ಸಕ್ಸಸ್'ಪುಲ್ ಹೀರೋಹಿನ್ ಮಗಳು ಸ್ಯಾಂಡಲ್'ವುಡ್'ಗೆ ಎಂಟ್ರಿ

19 Dec 2018 12:38 PM | Entertainment
306 Report

ಆ ಕಾಲಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಫಿಟ್ ಹೀರೋಯಿನ್ ಅಂದ್ರೆ ಫಟ್ ಅಂತಾ ಹೇಳ್ತಿದ್ರು ಅದು ಸುಧಾರಾಣಿ ಅಂತಾ ಎಲ್ಲರಿಗೂ ಗೊತ್ತು... ಒಂದಷ್ಟು  ಕಾಲ ಸ್ಯಾಂಡಲ್ವುಡ್ ಆಳಿದ ನಾಯಕಿಯರಲ್ಲಿ ಸುಧಾರಾಣಿ ಕೂಡ ಒಬ್ಬರು. ಶಾಲೆಯಲ್ಲಿ ಓದುವಾಗಲೇ ಆನಂದ್ ಸಿನಿಮಾಗೆ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ಈಗಾಗಲೇ 100 ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಫುಲ್ ನಾಯಕಿಯಾದರು.

ಸದ್ಯ ನಾವೊಂದು ಹೊಸದಾದ ಸುದ್ದಿ ಹೇಳ್ತಿದ್ದೀವಿ. ಅದೇನಪ್ಪಾ ಸುಂದರಿ ಭಪ್ಪರೇ ಭಪ್ಪ ಸುಧಾರಾಣಿ ಯ ಮಗಳು ಸ್ಯಾಂಡಲ್ವುಡ್ ಗೆ ಬರುತ್ತಿದ್ದಾರೆ. ಮಗಳನ್ನು ಪರಿಚಯಿಸ್ತಿದ್ದಾರೆ  ಸ್ಯಾಂಡಲ್ ವುಡ್ ಸುಂದರಿ  . ಅಂದಹಾಗೇ ಸುಧಾರಾಣಿಗೆ ನಿಧಿ ಗೋವರ್ಧನ್ ಎಂಬ ಮಗಳಿದ್ದು ಇದೀಗ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಲು ತೀರ್ಮಾನ ಮಾಡಿದ್ದಾರೆ. ಹೈಸ್ಕೂಲ್  ಓದುವಾಗಲೇ ಚಿತ್ರರಂಗಕ್ಕೆ ಬಂದ ಸುಧಾರಾಣಿಗೆ ಸಮಯದ ಕೊರತೆಯಿಂದ ಎಸ್​​​ಎಸ್​​​ಎಲ್​​ಸಿ ಕೂಡಾ ಮುಗಿಸಲು ಸಾಧ್ಯವಾಗಲಿಲ್ಲ. ಇತ್ತೀಚಿಗೆ ನಿರ್ಮಾಪಕ ಕೆ. ಮಂಜು ಅವರು ತಮ್ಮ ಮಗ ಶ್ರೇಯಸ್ ಅವರ ಮೊದಲ ಸಿನಿಮಾ ’ಪಡ್ಡೆ ಹುಲಿ’ ಚಿತ್ರಕ್ಕೆ ನಿಧಿಯನ್ನು ಕರೆತರಲು ಸುಧಾರಾಣಿ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ ಮೊದಲು ನಿಧಿ ಓದು ಮುಗಿಯಲಿ ಎಂದು ಸುಧಾರಾಣಿ ಆ ಬಗ್ಗೆ ಗಮನ ಹರಿಸಿರಲಿಲ್ಲ. ಸದ್ಯ ಮಗಳಿಗಾಗಿ ಸ್ಯಾಂಡಲ್ ವುಡ್ ಕಾಯುತ್ತಿದೆ. ಅವಕಾಶಗಳು ಮನೆ ಬಾಗಿಲೆಗೆ  ಅರಸಿ ಬರುತ್ತಿವೆ. ಇದೀಗ ನಿಧಿಗೆ ಬರುತ್ತಿರುವ ಅವಕಾಶಗಳಿಂದ ಮನಸೋತ ಸುಧಾರಾಣಿ ಮಗಳನ್ನು ಸ್ಯಾಂಡಲ್​​ವುಡ್​​​​ಗೆ ಪರಿಚಯಿಸಲು  ನಿರ್ಧಾರ ಮಾಡಿದ್ದಾರೆ.. ನಿರ್ದೇಶಕ ಪ್ರೇಮ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲು ನಿಧಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

 

Edited By

Manjula M

Reported By

Manjula M

Comments