'ಚಮಕ್' ಕೊಟ್ಟಿದ್ದ ಗೋಲ್ಡನ್ ಸ್ಡಾರ್ ಗಣೇಶ್ ಇದೀಗ 'ಗಿಮಿಕ್' ನಲ್ಲಿ ಬ್ಯುಸಿ..!!

28 Dec 2018 8:21 AM | Entertainment
134 Report

ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಚಮಕ್ ಚಿತ್ರವು ಚಮಕ್ ಮಾಡಿದ್ದು ಎಲ್ಲರಿಗೂ ತಿಳಿದೆ ಇದೆ. ಗಣೇಶ್ ಮಾಡೋದು ವರ್ಷಕ್ಕೆ ಒಂದು ಸಿನಿಮಾದ್ರೂ ಕೂಡ ಸಿನಿ ರಸಿಕರಿಗೆ ಇಷ್ಟವಾಗೂ ರೀತಿಯಲ್ಲೆ ಮಾಡುತ್ತಾರೆ. ಗಣೇಶ್ ಹೇಳುವ ರೋಮ್ಯಾಂಟಿಕ್ ಡೈಲಾಗ್  ಅಂತೂ ಹುಡುಗಿಯರ ಹಾಟ್ ಫೇವರಿಟ್ ಅನ್ನಬಹುದು. ನಂತರ  ಆರೆಂಜ್ ಸಿನಿಮಾ ಸಕ್ಸಸ್ ನಂತರ 'ಗಿಮಿಕ್' ಸಿನಿಮಾ ಒಪ್ಪಿಕೊಂಡಿರುವುದು ನಿಮಗೆ ಗೊತ್ತಿರುವ ವಿಷಯ. ಇದೀಗ ಗಣೇಶ್ ಸಿನಿಮಾದ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಗಣೇಶ್ ಈಗ ಮನಾಲಿಯಲ್ಲಿ ಗೀತಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದು, ಇದರ ಜೊತೆ ಗಿಮಿಕ್ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರೋನಿಕಾ ಸಿಂಗ್ ಈ ಗಿಮಿಕ್ ಸಿನಿಮಾದ ಮೂಲಕ ಸಿನಿರಸಿಕರಿಗೆ ಮನರಂಜನೆ ನೀಡಲಿದ್ದಾರೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ಜೋಡಿ ಮತ್ತೆ ತೆರೆ ಮೇಲೆ ಮ್ಯಾಜಿಕ್ ಮಾಡಲು ರೆಡಿಯಾಗುತ್ತಿದೆ. ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ಅಂದ್ರೆ ಕೇಳಬೇಕಾ..? ಮತ್ತೊಮ್ಮೆ ಮೋಡಿ ಮಾಡಲು ಬರುತ್ತಿದ್ದಾರೆ.

Edited By

Manjula M

Reported By

Manjula M

Comments