ಹನ್ನೊಂದು ದಿನದಲ್ಲಿ 'ಕೆಜಿಎಫ್' ಚಿತ್ರ ಗಳಿಸಿದ್ದೆಷ್ಟು..!!

02 Jan 2019 10:57 AM | Entertainment
189 Report

ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.. ಕನ್ನಡದಲ್ಲೂ ಈ ರೀತಿಯ ಸಿನಿಮಾ ಮಾಡಿ ತೋರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಚಿತ್ರತಂಡ. ಕನ್ನಡದ ಬಹುನಿರೀಕ್ಷಿತ ಸಿನಿಮಾವಾಗಿದ್ದ ಕೆಜಿಎಫ್ ಬಿಡುಗಡೆಯಾಗಿ ಕೇವಲ ಹನ್ನೊಂದು ದಿನದಲ್ಲಿ ನೂರೈವತ್ತು ಕೋಟಿ ರೂ.ಗೂ ಹೆಚ್ಚು ಹಣವನ್ನು ಬಾಚಿದೆ. ಬಾಕ್ಸ್ ಆಫೀಸ್ ನಲ್ಲಿ ಈ ಮೂಲಕ ಧೂಳೆಬ್ಬಿಸಿದೆ. ಅಷ್ಟೆಅಲ್ಲದೆ ಬಾಲಿವುಡ್ ನಲ್ಲೂ ಸಹ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ಈ ಸಿನಿಮಾ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರವನ್ನು ಹಿಂದಿಕ್ಕಿದೆ ಎಂಬುದು ವಿಶೇಷವಾಗಿದ್ದು ಇದು ನಮ್ಮ ಸ್ಯಾಂಡಲ್ ವುಡ್ ಗೆ ಹೆಮ್ಮಯ ವಿಷಯವೇ ಸರಿ..

ಬಾಲಿವುಡ್ ಕ್ಷೇತ್ರದಲ್ಲಿ ಹನ್ನೊಂದನೇ ದಿನ, ಅಂದರೆ ಎರಡನೇ ವಾರದಲ್ಲಿ ಕೆಜಿಎಫ್ ಗಳಿಕೆ ಎಷ್ಟು ಎಂಬುದನ್ನು ಕೇಳಿದರತೆ ಶಾಖ್ ಆಗ್ತಿರಾ..? ಬರೋಬ್ಬರಿ 28.20 ಕೋಟಿ ರೂಪಾಯಿ. ಕನ್ನಡ ಸಿನಿಮಾವೊಂದು ರೀತಿ ಸದ್ದು ಮಾಡಿದ್ದು ಇದೇ ಮೊದಲು. ಹಣ ಗಳಿಕೆ ಬಗ್ಗೆ ಸಿನಿಮಾ ತಂಡ ಅಧಿಕೃತವಾಗಿ ಎಲ್ಲೂ ಹೇಳಿಕೊಳ್ಳದಿದ್ದರೂ ಸಹ ಬಾಕ್ಸ್ ಆಫೀಸ್ ಮಾಹಿತಿ ಪ್ರಕಾರ ಸುಮಾರು 150 ಕೋಟಿ ರೂ.ಗಿಂತ ಅಧಿಕ ಹಣವನ್ನು ಬಾಚಿಕೊಂಡಿದೆ ಎಂದು ಹೇಳಲಾಗಿದೆ. ಒಟ್ಟಾರೆ ಸ್ಯಾಂಡಲ್ ವುಡ್ ಗೆ ಒಳ್ಳೆ ಬ್ರೇಕ್ ಕೊಟ್ಟ ಸಿನಿಮಾ ಕೆಜಿಎಫ್ ಎಂದರೆ ತಪ್ಪಾಗುವುದಿಲ್ಲ.. ಈ ಸಿನಿಮಾದಂದಾಗಿ ಇಡೀ ಚಿತ್ರತಂಡವಷ್ಟೆ ಅಲ್ಲದೆ ಸ್ಯಾಂಡಲ್ ವುಡ್ ಕೂಡ ಖುಷಿಯಲ್ಲಿದೆ.

Edited By

Manjula M

Reported By

Manjula M

Comments