ಸಲಾಂ ರಾಕಿ ಬಾಯ್: ಅಬ್ಬರಿಸಿ ಬೊಬ್ಬಿರಿದ ಕೆಜಿಎಫ್, ಅಭಿಮಾನಿಗಳು ದಿಲ್’ಖುಷ್

21 Dec 2018 9:16 AM | Entertainment
400 Report

ಸ್ಯಾಂಡಲ್’ವುಡ್ ನಲ್ಲಿ ವರ್ಷಗಳಿಂದ ಹುಟ್ಟಿಸಿದ ನಿರೀಕ್ಷೆಗೆ ಇಂದು ತೆರೆ ಬಿದ್ದಿದೆ.  ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕೊನೆಗೂ ತೆರೆ ಬಿದ್ದಿದ್ದು ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ವಿಶ್ವದಾದ್ಯಂತ 2000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಮಧ್ಯ ರಾತ್ರಿಯಿಂದಲೇ ಚಿತ್ರಮಂದಿರಗಳ ಮುಂದೆ ಕಾದು ಕುಳಿತಿದ್ದ ಅಭಿಮಾನಿಗಳು, ಬೆಳಗಿನ ಜಾವವೇ ಆರಂಭವಾದ ಫಸ್ಟ್ ಶೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ... ಸುಮಾರು ಎರಡು ವರ್ಷಗಳ ಬಳಿಕ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಅದ್ದೂರಿ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಜಯ್ ಕಿರಂಗದೂರು ನಿರ್ಮಾಣದ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಶ್ರೀನಿಧಿ ಶೆಟ್ಟಿ, ಅಚ್ಯುತಕುಮಾರ್, ಮಾಳವಿಕಾ ಅವಿನಾಶ್, ಅನಂತನಾಗ್, ವಸಿಷ್ಟ ಸಿಂಹ ಮೊದಲಾದವರು ನಟಿಸಿದ್ದಾರೆ.

Edited By

Manjula M

Reported By

Manjula M

Comments

Cancel
Done