‘ಐ ಲವ್ ಯೂ’ ಆಡಿಯೋ ಲಾಂಚ್’ಗೆ ಬರ್ತಿದ್ದಾರೆ ಎಸ್ ಎಸ್ ರಾಜಮೌಳಿ..!!

20 Dec 2018 10:32 AM | Entertainment
201 Report

ಇದೀಗ ಉಪ್ಪಿ ಚಿತ್ರದ ಆಡಿಯೋ ಬಿಡುಗಡೆ ಮಾಡುತ್ತಿರುವುದು ಯಾರು ಗೊತ್ತಾ .. ಅವರೇ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ. 'ನಾನೇ ನೇರವಾಗಿ ಚಿತ್ರದ ಆಡಿಯೋ ಬಿಡುಗಡೆಗೆ ರಾಜಮೌಳಿಯವರನ್ನು ಆಹ್ವಾನಿಸಿದೆ. ಅವರು ಬಳ್ಳಾರಿಯಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಿ ಎಂದು ಹೇಳಿದರು. ನಾನು ದಾವಣಗೆರೆಯಲ್ಲೇ ಮಾಡಬೇಕು ಎಂದಾಗ ಬರುತ್ತೇನೆ ಎಂದು  ಒಪ್ಪಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ‘ಐ ಲವ್ ಯೂ’ ಸಿನಿಮಾ ಬರುತ್ತಿದೆ. ಈ ಕಾರಣಕ್ಕೆ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೇ ಬಹು ಭಾಷೆಗೆ ತಲುಪುವಂತೆ ಮಾಡುತ್ತಿದ್ದೇನೆ. ರಾಜಮೌಳಿ ಬರುವುದು ಖಚಿತವಾಗಿದೆ' ಎಂದು ನಿರ್ದೇಶಕ ಆರ್ ಚಂದ್ರು ಅವರು ತಿಳಿಸಿದರು.

ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರನ್ನೂ ಕರೆತರುವ ಪ್ಲಾನ್ ನಡೆಯುತ್ತಿದೆ. ಉಪೇಂದ್ರ ಅವರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಉಪ್ಪಿ ಸಿನಿಮಾ ಆಡಿಯೋ ಬಿಡುಗಡೆಯಾಗುತ್ತಿರುವುದು ಜ.14ಕ್ಕೆ. ಅದೇ ದಿನ ರಜನಿಕಾಂತ್ ಅವರ 'ಪೆಟ್ಟಾ' ಚಿತ್ರ ತೆರೆ ಕಾಣುತ್ತಿದೆ. ಹೀಗಾಗಿ ರಜನಿಕಾಂತ್ ಬರುವ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ ಆದರೂ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿರುವುದಾಗಿ ಸ್ವತಃ ಉಪೇಂದ್ರ ಅವರೇ ತಿಳಿಸಿದ್ದಾರೆ. ಸಿನಿಮಾದ ಟ್ರೇಲರ್ ಡಿ.30ರಂದು ಬಿಡುಗಡೆಯಾಗುತ್ತಿದೆ. ಫೆಬ್ರವರಿ 14ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಉಪ್ಪಿ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments