‘’ದೀಪಿಕಾ ನಾನು ನಿನ್ನ ತಿನ್ನುವೆ’’ : ಪತಿ ರಣವೀರ್ ಡಿಪ್ಪಿಗೆ ಹೀಗಂದಿದ್ಯಾಕೆ…?

03 Jan 2019 9:28 AM | Entertainment
290 Report

 ಕನ್ನಡದ ದೀಪಿಕಾ ಪಡುಕೋಣೆ  ಸದ್ಯ ಬಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದ ಹೀರೋಯಿನ್. ಸದ್ಯ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾ ಬಿಟ್ಟು ರೆಸಿಪಿಯೊಂದರ ಜೊತೆ ದೀಪಿಕಾ ಹೆಸರು ಸುದ್ದಿಯಲ್ಲಿದ್ಯಂತೆ. ಅಂದಹಾಗೇ ಅಮೆರಿಕಾದ ರೆಸ್ಟೋರೆಂಟ್ ಒಂದು ದೋಸೆಗೆ `ದೀಪಿಕಾ ದೋಸೆ’ ಎಂದು ಹೆಸರಿಟ್ಟ ವಿಚಾರ   ಸೋಶಿಯಲ್ ಮಿಡಿಯಾದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಅದೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು.  ದೀಪಿಕಾ ಪಡುಕೋಣೆ ಅಭಿಮಾನಿಯೊಬ್ಬರು ಆ ರೆಸ್ಟೋರೆಂಟ್‍ನ ಮೆನು ಕಾರ್ಡ್‍ನ ಫೋಟೋ ತೆಗೆದು ಅದನ್ನು ಟ್ವೀಟ್ ಮಾಡಿದ್ದಾರೆ.

 ದೀಪಿಕಾ ಈ ಟ್ವೀಟ್‍ಗೆ ಪ್ರತಿಕ್ರಿಯಿಸಿ, “ವರ್ಷ ಪ್ರಾರಂಭಿಸಲು ಇದು ಸಾಕು. ಹ್ಯಾಪಿ ನ್ಯೂ ಇಯರ್” ಎಂದು ಟೈಪಿಸಿ ರೀ- ಟ್ವೀಟ್ ಮಾಡಿದ್ದಾರೆ.ಅಲ್ಲದೇ ಇದರಿಂದ ನನಗೆ ತುಂಬಾ ಖುಷಿಯಾಗಿದೆ.  ನನ್ನ ಹೆಸರಿನಲ್ಲಿ ದೋಸೆ ರೆಡಿಯಾಗಿದೆ ಎಂದು ಖುಷಿಯಿಂದಲೇ ಸ್ವಾಗತಿಸಿದ್ದಾರಂತೆ.ಈ ವಿಚಾರ ತಿಳಿದ ಮತ್ತೊಬ್ಬ ಅಭಿಮಾನಿ, “ಪುಣೆಯಲ್ಲಿ ನೀವು ಪರಾಟಾ ಥಾಲಿ ಆಗಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ದೀಪಿಕಾ ನಗುವ ಎಮೋಜಿ ಹಾಕಿ ರೀ-ಟ್ವೀಟ್ ಮಾಡಿದ್ದಾರೆ.ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಕೊಂಕಣಿ ಸಂಪ್ರದಾಯ ಹಾಗೂ ಹಾಗೂ ನವೆಂಬರ್ 15ರಂದು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬೆಂಗಳೂರಿನಲ್ಲಿ ಒಂದು ಬಾರಿ ಹಾಗೂ ಮುಂಬೈನಲ್ಲಿ ಎರಡೂ ಬಾರಿ ಈ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.

ಅಂದಹಾಗೇ ಈಗತಾನೇ ಮದುವೆಯಾಗಿ ಬಾಲಿವುಡ್ ಅಂಗಳದಲ್ಲಿ ನವಜೋಡಿ ಎಂದು ಕರೆಸಿಕೊಳ್ಳುವ ದೀಪಾ ಮತ್ತು ರಣವೀರ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಹನಿಮೂನ್ ಮೂಡ್ನಲ್ಲಿದ್ದಾರೆ. ಈ ನಡುವೆ ರೆಸ್ಟೋರೆಂಟ್ವೊಂದರ ದೀಪಿಕಾ ದೋಸೆ ನೋಡಿ ರಣವೀರ್ ಫನ್ನಿ ಕಮೆಂಟ್ ಹಾಕಿದ್ದಾರೆ. ಈಗ ಇದನ್ನು ನಾನು ತಿನ್ನುವೆ ಎಂದಿದ್ದಾರೆ.ಹನಿಮೂನ್ಗೆ ಹೋಗಿರುವ ದೀಪಿಕಾ ರಣವೀರ್ ಅವರು ಯಾವ ದೇಶಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.ಆದರೆ ಇಬ್ಬರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

Edited By

Kavya shree

Reported By

Kavya shree

Comments