ಕೆಜಿಎಫ್ ಟಿಕೆಟ್ ಸಿಗದಿದ್ದಕ್ಕೆ ಥಿಯೇಟರ್‌ ಸಿಬ್ಬಂದಿ ಬೆರಳು ಕಟ್..!!

20 Dec 2018 3:27 PM | Entertainment
129 Report

ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಸಿನಿಮಾ ಸಾಕಷ್ಟು ಭರವಸೆಯನ್ನು ಮೂಡಿದೆ.. ನಾಳೆ ತೆರೆ ಮೇಲೆ ಬರುವ ಕೆಜಿಎಫ್ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾಳೆ ತೆರೆ ಮೇಲೆ ಬರುವ ಕೆಜಿಎಫ್ ಸಿನಿಮಾದ ಬ್ಲಾಕ್ ಟಿಕೆಟ್ ಕೊಡದಿದ್ದಕ್ಕೆ, ಥಿಯೇಟರ್‌ನ ಸಿಬ್ಬಂದಿ ಬೆರಳನ್ನೇ ಕತ್ತರಿಸಿ, ವಿಕೃತಿ ಮೆರೆದಿರುವ ಘಟನೆ ಮಾಗಡಿ ರಸ್ತೆಯ ವಿರೇಶ್ ಥಿಯೇಟರ್ ಬಳಿ ಡಿ.17ರ ಸಂಜೆ ನಡೆದಿದೆ..

ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲವು ದಿನಗಳಿಂದ ಥಿಯೇಟರ್ ಬಳಿ ಬ್ಲಾಕ್ ಟಿಕೇಟ್ ಮಾರಾಟ ಮಾಡುತ್ತಿರುವವರು ವಿರೇಶ್ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿರುವ ಅರವಿಂದ್ ಎನ್ನುವವನಿಗೆ ಟಿಕೇಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.. ಇದೇ ವೇಳೆ ಅರವಿಂದ್ ಯಾವುದೇ ಕಾರಣಕ್ಕೂ ಬ್ಲಾಕ್ ಟಿಕೇಟ್ ಕೊಡಿಸುವುದಿಲ್ಲವೆಂದು ಹೇಳಿದ್ದಾರೆ. ಈ ವಿಷಯಕ್ಕೆ ಸಿಟ್ಟಾದ ಆ ಗ್ಯಾಂಗ್ ನವರು ಎಡಗೈ ಬೆರಳು ಕಟ್ ಮಾಡಿ ವಿಕೃತಿ ಮೆರೆದಿದ್ದಾರೆ. 

Edited By

Manjula M

Reported By

Manjula M

Comments