ಜೂನಿಯರ್ ರಾಕಿ….ಈಗ ಜೂನಿಯರ್ ಶ್ರೀ ಮುರುಳಿ..!!

27 Dec 2018 9:25 AM | Entertainment
1093 Report

ಚಂದನವನ್ದ ಬಹುನಿರೀಕ್ಷಿತ ಚಿತ್ರವಾದ ಕೆಜಿಎಫ್ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ. ‘ಕೆಜಿಎಫ್' ಸಿನಿಮಾದಿಂದ ನಟ ಯಶ್ ದೇಶದಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ಮತ್ತೊಂದು ಕಡೆ ಸಿನಿಮಾದ ಕೆಲವು ಪಾತ್ರಗಳನ್ನು ಜನ ಸಾಕಷ್ಟು ಗುರುತಿಸುತ್ತಿದ್ದಾರೆ. ಇಂತಹ ಪಾತ್ರಗಳಲ್ಲಿ ಯಶ್ ಬಾಲ್ಯದ ಪಾತ್ರ ಕೂಡ ಒಂದಾಗಿದೆ. ಚಿಕ್ಕ ಹುಡುಗ ಆದರೂ ಕೂಡ ಒಳ್ಳೆಯ ನಟನೆಯ ಜೊತೆಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ.  ರಾಕಿಯ ಸಣ್ಣ ಹುಡುಗನ ಪಾತ್ರವು ಸಿನಿಮಾವನ್ನು ನೋಡಿದ ಬಹುತೇಕರ ಫೇವರೇಟ್ ಆಗಿ ಬಿಟ್ಟಿದೆ. ಆ ಪಾತ್ರ ಮಾಡಿದ್ದ ಹುಡುಗನ ಹೆಸರು ಅನ್ಮೋಲ್.

'ಕೆಜಿಎಫ್' ಸಿನಿಮಾದ ನಂತರ ಅನ್ಮೋಲ್ ಗೆ ಸ್ಯಾಂಡಲ್ ವುಡ್ ನಲ್ಲಿ ಒಂದೊಳ್ಳೆ ಫ್ರೇಮ್ ಸಿಕ್ಕಿದೆ., ಈಗ ಇದರಿಂದ ಸಿನಿಮಾ ಅವಕಾಶ ಕೂಡ ಹುಡುಕಿಕೊಂಡು ಬಂದಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ 'ಮದಗಜ' ಚಿತ್ರದಲ್ಲಿ ಅನ್ಮೋಲ್ ಅಭಿನಯಿಸುತ್ತಿದ್ದಾರೆ.  ಈ ವಿಷಯವನ್ನು ನಿರ್ದೇಶಕ ಮಹೇಶ್ ಗೌಡ ತಿಳಿಸಿದ್ದಾರೆ. 'ಮದಗಜ' ಸಿನಿಮಾದಲ್ಲಿ ಶ್ರೀಮುರಳಿ ಅವರ ಬಾಲ್ಯದ ಪಾತ್ರದಲ್ಲಿ ಅನ್ಮೋಲ್ ಅಭಿನಯಿಸುತ್ತಿದ್ದಾರೆ. 'ಕೆಜಿಎಫ್' ಚಿತ್ರದಲ್ಲಿ ಈ ಹುಡುಗನ ನಟನೆ ಇಷ್ಟ ಪಟ್ಟಿದ್ದ ಮಹೇಶ್ ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ.

Edited By

Manjula M

Reported By

Manjula M

Comments