ಜೂನಿಯರ್ ಸಿಂಡ್ರೆಲಾಳನ್ನು ಎದೆಗಪ್ಪಿಕೊಂಡು ನಡೆದ ಸೀನಿಯರ್ ಸಿಂಡ್ರೆಲಾ..!!

28 Dec 2018 4:07 PM | Entertainment
351 Report

ಸ್ಯಾಂಡಲ್’ವುಡ್ನಲ್ಲಿ ಸಿಂಡ್ರೆಲ್ಲಾ ಅಂತಾನೆ ಫೇಮಸ್ ಆಗಿರುವ ರಾಧಿಕ ಪಂಡಿತ್ ಸಧ್ಯ ಮಗಳ ಜೊತೆ ಫುಲ್ ಖುಷಿಯಾಗಿದ್ದಾರೆ. ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಮಗಳ ಜೊತೆಗಿನ ಫೋಟೋವನ್ನು ಷೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ ತಮ್ಮ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇನ್ನು ಮಗು ಜನಿಸಿದ ಬಳಿಕ ಮಗಳ ಫೋಟೋವನ್ನು ಇದೂವರೆಗೂ ರಿವೀಲ್ ಮಾಡಿಲ್ಲ.

ಆದರೆ ಆಸ್ಪತ್ರೆಯ ಕೆಲ ಫೋಟೋಗಳು ಮಾತ್ರ ಲೀಕ್ ಆಗಿದ್ದವು. ನಂತರ ಇಂದಿಗೂ ಜೂನಿಯರ್ ಸಿಂಡ್ರೆಲಾ ಹೇಗಿದ್ದಾಳೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದೆ ಇದೆ. ಮಗುವನ್ನು ಎತ್ತಿಕೊಂಡು ತೋಳುಗಳಲ್ಲಿ ತಬ್ಬಿಕೊಂಡು ಹೋಗುತ್ತಿರುವ ಫೋಟೋ ಹಾಕಿಕೊಂಡು, ನಮ್ಮ ಜೀವನದಲ್ಲಿ ಚೆಂಜ್ ಎನ್ನುವುದು ಯಾವಾಗಲೂ ಇರಬೇಕು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಮುಖ ಕಾಣಿಸದಿರುವುದು ಬಹುತೇಕ ಅಭಿಮಾನಿಗಳಲ್ಲಿ ಬೇಸರ ತಂದಿದೆ.. ಜೂನಿಯರ್ ಸಿಂಡ್ರೆಲಾಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ..

Edited By

Manjula M

Reported By

Manjula M

Comments