ನಟಿ ಸಿಂಧು ಲೋಕನಾಥ್ ಗೆ ವಂಚನೆ, ನಿರ್ಮಾಪಕನ ವಿರುದ್ಧ ದೂರು ದಾಖಲು..!!

28 Dec 2018 6:01 PM | Entertainment
228 Report

ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ಅವರಿಗೆ ಚಿತ್ರ ನಿರ್ಮಾಪಕರೊಬ್ಬರು ವಂಚಿಸಿರುವ ಆರೋಪ ಇದೀಗ ಕೇಳಿಬಂದಿದೆ. ಸಿನಿಮಾ ನಿರ್ಮಾಪಕ ಚಂದ್ರಶೇಖರ್ ಅವರ ವಿರುದ್ಧ ಸಿಂಧು ಲೋಕನಾಥ್ ಕೋರ್ಟ್ ಗೆ ಹಾಗೂ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. 'ಹೀಗೊಂದು ದಿನ' ಚಿತ್ರದ ನಿರ್ಮಾಪಕ ಚಂದ್ರಶೇಖರ್ 2 ಲಕ್ಷ ರೂ. ಬಾಕಿ ಕೊಡಬೇಕಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚಿತ್ರರಂಗದಲ್ಲಿ ಇದೀಗ ಈ ರೀತಿಯ ವಂಚನೆಯ ಪ್ರಕರಣಗಳು ಸಾಕಷ್ಟು ನಡೆದಿದ್ದರೂ ಕೂಡ ಅದು ಮತ್ತೆ ಮತ್ತೆ ಪುನಾವರ್ತನೆ ಆಗುತ್ತಿರುವುದು ವಿಪರ್ಯಾಸವೇ ಸರಿ.

ಸಿಂಧು ಲೋಕನಾಥ್ ಗೆ 2 ಲಕ್ಷ ಬಾಕಿ ಉಳಿಸಿಕೊಂಡ ಹಿನ್ನಲೆಯಲ್ಲಿ ಅದರ ಬದಲಿಗೆ ಸಿಂಧು ಲೋಕನಾಥ್ ಅವರಿಗೆ ಎರಡು ಚೆಕ್ ನೀಡಿದ್ದರು. ಅವು ಬೌನ್ಸ್ ಆಗಿದ್ದು, ಸಿಂಧು ಲೋಕನಾಥ್ ಕೇಸ್ ಅನ್ನು ದಾಖಲಿಸಿದ್ದಾರೆ. ಅಲ್ಲದೇ, ಫಿಲಂ ಚೇಂಬರ್ ಗೆ ದೂರು ನೀಡಿದ್ದು ನ್ಯಾಯಕ್ಕಾಗಿ ಮನವಿಯನ್ನು ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದ ಆರೋಪವನ್ನು ಚಂದ್ರಶೇಖರ್ ಅಲ್ಲಗಳೆದಿದ್ದಾರೆ. ತಾವು ಯಾವುದೇ ವಂಚನೆ ಮಾಡಿಲ್ಲ ಕೆಲಸದ ನಿಮಿತ್ತ ಬೇರೆ ಕಡೆ ತೆರಳಿದ್ದು, ಶೀಘ್ರವೇ ಆಗಮಿಸಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments