12 ವರ್ಷದ ನಂತರವೂ ಮುಂಗಾರು ಮಳೆಯ ಲೀಲೆ...!!

29 Dec 2018 2:48 PM | Entertainment
302 Report

ಸ್ಯಾಂಡಲ್ ವುಡ್ ಗೆ ಒಳ್ಳೆ ಬ್ರೇಕ್ ಕೊಟ್ಟಂತಹ ಚಿತ್ರ ಅಂದರೆ ಅದು ಮುಂಗಾರು ಮಳೆ..  ಸ್ಯಾಂಡಲ್ ವುಡ್ ಸೂಪರ್ ಹಿಟ್ ಮೂವಿ 'ಮುಂಗಾರು ಮಳೆ' ತೆರೆ ತಂದು ಇಂದಿಗೆ ಬರೋಬ್ಬರಿ 12 ವರ್ಷ ತುಂಬಿದೆ.. 12 ನೇ ವರ್ಷದ ಆ್ಯನಿವರ್ಸರಿ  ಖುಷಿಯಲ್ಲಿದೆ ಚಿತ್ರತಂಡ... 2006 ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಯಶಸ್ಸನ್ನು ತಂದುಕೊಟ್ಟಂತಹ ಚಿತ್ರ.. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಅನಿಸುತಿದೆ ಯಾಕೋ ಇಂದು.... ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.... ಹಾಡುಗಳು ಲವರ್ಸ್ ಗಳ ಬಾಯಲ್ಲಿ ಗುನುಗುವಂತೆ ಮಾಡಿದೆ.

ನವಿರಾದಂತಹ  ಪ್ರೇಮಕಥೆಯ ಮೂಲಕ ಜನರ ಮನಸೂರೆಗೊಂಡಂತಹ  ಚಿತ್ರ ಮುಂಗಾರುಮಳೆ ಸಿನಿಮಾ..  ಈ ಚಿತ್ರದ ನಂತರ ಯೋಗರಾಜ್ ಭಟ್, ಗಣೇಶ್ ಮತ್ತು ಪೂಜಾ ಗಾಂಧಿ ಸ್ಟಾರ್ ಬದಲಾಗಿ ಹೋಯಿತು. ಚಿತ್ರದ ಯಶಸ್ಸಿನ ಬಗ್ಗೆ ಯೋಗರಾಜ್ ಭಟ್ ಮಾತನಾಡುತ್ತಾ, ಈ ಪರಿ ಯಶಸ್ಸು ಹೇಗೆ ಸಿಕ್ತು? ಇವೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವುದು ಇನ್ನೂ ಕನಸಾಗಿಯೇ ಉಳಿದಿದೆ. ಇದಕ್ಕೆ ಅನೇಕ ಸಂಗತಿಗಳು ಮುಖ್ಯ ಕಾರಣವಾಗಿದೆ... ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಲ್ಯಾಂಡ್ ಮಾರ್ಕ್ ಆಗಿದೆ ಎಂದು ಹೇಳಬಹುದು..ಎನ್ನಬಹುದು

Edited By

Manjula M

Reported By

Manjula M

Comments