ಗ್ರೇಟ್ ಭಟ್ರು ಕೊಟ್ರು ಕುರಿಗಾಹಿ ಹನುಮಂತಪ್ಪನಿಗೆ ಬಂಪರ್ ಆಫರ್…!

02 Jan 2019 11:44 AM | Entertainment
234 Report

ಇದಪ್ಪಾ ಅದೃಷ್ಟಾ ಅಂದ್ರೆ..ಎಲ್ಲೋ  ಕುರಿ ಮೇಯಿಸುತ್ತಿದ್ದಾ  ಹುಡುಗನೊಬ್ಬ  ಇದೀಗ ಕರ್ನಾಟಕ ಫೇಮಸ್ ಆಗಿದ್ದಾರೆ.  ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಎಲ್ಲೋ ಚಿಕ್ಕ ಹಳ್ಳಿಯಲ್ಲಿ ಕುರಿಗಳನ್ನು ಮೇಯಿಸುತ್ತಾ ಹಾಡ್ತಾಯಿದ್ದ ಹನುಮಂತಪ್ಪನಿಗೆ ಸಿಟಿಯ ಗಂಧ ಗಾಳಿಯೂ ಗೊತ್ತಿರಲಿಲ್ಲ. ಲಯ, ಶೃತಿ ಯನ್ನು ಯಾವುದೇ ಸಂಗೀತ ಶಾಲೆಗೆ ಸೇರಿಕೊಳ್ಳದೇ  ಅಭ್ಯಾಸ ಮಾಡಿದ್ದ ಹನುಮಂತಪ್ಪನಿಗೆ ಆ ದೇವರೇ ಹಾಡುವ ವರ ಕೊಟ್ಟಿದ್ದಾನೆ ಎಂದರೆ ತಪ್ಪಾಗಲಾರದು. ಹನುಮಂತ ಈಗ ಹೊಸ ವರ್ಷದ  ಸಂಭ್ರಮದಲ್ಲಿದ್ದಾರೆ. ಅಲ್ಲದೇ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.  ನವ ವರ್ಷದ ಪ್ರಯುಕ್ತ ಹನುಮಂತನಿಗೆ ಬಂಪರ್ ಆಫರ್ ಬಂದಿದೆ.

ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ. ಈಗಾಗಲೇ ಅನೇಕರು ಹನುಮಂತ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಪಳಗಿದ ಬಳಿಕ ಸಿನಿಮಾದಲ್ಲಿ ಹಾಡಿಸುವುದಕ್ಕೆ ಪ್ಲಾನ್ ಮಾಡಿದ್ದಾರೆ. ಅಂದ ಹಾಗೇ ಈ ಬಾರಿ ಹೊಸ ವರ್ಷಕ್ಕೆ ಹನುಮಂತ ಸಿನಿಮಾದಲ್ಲಿ  ಹಾಡಿದರೆ, ಕರ್ನಾಟಕದಲ್ಲಿ ಮತ್ತೊಬ್ಬ ಹೊಸ ಗಾಯಕ ಸೇರ್ಪಡೆಯಾಗ್ತಿದ್ದಾರೆ.  ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ರು ಮಾತ್ರ ಹನುಮಂತನಿಗೆ ಹೊಸ ವರ್ಷಕ್ಕೆ ಪಾರಿತೋಷಕ ನೀಡಿದ್ದಾರೆ.

Edited By

Manjula M

Reported By

Manjula M

Comments