ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಷಯ ತಿಳಿಸಿದ ಚಾಲೆಂಜಿಂಗ್ ಸ್ಟಾರ್

01 Jan 2019 1:07 PM | Entertainment
155 Report

ಸ್ಯಾಂಡಲ್ ವುಡ್ ಕೂಡ ಹೊಸ ವರ್ಷದ ಖುಷಿಯಲ್ಲಿದೆ.. ಸ್ಯಾಂಡಲ್ ವುಡ್ ನ ಎಲ್ಲರೂ ಕೂಡ ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ. .. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಜನತೆಗೆ ಹೊಸ ವರ್ಷದ ಶುಭ ಕೋರಿದ್ದು, ಯಜಮಾನ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ದರ್ಶನ್ ಅವರ ಕುರುಕ್ಷೇತ್ರ ಸಿನಿಮಾಗಾಗಿ ಕಾಯುತ್ತಿದ್ದಾರೆ. ಇದರ ನಡುವೆ ಅವರ ಯಜಮಾನ ಚಿತ್ರ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ..ಅಭಿಮಾನಿಗಳಿಗಾಗಿ ಯಜಮಾನ ಚಿತ್ರದ ಪೋಸ್ಟರ್ ಅನ್ನು ನಟ ದರ್ಶನ್ ಶೇರ್ ಮಾಡಿದ್ದಾರೆ. 

ಇನ್ನೂ ಟ್ವೀಟರ್ ಮೂಲಕ ವಿಶ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, `ಹೊಸ ವರ್ಷವು ನಿಮ್ಮ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ, ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ದಿಕ ಶುಭಾಶಯಗಳು' ಎಂದು ಟ್ವೀಟ್ ಮಾಡಿ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.ಇನ್ನು 2019 ರಲ್ಲಿ ದರ್ಶನ್ ಅವರ ಅಭಿಮಾನಿಗಳಿಗೆ  ಸಿಹಿಸುದ್ದಿ ಸಿಗಲಿದೆ, ಈ ವರ್ಷ ದರ್ಶನ್ ಅವರ ಬಹುನಿರೀಕ್ಷಿತ ಒಡೆಯ, ಯಜಮಾನ ಹಾಗೂ ಕುರುಕ್ಷೇತ್ರ ಚಿತ್ರ ತೆರೆಕಾಣಲಿವೆ. ಈ ವರ್ಷ ದರ್ಶನ್ ಅಭಿಮಾನಿಗಳಿಗೆ ಹಬ್ಬವೆ ಸರಿ..

Edited By

Manjula M

Reported By

Manjula M

Comments