ರಾಕಿ ಭಾಯ್ ಎದುರು ಶಾರೂಖ್ 'ಝೀರೋ'..!!

21 Dec 2018 6:03 PM | Entertainment
441 Report

ಸ್ಯಾಂಡಲ್ ವುಡ್ ನಲ್ಲಿ ಇಂದು ಬಿಡುಗಡೆಯಾದ ಕೆಜಿಎಫ್ ಸಿನಿಮಾ ಸಖತ್ ದೂಳ್ ಎಬ್ಬಿಸಿದೆ. ಅದೇ ರೀತಿ ಶಾರೂಖ್ ಖಾನ್ ನಟಿಸುತ್ತಿರುವ 'ಜೀರೋ' ಚಿತ್ರ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.ಶಾರುಖ್ ಝೀರೋ ಚಿತ್ರದಲ್ಲಿ ಕುಳ್ಳನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಸ್ಕ್ರೀನ್ ಷೇರ್ ಮಾಡಿದ್ದಾರೆ. ನಿರ್ದೇಶಕ ಆನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಹಾಗೂ ಪೋಸ್ಟರ್ ಗಳು ಸಾಕಷ್ಟು ಕುತೂಹಲವನ್ನು ಹುಟ್ಟಿಸಿತ್ತು..

ಕೆಜಿಎಫ್ ಸಿನಿಮಾ ಬಿಡುಗಡೆಯಾಗ್ತಿರುವುದು ನಿಜಕ್ಕೂ ಬಾಲಿವುಡ್ ನಲ್ಲಿ  ಸಾಕಷ್ಟು ಕುತೂಹಲ ಕೆರಳಿಸಿದೆ..ಒಂದೇ ದಿನ ಎರಡು ಬಿಗ್ ಸ್ಟಾರ್ ನಟರ ಸಿನಿಮಾ ರಿಲೀಸ್ ಆಗ್ತಿದ್ದು, ಯಾವ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತೆ ಎಂಬುದನ್ನು ಕಾದು ನೋಡಬೇಕು. ಇನ್ನೂ ನಟ ಶಾರೂಖ್ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಸಿನಿಮಾ ದೊಡ್ಡ ಲೆವೆಲ್ ನಲ್ಲಿ ಸಕ್ಸಸ್ ಕಾಣುತ್ತೆ ಎಂದು ಶಾರೂಖ್ ಕನಸು ಕಂಡಿದ್ದಾರೆ. ಕೆಜಿಎಫ್ ಹವಾ ಹೆಚ್ಚಾಗಿರೋದರಿಂದ ಝೀರೋ ಸಿನಿಮಾ ಯಾವ ಹೆಸರು ಮಾಡೋದು ಕಷ್ಟವೇ ಸರಿ

 

Edited By

Manjula M

Reported By

Manjula M

Comments