ಇಡೀ ಬೆಟ್ಟವನ್ನೇ ದತ್ತು ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..!!

20 Dec 2018 1:40 PM | Entertainment
150 Report

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಒಂದು ರೀತಿಯ ಗತ್ತು..ಆದರೆ ಅವರು ಇತ್ತಿಚಿಗೆ ಅವರು ಇತ್ತೀಚಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಿಂದಲೇ ಸಿಕ್ಕಾಪಟ್ಟೆ ಹೆಸರು ಮಾಡುತ್ತಿದ್ದಾರೆ. ಹಾಗೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿರುತ್ತಾರೆ. ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಾಣಿಗಳೆಂದರೆ ದರ್ಶನ್’ಗೆ ಸಿಕ್ಕಾಪಟ್ಟೆ  ಪ್ರೀತಿ. ಇತ್ತೀಚಿಗೆ ಮೈಸೂರು ಮೃಗಾಲಯದಿಂದ ಹುಲಿ, ಆನೆಯನ್ನು ದರ್ಶನ್  ದತ್ತು ಪಡೆದು ಕೊಂಡಿದ್ದರು. ಜೊತೆಗೆ ಸ್ನೇಹಿತರಿಗೂ ತೆಗೆದುಕೊಳ್ಳುವಂತೆ ಪ್ರೇರೇಪಣೆ ಮಾಡಿದ್ದರು. ಇವರ ಪರಿಸರ ಪ್ರೀತಿ ಇಷ್ಟಕ್ಕೇ ಸೀಮಿತಾಗಿರದೆ ಒಂದು ಹೆಜ್ಜೆ ಮುಂದೆ ಹೋಗಿ ಕಾಡನ್ನೇ ದತ್ತು ಪಡೆದುಕೊಂಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟವನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಇದೀಗ ದರ್ಶನ್ ಮನಸ್ಸು ಮಾಡಿದ್ದಾರೆ.

Edited By

Manjula M

Reported By

Manjula M

Comments