ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಡಲಿದ್ದಾರೆ ನೀರ್ ದೋಸೆ ಬೆಡಗಿ ಹರಿಪ್ರಿಯಾ

31 Dec 2018 1:50 PM | Entertainment
162 Report

ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ನೀರ್ ದೋಸೆ ಬೆಡಗಿ  ಹರಿಪ್ರಿಯಾ ಕೂಡ ಒಬ್ಬರು..ಸದ್ಯ ನಾಲ್ಕೈದು ಸಿನಿಮಾಗಳಲ್ಲಿ ಹರಿಪ್ರಿಯಾ ಬ್ಯುಸಿಯಾಗಿದ್ದಾರೆ. ಈ ನಡುವೆ 'ಸೂಜಿದಾರ' ಚಿತ್ರದಲ್ಲಿ ನಟಿಸುತ್ತಿದ್ದು, ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಗಳು ಸಖತ್ ಸದ್ದು ಮಾಡಿದೆ. ಸಿನಿಮಾದಲ್ಲಿ ಸಮಾಜದಲ್ಲಿರುವ ರಾಜಕೀಯ ವಿಡಂಬನೆ, ಸಾಂಸ್ಕೃತಿಕ ವಿಡಂಬನೆಗಳನ್ನು ಸೂಜಿದಾರ ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ. ತೆರೆಗೆ ಬರಲು 'ಸೂಜಿದಾರ' ಚಿತ್ರತಂಡ ಭರದ ಸಿದ್ದತೆಯನ್ನು ನಡೆಸುತ್ತಿದ್ದು, ಮುಂದಿನ ವರ್ಷ ಅಂದರೆ ಜನವರಿಗೆ ಸೂಜಿದಾರ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ರಂಗಕರ್ಮಿ ಮೌನೇಶ್​ ಬಡಿಗೇರ್​ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಹರಿಪ್ರಿಯಾ ಜೊತೆಗೆ ಯಶವಂತ್ ಶೆಟ್ಟಿ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್, ನಾಗರಾಜ್ ಪತ್ತಾರ್ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಸಕ್ಸಸ್’ಪುಲ್ ನಿರ್ದೇಶಕರಲ್ಲಿ ಹರಿ ಸಂತೋಷ್ ಕೂಡ ಒಬ್ಬರು…ವಿಕ್ಟರಿ 2 ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹರಿ ಸಂತೋಷ್ ಐತಿಹಾಸಿಕ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. ಬಿಎಲ್ ವೇಣು ಅವರ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ ಬಿಚ್ಚುಗತ್ತಿ ಎಂಬ ಟೈಟಲ್ ಇಡಲಾಗಿದೆ. ಚಿತ್ರದ ಮೊದಲ ಭಾಗವಾದ ದಳವಾಯಿ ದಂಗೆಯಲ್ಲಿ ಹರಿಪ್ರಿಯಾ ನಟಿಸುವ ಸಾಧ್ಯತೆ ಇದೆ ಎಂದಯ ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments