ಇನ್ಮುಂದೆ ಸಿನಿಮಾಗಳಿಗೆ ರಾಜ್‌ಕುಮಾರ್ ಸಿನಿಮಾಗಳ ಟೈಟಲ್ ಬಳಸುವಂತಿಲ್ಲ..!!??

24 Dec 2018 9:58 AM | Entertainment
139 Report

ಕನ್ನಡ ಚಿತ್ರರಂಗದಲ್ಲಿ  ಡಾ. ರಾಜ್ ಕುಮಾರ್ ಅಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ರಾಜ್ ಯಾವುದೆ ಪಾತ್ರ ಕೊಟ್ಟರು ಕೂಡ  ಅದನ್ನು ಅವರು ಸರಿಯಾಗಿ ನಿಭಾಯಿಸಿ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಳ್ಳುತ್ತಿದ್ದರು.. ಹಾಕಿದ ಬಂಡವಾಳಕ್ಕೆ ಎಲ್ಲೂ ಮೋಸವಾಗುತ್ತಿರಲಿಲ್ಲ. ಆದರೆ ಇತ್ತಿಚಿಗೆ ವ್ಯಾಪಾರದ ದೃಷ್ಟಿಯಿಂದ ರಾಜ್ ಸಿನಿಮಾದ ಟೈಟಲ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಅಭಿಮಾನಕ್ಕೆ ಅಲ್ಲ ಎಂದು ರಾಘವೇಂದ್ರ ರಾಜ್ ಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.  ಕೇವಲ ಇದೆಲ್ಲಾ ಪ್ರಚಾರದ ಗಿಮಿಕ್ ಎಂದಿದ್ದಾರೆ.

ಆರಾಧ್ಯ ದೈವ ಮುತ್ತುರಾಜ್ ಅಭಿಮಾನಿ ಬಳಗದ ಕಾರ್ಯಕರ್ತರು ರಾಘವೇಂದ್ರ ರಾಜ್  ಕುಮಾರ್ ಅವರನ್ನು ಭೇಟಿ ಮಾಡಿ, 'ಡಾ ರಾಜ್‌ಕುಮಾರ್ ಕುಟುಂಬದವರು ಅಣ್ಣಾವ್ರ ಚಿತ್ರಗಳ ಹೆಸರುಗಳನ್ನು ಬಳಸಿಕೊಳ್ಳಲಿ. ಆದರೆ, ಬೇರೆಯವರು ಆ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರ ಚಿತ್ರಗಳ ಹೆಸರುಗಳಿಗೆ ಇರುವ ಮಹತ್ವವನ್ನು ಹಾಳು ಮಾಡುತ್ತಿದ್ದಾರೆ. ಪ್ರಚಾರದ ದೃಷ್ಟಿಯಿಂದ ಮಾತ್ರ ಹೀಗೆ ಹೆಸರುಗಳನ್ನು ಬಳಸುತ್ತಿದ್ದಾರೆ. ಇಂಟರ್‌ನೆಟ್‌ನಲ್ಲಿ 'ಶ್ರೀನಿವಾಸ ಕಲ್ಯಾಣ' ಎಂದು ಹುಡುಕಿದರೆ ರಾಜ್ ಚಿತ್ರದ ಹೆಸರಿಗೆ ಬದಲಾಗಿ ಹೊಸಬರ ಚಿತ್ರದ ಮಾಹಿತಿ ತೋರಿಸುತ್ತಿದೆ. ಆ ಮೂಲಕ ಅಣ್ಣಾವ್ರ ಚಿತ್ರಗಳ ಹೆಸರುಗಳನ್ನೇ ಮರೆಯಾಗುತ್ತಿವೆ.. ಹೀಗಾಗಿ ರಾಜ್ ಅವರ ಚಿತ್ರಗಳ ಶೀರ್ಷಿಕೆಗಳನ್ನು ಹೊರಗಿನವರು ಬಳಸಬಾರದು' ಎಂಬುದು ಅಭಿಮಾನಿಗಳ ಒತ್ತಾಯಿಸಿದ್ದಾರೆ. ಈ ಬಗ್ಗೆ ವಾಣಿಜ್ಯಮಂಡಳಿಗೂ ಕೂಡ ತಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Edited By

Manjula M

Reported By

Manjula M

Comments