನ್ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments